AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಟಿಟಿಗೆ ಬರುತ್ತಿದೆ ಅಟ್ಟರ್ ಫ್ಲಾಪ್ ಸಿನಿಮಾ ಎಮರ್ಜೆನ್ಸಿ; ಈಗಲಾದ್ರೂ ಪ್ರೇಕ್ಷಕರು ಮೆಚ್ಚಿಕೊಳ್ತಾರಾ?

ಜನವರಿ 17ರಂದು ‘ಎಮರ್ಜೆನ್ಸಿ’ ಸಿನಿಮಾ ಬಿಡುಗಡೆ ಆಗಿತ್ತು. ಉತ್ತಮ ಕಲೆಕ್ಷನ್ ಮಾಡಲು ಈ ಚಿತ್ರಕ್ಕೆ ಸಾಧ್ಯವಾಗಲಿಲ್ಲ. ಈಗ ಒಟಿಟಿಯಲ್ಲಿ ರಿಲೀಸ್ ಮಾಡಲು ಸಿದ್ಧತೆ ನಡೆದಿದೆ. ಒಟಿಟಿ ರಿಲೀಸ್ ದಿನಾಂಕದ ಬಗ್ಗೆ ನಟಿ, ನಿರ್ದೇಶಕಿ ಕಂಗನಾ ರಣಾವತ್ ಅವರು ಮಾಹಿತಿ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ಇನ್ನಷ್ಟು ವಿವರ..

ಒಟಿಟಿಗೆ ಬರುತ್ತಿದೆ ಅಟ್ಟರ್ ಫ್ಲಾಪ್ ಸಿನಿಮಾ ಎಮರ್ಜೆನ್ಸಿ; ಈಗಲಾದ್ರೂ ಪ್ರೇಕ್ಷಕರು ಮೆಚ್ಚಿಕೊಳ್ತಾರಾ?
Kangana Ranaut
ಮದನ್​ ಕುಮಾರ್​
|

Updated on: Feb 21, 2025 | 4:07 PM

Share

ನಟಿ ಕಂಗನಾ ರಣಾವತ್ ಅವರು ‘ಎಮರ್ಜೆನ್ಸಿ’ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದರು. ಸ್ವತಃ ನಿರ್ದೇಶನ ಮಾಡಿ, ನಿರ್ಮಾಣದಲ್ಲೂ ಪಾಲುದಾರಿಕೆ ಹೊಂದಿದ್ದರು. ಇಂದಿರಾ ಗಾಂಧಿ ಬಯೋಪಿಕ್ ಆಗಿ ಮೂಡಿಬಂದ ಆ ಸಿನಿಮಾದಲ್ಲಿ ಕಂಗನಾ ಅವರು ಇಂದಿರಾ ಗಾಂಧಿಯಾಗಿ ಕಾಣಿಸಿಕೊಂಡಿದ್ದರು. ಬಿಡುಗಡೆಗೂ ಮುನ್ನ ವಿವಾದದ ಮೂಲಕ ಆ ಸಿನಿಮಾ ಸದ್ದು ಮಾಡಿತ್ತು. ಆದರೆ ಬಾಕ್ಸ್ ಆಫೀಸ್​ನಲ್ಲಿ ಮೋಡಿ ಮಾಡಲು ‘ಎಮರ್ಜೆನ್ಸಿ’ ಚಿತ್ರ ವಿಫಲವಾಯಿತು. ಈಗ ಈ ಸಿನಿಮಾ ಒಟಿಟಿಗೆ ಬರುತ್ತಿದೆ.

‘ಎಮರ್ಜೆನ್ಸಿ’ಗೂ ಮುನ್ನ ಕಂಗನಾ ರಣಾವತ್ ನಟಿಸಿದ್ದ ಹಲವು ಸಿನಿಮಾಗಳು ಬ್ಯಾಕ್​ ಟು ಬ್ಯಾಕ್ ಸೋತಿದ್ದವು. ಆದರೆ ‘ಎಮರ್ಜೆನ್ಸಿ’ ಸಾಧಾರಣ ಗಳಿಕೆಯನ್ನಾದರೂ ಮಾಡುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆಗಿದ್ದೇ ಬೇರೆ. ಅಂದಾಜು 60 ಕೋಟಿ ರೂಪಾಯಿ ಬಜೆಟ್​ನಲ್ಲಿ ಮೂಡಿಬಂದ ಆ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಗಳಿಸಿದ್ದು ಕೇವಲ 16.52 ಕೋಟಿ ರೂಪಾಯಿ. ಆ ಮೂಲಕ ಅಟ್ಟರ್​ ಫ್ಲಾಪ್​ ಎನಿಸಿಕೊಂಡಿತು.

ಚಿತ್ರಮಂದಿರದಲ್ಲಿ ಸೋತ ‘ಎಮರ್ಜೆನ್ಸಿ’ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳನ್ನು ‘ನೆಟ್​ಫ್ಲಿಕ್ಸ್’ ಪಡೆದುಕೊಂಡಿದೆ. ಈಗ ಒಟಿಟಿ ರಿಲೀಸ್ ದಿನಾಂಕವನ್ನು ಕಂಗನಾ ರಣಾವತ್ ಅವರು ಬಹಿರಂಗಪಡಿಸಿದ್ದಾರೆ. ಮಾರ್ಚ್​ 17ರಿಂದ ನೆಟ್​ಫ್ಲಿಕ್ಸ್​ನಲ್ಲಿ ಈ ಸಿನಿಮಾ ಪ್ರಸಾರ ಆಗಲಿದೆ. ಥಿಯೇಟರ್​ನಲ್ಲಿ ತೆರೆಕಂಡಾಗ ನೆಗೆಟಿವ್ ವಿಮರ್ಶೆ ಪಡೆದುಕೊಂಡಿದ್ದ ಸಿನಿಮಾಗೆ ಒಟಿಟಿ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬದನ್ನು ಕಾದು ನೋಡಬೇಕು.

ಇದನ್ನೂ ಓದಿ: ಹೋಟೆಲ್ ಉದ್ಯಮಕ್ಕೆ ಕಾಲಿಟ್ಟಿದ ಕಂಗನಾ ರನೌತ್, ಸಿನಿಮಾದಲ್ಲಿ ಲಾಸ್ ಕಾರಣವೇ?

ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಕೇಂದ್ರವಾಗಿಟ್ಟುಕೊಂಡು ‘ಎಮರ್ಜೆನ್ಸಿ’ ಸಿನಿಮಾ ಸಿದ್ಧವಾಗಿದೆ. ಕಂಗನಾ ರಣಾವತ್ ಅವರು ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಆದರೆ ಎಲ್ಲ ವರ್ಗದ ಪ್ರೇಕ್ಷಕರು ಈ ಸಿನಿಮಾ ಬಗ್ಗೆ ಅಷ್ಟೇನೂ ಆಸಕ್ತಿ ತೋರಿಸಲಿಲ್ಲ. ಹಾಗಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಲಾಭ ಆಗಲಿಲ್ಲ. ಈ ಸಿನಿಮಾದಲ್ಲಿ ಅನುಪಮ್ ಖೇರ್​, ಮಿಲಿಂದ್ ಸೋಮನ್, ಸತೀಶ್ ಕೌಶಿಕ್, ಶ್ರೇಯಸ್ ತಲ್ಪಡೆ ಮುಂತಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
ಗಂಟೆಗಟ್ಟಲೆ ಟೈಂ ವೇಸ್ಟ್​ ಮಾಡಿಸಿ ಹೊರಟ ಮಹಿಳೆಯ ಕಾಲಿಗೆ ಬಿದ್ದ ವ್ಯಾಪಾರಿ
ಗಂಟೆಗಟ್ಟಲೆ ಟೈಂ ವೇಸ್ಟ್​ ಮಾಡಿಸಿ ಹೊರಟ ಮಹಿಳೆಯ ಕಾಲಿಗೆ ಬಿದ್ದ ವ್ಯಾಪಾರಿ
ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ಪುರಾತನ ವಸ್ತುಗಳು, ನಿಧಿ ಪತ್ತೆ!
ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ಪುರಾತನ ವಸ್ತುಗಳು, ನಿಧಿ ಪತ್ತೆ!