ವಿಶ್ವಾದ್ಯಂತ ಅಬ್ಬರಿಸುತ್ತಿರುವ ‘ಕೆಜಿಎಫ್​ ಚಾಪ್ಟರ್​ 2’ ಚಿತ್ರದ ಒಟಿಟಿ ರಿಲೀಸ್ ಯಾವಾಗ?  

| Updated By: ರಾಜೇಶ್ ದುಗ್ಗುಮನೆ

Updated on: Apr 14, 2022 | 4:47 PM

‘ಕೆಜಿಎಫ್ 2’ ಬಗ್ಗೆ ಅಪಾರ ನಿರೀಕ್ಷೆ ಇತ್ತು. ಅದು ಹುಸಿಯಾಗಿಲ್ಲ. ಈ ಚಿತ್ರದ ಮೇಕಿಂಗ್ ಸಂಪೂರ್ಣವಾಗಿ ಥಿಯೇಟರ್​ ರಿಲೀಸ್​ಗಾಗಿಯೇ ಮಾಡಿದಂತಿದೆ. ಹೀಗಾಗಿ, ನಿರ್ಮಾಪಕರು ‘ಕೆಜಿಎಫ್​ 2’ನ ಥಿಯೇಟರ್​ನಲ್ಲೇ ಹೆಚ್ಚು ದಿನ ಪ್ರದರ್ಶಿಸಲು ಆಸಕ್ತಿ ತೋರುತ್ತಿದ್ದಾರೆ ಎನ್ನಲಾಗಿದೆ.

ವಿಶ್ವಾದ್ಯಂತ ಅಬ್ಬರಿಸುತ್ತಿರುವ ‘ಕೆಜಿಎಫ್​ ಚಾಪ್ಟರ್​ 2’ ಚಿತ್ರದ ಒಟಿಟಿ ರಿಲೀಸ್ ಯಾವಾಗ?  
ಯಶ್
Follow us on

‘ಕೆಜಿಎಫ್ ಚಾಪ್ಟರ್​ 2’ (KGF Chapter 2) ಎಬ್ಬಿಸಿರುವ ಅಲೆಯನ್ನು ನೋಡಿದರೆ ಅದೆಷ್ಟು ದಾಖಲೆಗಳು ಪುಡಿಯಾಗಿ, ಅದೆಷ್ಟು ಹೊಸ ದಾಖಲೆಗಳು ಹುಟ್ಟಿಕೊಳ್ಳಲಿವೆಯೋ ಗೊತ್ತಿಲ್ಲ. ಅಭಿಮಾನಿಗಳು ನಾಮುಂದು, ತಾಮುಂದು ಎಂದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಯಶ್ (Yash) ಅಭಿಮಾನಿಗಳು ಮೊದಲನೇ ದಿನವೇ ಹಲವು ಬಾರಿ ಸಿನಿಮಾ ವೀಕ್ಷಿಸಿದ್ದಾರೆ. ಸ್ಯಾಂಡಲ್​ವುಡ್ ಮಾತ್ರವಲ್ಲದೆ, ಬಾಲಿವುಡ್ (Bollywood) ಅಂಗಳದಿಂದಲೂ ಸಿನಿಮಾಗೆ ದೊಡ್ಡ ಮಟ್ಟದ ಕಲೆಕ್ಷನ್ ಆಗುವ ನಿರೀಕ್ಷೆ ಇದೆ. ಈ ಮಧ್ಯೆ, ಈ ಚಿತ್ರ ಒಟಿಟಿಗೆ ಯಾವಾಗ ಬರಲಿದೆ ಎನ್ನುವ ಪ್ರಶ್ನೆ ಮೂಡಿದೆ.

‘ಪುಷ್ಪ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿರುವಾಗಲೇ ಒಟಿಟಿಯಲ್ಲಿ ರಿಲೀಸ್ ಆಯಿತು. ‘ಒಟಿಟಿ ವೀಕ್ಷಕರು ಬೇರೆ, ಥಿಯೇಟರ್​ ವೀಕ್ಷಕರು ಬೇರೆ’ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಒಟಿಟಿಯಲ್ಲಿ ರಿಲೀಸ್ ಆದ ನಂತರವೂ ಕೆಲ ದಿನಗಳ ಕಾಲ ‘ಪುಷ್ಪ’ ಥಿಯೇಟರ್​ನಲ್ಲಿ ಪ್ರದರ್ಶನ ಕಂಡಿತ್ತು. ಒಟಿಟಿಯಲ್ಲಿ ಸಿನಿಮಾ ಪ್ರಸಾರವಾದ ಬಳಿಕ ಥಿಯೇಟರ್​ಗೆ ಹೆಚ್ಚಿನ ಪ್ರೇಕ್ಷಕರು ಬಂದಿಲ್ಲ. ಈಗ ‘ಕೆಜಿಎಫ್​ 2’ ಒಟಿಟಿಗೆ ಬರುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

‘ಕೆಜಿಎಫ್ 2’ ಬಗ್ಗೆ ಅಪಾರ ನಿರೀಕ್ಷೆ ಇತ್ತು. ಅದು ಹುಸಿಯಾಗಿಲ್ಲ. ಈ ಚಿತ್ರದ ಮೇಕಿಂಗ್ ಸಂಪೂರ್ಣವಾಗಿ ಥಿಯೇಟರ್​ ರಿಲೀಸ್​ಗಾಗಿಯೇ ಮಾಡಿದಂತಿದೆ. ಹೀಗಾಗಿ, ನಿರ್ಮಾಪಕರು ‘ಕೆಜಿಎಫ್​ 2’ನ ಥಿಯೇಟರ್​ನಲ್ಲೇ ಹೆಚ್ಚು ದಿನ ಪ್ರದರ್ಶಿಸಲು ಆಸಕ್ತಿ ತೋರುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ, ಒಟಿಟಿ ದಿನಾಂಕ ವಿಳಂಬವಾಗಬಹುದು.

ಇನ್ನು, ಕೊವಿಡ್ ಕಡಿಮೆ ಆಗಿದೆ. ಹೀಗಾಗಿ, ಜನರು ಯಾವುದೇ ಅಂಜಿಕೆ ಇಲ್ಲದೆ ಥಿಯೇಟರ್​ ಒಳಗೆ ಕಾಲಿಡುತ್ತಿದ್ದಾರೆ. ‘ಕೆಜಿಎಫ್​ 2’ಗೆ ದೊಡ್ಡ ಹೈಪ್ ಸಿಕ್ಕಿರುವುದರಿಂದ ಈ ಸಿನಿಮಾನ ಚಿತ್ರಮಂದಿರದಲ್ಲಿ ಮಿಸ್ ಮಾಡಿಕೊಳ್ಳುವವರು ತುಂಬಾನೇ ಕಡಿಮೆ. ಮೊಬೈಲ್​, ಲ್ಯಾಪ್​ಟಾಪ್​, ಟಿವಿಗಿಂತ ಥಿಯೇಟರ್​ನಲ್ಲಿ ನೋಡಿದರೆ ಸಿನಿಮಾ ಹೆಚ್ಚು ಎಫೆಕ್ಟೀವ್. ಅದರಲ್ಲೂ ‘ಕೆಜಿಎಫ್ 2’ನಂತಹ ಸಿನಿಮಾಗಳನ್ನು ಥಿಯೇಟರ್​ನಲ್ಲೇ ವೀಕ್ಷಿಸಿದರೆ ಹೆಚ್ಚು ಮನರಂಜನೆ ಸಿಗುತ್ತದೆ. ಹೀಗಾಗಿ, ಬಹುತೇಕರು ಮೊದಲ ವಾರ ಅಲ್ಲದಿದ್ದರೂ, ಎರಡು, ಮೂರನೇ ವಾರದಲ್ಲಿ ಈ ಚಿತ್ರವನ್ನು ಚಿತ್ರಮಂದಿರದಲ್ಲಿ ಕಣ್ತುಂಬಿಕೊಳ್ಳುತ್ತಾರೆ. ಒಂದು ತಿಂಗಳ ಬಳಿಕ ರಿಪೀಟ್ ಆಡಿಯನ್ಸ್​ ಚಿತ್ರಮಂದಿರಕ್ಕೆ ಹೋಗುತ್ತಾರೆ.

ಇನ್ನು, ಸದ್ಯದ ಮಟ್ಟಿಗಂತೂ ಕನ್ನಡದಲ್ಲಿ ಯಾವುದೇ ದೊಡ್ಡ ಬಜೆಟ್ ಸಿನಿಮಾ ತೆರೆಗೆ ಬರುತ್ತಿಲ್ಲ. ಪರಭಾಷೆಯಲ್ಲಿ ದೊಡ್ಡ ಬಜೆಟ್​ನ ಒಂದೆರಡು ಸಿನಿಮಾಗಳು ಮಾತ್ರ ಇವೆ. ಈ ಕಾರಣಕ್ಕೆ ಸಾಕಷ್ಟು ದಿನ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ. ಹೀಗಾಗಿ, ಕೆಲವು ತಿಂಗಳ ಬಳಿಕ ಸಿನಿಮಾ ಅಮೇಜಾನ್ ಪ್ರೈಮ್​ ವಿಡಿಯೋದಲ್ಲಿ ಪ್ರಸಾರ ಕಾಣಬಹುದು.

ಇದನ್ನೂ ಓದಿ: ‘ಕೆಜಿಎಫ್​ 3ನೇ ಪಾರ್ಟ್​ ಬರಲಿದೆ’: ಭವಿಷ್ಯ ನುಡಿದ ಪ್ರೇಕ್ಷಕರು; ಯಶ್​ ಫ್ಯಾನ್ಸ್​ ಹೀಗೆ ಹೇಳ್ತಿರೋದು ಏಕೆ?

KGF Chapter 2 Review: ಕೆಜಿಎಫ್​ ಚಾಪ್ಟರ್​ 2 ವಿಮರ್ಶೆ; ಪ್ರಶಾಂತ್ ನೀಲ್ ಕೈಚಳಕ, ಯಶ್ ಫ್ಯಾನ್ಸ್​ಗೆ ಧಮಾಕ

Published On - 4:44 pm, Thu, 14 April 22