ಮೊದಲ ರಾತ್ರಿಯಲ್ಲಿ ಮಾಡಿದ ಕೆಲಸದ ಬಗ್ಗೆ ಆಲಿಯಾ ಎದುರು ಓಪನ್​ ಆಗಿ ಮಾತನಾಡಿದ ರಣವೀರ್ ಸಿಂಗ್

‘ಕಾಫಿ ವಿತ್ ಕರಣ್​ 7’ನಲ್ಲಿ ಬಿಂಗೋ ಗೇಮ್​ ಆಡಿಸಲಾಯಿತು. ಈ ವೇಳೆ ಲೈಂಗಿಕ ಜೀವನದ ಬಗ್ಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಲಾಯಿತು. ರಣವೀರ್ ಸಿಂಗ್ ಅವರು ಮುಚ್ಚುಮರೆ ಇಲ್ಲದೆ ಆಲಿಯಾ ಎದುರೇ ಉತ್ತರ ನೀಡಿದ್ದಾರೆ.

ಮೊದಲ ರಾತ್ರಿಯಲ್ಲಿ ಮಾಡಿದ ಕೆಲಸದ ಬಗ್ಗೆ ಆಲಿಯಾ ಎದುರು ಓಪನ್​ ಆಗಿ ಮಾತನಾಡಿದ ರಣವೀರ್ ಸಿಂಗ್
ರಣವೀರ್​-ದೀಪಿಕಾ-ಆಲಿಯಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 08, 2022 | 3:37 PM

ರಣವೀರ್ ಸಿಂಗ್ (Rabnveer Singh) ಅವರ ವ್ಯಕ್ತಿತ್ವವೇ ಭಿನ್ನ. ಅವರು ಹಲವು ವಿಚಾರಗಳನ್ನು ಓಪನ್ ಆಗಿ ಮಾತನಾಡುತ್ತಾರೆ. ಸದಾ ಜಾಲಿ ಮೂಡ್​ನಲ್ಲಿರುತ್ತಾರೆ. ಅವರು ಕರಣ್ ಜೋಹರ್ (Karan Johar) ನಡೆಸಿಕೊಡುವ ‘ಕಾಫಿ ವಿತ್ ಕರಣ್  ಸೀಸನ್ 7’ ಶೋನಲ್ಲಿ ಮೊದಲ ಅತಿಥಿಯಾಗಿ ಆಗಮಿಸಿದ್ದರು. ಜುಲೈ 7ರಂದು ಮೊದಲ ಎಪಿಸೋಡ್ ಪ್ರಸಾರವಾಯಿತು. ನೇರವಾಗಿ ಒಟಿಟಿಯಲ್ಲಿ ಪ್ರಸಾರ ಕಂಡ ಈ ಶೋನಲ್ಲಿ ರಣವೀರ್ ಸಿಂಗ್​ಗೆ ಆಲಿಯಾ ಭಟ್ ಸಾತ್​ ನೀಡಿದರು. ಈ ಶೋನಲ್ಲಿ ಫಿಲ್ಟರ್​ಗಳೇ ಇರುವುದಿಲ್ಲ. ರಣವೀರ್ ಸಿಂಗ್ ಕೂಡ ಯಾವುದೇ ಮುಚ್ಚುಮರೆ ಇಲ್ಲದೆ ಮಾತನಾಡಿದ್ದಾರೆ.

ಕರಣ್ ಜೋಹರ್ ಅವರು ಮೊದಲ ರಾತ್ರಿ ಬಗ್ಗೆ ಪ್ರಶ್ನೆ ಕೇಳಿದರು. ಈ ವೇಳೆ ಆಲಿಯಾ ಅವರು ‘ಮೊದಲ ರಾತ್ರಿ ಎಂಬುದೆಲ್ಲ ಇರುವುದಿಲ್ಲ. ಅಂದು ನೀವು ಸುಸ್ತಾಗಿರುತ್ತೀರಿ’ ಎಂದರು. ಇದಕ್ಕೆ ರಣವೀರ್ ಕಡೆಯಿಂದ ಅಚ್ಚರಿಯ ಉತ್ತರ ಬಂತು. ಮೊದಲ ರಾತ್ರಿಯಲ್ಲಿ ತಾವು ಸಖತ್ ಆ್ಯಕ್ಟೀವ್ ಆಗಿದ್ದ ಬಗ್ಗೆ ಅವರು ಹೇಳಿಕೊಂಡಿದ್ದಾರೆ.

‘ಕಾಫಿ ವಿತ್ ಕರಣ್​ 7’ನಲ್ಲಿ ಬಿಂಗೋ ಗೇಮ್​ ಆಡಿಸಲಾಯಿತು. ಈ ವೇಳೆ ಲೈಂಗಿಕ ಜೀವನದ ಬಗ್ಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಲಾಯಿತು. ರಣವೀರ್ ಸಿಂಗ್ ಅವರು ಮುಚ್ಚುಮರೆ ಇಲ್ಲದೆ ಆಲಿಯಾ ಎದುರೇ ಉತ್ತರ ನೀಡಿದ್ದಾರೆ. ‘ನಾನು ಮೊದಲ ರಾತ್ರಿಯಲ್ಲಿ ಲೈಂಗಿಕ ಸಂಪರ್ಕ ನಡೆಸಿದ್ದೇನೆ’ ಎಂದು ರಣವೀರ್ ಸಿಂಗ್ ಹೇಳಿಕೊಂಡಿದ್ದಾರೆ. ‘ಮದುವೆ ಕಾರ್ಯಗಳನ್ನು ಮಾಡಿ ಸುಸ್ತು ಆಗಿರಲಿಲ್ಲವೇ’ ಎಂದು ಕರಣ್ ಪ್ರಶ್ನೆ ಮಾಡಿದರು. ಇದಕ್ಕೆ ರಣವೀರ್ ಸಿಂಗ್ ಉತ್ತರಿಸಿ, ‘ನಾನು ರಾತ್ರಿ ಸಖತ್ ಆ್ಯಕ್ಟೀವ್ ಆಗಿದ್ದೆ’ ಎಂದಿದ್ದಾರೆ.

ಇದನ್ನೂ ಓದಿ:  ಮೊದಲ ರಾತ್ರಿ ಎಂಬುದೆಲ್ಲ ಇರುವುದಿಲ್ಲ, ಏಕೆಂದರೆ ನೀವು ಸುಸ್ತಾಗಿರುತ್ತೀರಿ ಎಂದ ಆಲಿಯಾ ಭಟ್

ಈ ಶೋನಲ್ಲಿ ರಣವೀರ್ ಸಿಂಗ್ ಮಿಮಿಕ್ರಿ ಮಾಡಿದರು. ಹೃತಿಕ್ ರೋಷನ್, ಧರ್ಮೇಂದ್ರ, ಕಾರ್ತಿಕ್​ ಆರ್ಯನ್, ವರುಣ್ ಧವನ್ ಹಾಗೂ ಆಮಿರ್ ಖಾನ್ ಅವರು ಮಾತನಾಡುವುದನ್ನು ಅನುಕರಿಸಿ ತೋರಿಸಿದರು. ರ್ಯಾಪಿಡ್ ಫೈರ್​ನಲ್ಲಿ ಅವರು ಹ್ಯಾಂಪರ್ ಕೂಡ ಗೆದ್ದರು.

2018ರಲ್ಲಿ ರಣವೀರ್ ಹಾಗೂ ದೀಪಿಕಾ ಇಟಲಿಯಲ್ಲಿ ಮದುವೆ ಆದರು. ಅವರು ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಇತ್ತೀಚೆಗೆ ರಣವೀರ್ ಸಿಂಗ್ ಬರ್ತ್​ಡೇ ಆಚರಿಸಿಕೊಂಡರು. ದೀಪಿಕಾ ಜತೆ ಅವರು ಹುಟ್ಟುಹಬ್ಬವನ್ನು ಅಮೆರಿಕದಲ್ಲಿ ಆಚರಿಸಿದ್ದಾರೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ