‘ಕಾಫಿ ವಿತ್ ಕರಣ್’​​ ಕೊನೆ ಸೀಸನ್ನಿಗೆ ಬರುವ ಅತಿಥಿಗಳ ಪಟ್ಟಿ ದೊಡ್ಡದಿದೆ

ಬಾಲಿವುಡ್​​ ಸ್ಟಾರ್ ನಟ-ನಟಿಯರನ್ನು ಆಹ್ವಾನಿಸಿ ಅವರೊಟ್ಟಿಗೆ ಹಲವು ವಿಷಯಗಳನ್ನು ಕರಣ್ ಚರ್ಚೆ ಮಾಡುತ್ತಿದ್ದರು. ಶೋ ಭಾರಿ ಜನಪ್ರಿಯತೆ ಗಳಿಸಿತು. ಸಾಕಷ್ಟು ವಿವಾದಗಳಿಗೂ ಸಹ ಕಾರಣವಾಯ್ತು. ಈ ಶೋ ಇಂದಾಗಿ ಹಲವು ಜೋಡಿಗಳು ಬೇರ್ಪಟ್ಟರೆ, ಕೆಲವರು ಒಂದಾದರು. ಈ ವರೆಗೆ ‘ಕಾಫಿ ವಿತ್ ಕರಣ್’ನ ಎಂಟು ಸೀಸನ್ ಪ್ರಸಾರವಾಗಿದ್ದು, ಇದೀಗ ಒಂಬತ್ತನೇ ಸೀಸನ್ ಪ್ರಸಾರ ಆಗಲಿದೆ. ಇದು ‘ಕಾಫಿ ವಿತ್ ಕರಣ್’ನ ಕೊನೆಯ ಸೀಸನ್ ಆಗಿದೆ.

‘ಕಾಫಿ ವಿತ್ ಕರಣ್’​​ ಕೊನೆ ಸೀಸನ್ನಿಗೆ ಬರುವ ಅತಿಥಿಗಳ ಪಟ್ಟಿ ದೊಡ್ಡದಿದೆ
Karan Johar

Updated on: Oct 09, 2026 | 11:31 AM

ಮುಖ್ಯಾಂಶಗಳು

  • ಕಾಫಿ ವಿತ್ ಕರಣ್​​ಗೆ ಈ ಬಾರಿ ಹಲವು ಅತಿಥಿಗಳು
  • ಯುವ ನಟರ ಜೊತೆಗೆ ಹಿರಿಯ ನಟ-ನಟಿಯರೂ ಸಹ
  • ಇಲ್ಲಿದೆ ನೋಡಿ ಅತಿಥಿಗಳ ಪಟ್ಟಿ

ಬಾಲಿವುಡ್​​ನ ಸ್ಟಾರ್ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ 22 ವರ್ಷಗಳ ಹಿಂದೆ ಪ್ರಾರಂಭಿಸಿದ್ದ ಭಾರತದ ಮೊದಲ ಸೆಲೆಬ್ರಿಟಿ ಟಾಕ್ ಶೋ ‘ಕಾಫಿ ವಿತ್ ಕರಣ್’. ಬಾಲಿವುಡ್​​ ಸ್ಟಾರ್ ನಟ-ನಟಿಯರನ್ನು ಆಹ್ವಾನಿಸಿ ಅವರೊಟ್ಟಿಗೆ ಹಲವು ವಿಷಯಗಳನ್ನು ಕರಣ್ ಚರ್ಚೆ ಮಾಡುತ್ತಿದ್ದರು. ಶೋ ಭಾರಿ ಜನಪ್ರಿಯತೆ ಗಳಿಸಿತು. ಸಾಕಷ್ಟು ವಿವಾದಗಳಿಗೂ ಸಹ ಕಾರಣವಾಯ್ತು. ಈ ಶೋ ಇಂದಾಗಿ ಹಲವು ಜೋಡಿಗಳು ಬೇರ್ಪಟ್ಟರೆ, ಕೆಲವರು ಒಂದಾದರು. ಈ ವರೆಗೆ ‘ಕಾಫಿ ವಿತ್ ಕರಣ್’ನ ಎಂಟು ಸೀಸನ್ ಪ್ರಸಾರವಾಗಿದ್ದು, ಇದೀಗ ಒಂಬತ್ತನೇ ಸೀಸನ್ ಪ್ರಸಾರ ಆಗಲಿದೆ. ಇದು ‘ಕಾಫಿ ವಿತ್ ಕರಣ್’ನ ಕೊನೆಯ ಸೀಸನ್ ಆಗಿದೆ.

‘ಕಾಫಿ ವಿತ್ ಕರಣ್​’ ಶೋನ ಕೊನೆಯ ಸೀಸನ್​​ನಲ್ಲಿ ಹಲವಾರು ಅತಿಥಿಗಳನ್ನು ಕರಣ್ ಶೋಗೆ ಆಹ್ವಾನಿಸಿದ್ದು, ಈ ಬಾರಿ ಅತಿಥಿಗಳ ಪಟ್ಟಿ ತುಸು ದೊಡ್ಡದಾಗಿಯೇ ಇದೆ. ಈ ಬಾರಿ ವಿಶೇಷವಾಗಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಈ ಸೀಸನ್ನಿನ ಮೊದಲ ಎಪಿಸೋಡಿನಲ್ಲಿ ಇವರೇ ಅತಿಥಿಗಳಾಗಿರಲಿದ್ದು, ಇವರ ಎಪಿಸೋಡಿನ ಶೂಟಿಂಗ್ ಸಹ ಮುಗಿದಿದೆ ಎನ್ನಲಾಗುತ್ತಿದೆ.

ಇವರ ಹೊರತಾಗಿ ಬಾಲಿವುಡ್​​ನ ಹಲವಾರು ಸ್ಟಾರ್ ನಟ-ನಟಿಯರು ಈ ಬಾರಿ ‘ಕಾಫಿ ವಿತ್ ಕರಣ್’ನಲ್ಲಿ ಭಾಗಿ ಆಗಲಿದ್ದಾರೆ. ಕಳೆದ ಸೀಸನ್ನಿನಲ್ಲಿ ಭಾಗಿ ಆಗಿದ್ದ ಜಾನ್ಹವಿ ಕಪೂರ್, ಅನನ್ಯಾ ಅವರುಗಳು ಈ ಬಾರಿಯೂ ಅತಿಥಿಗಳಾಗಿ ಬರಲಿದ್ದಾರೆ. ಈ ಬಾರಿ ಆಲಿಯಾ ಭಟ್ ಅವರು ನಟಿ ಶರ್ವರಿ ವಾಘ್ ಜೊತೆಗೆ ಸೇರಿಕೊಂಡು ಅತಿಥಿಗಳಾಗಿ ಎಂಟ್ರಿ ಕೊಡಲಿದ್ದಾರೆ. ಜಾನ್ಹವಿ ಕಪೂರ್, ವರುಣ್ ಧವನ್ ಜೊತೆಗೆ ಶೋಗೆ ಬರಲಿದ್ದಾರೆ. ಇವರ ಜೊತೆಗೆ ಸೈಫ್ ಅಲಿ ಖಾನ್, ಮತ್ತೊಬ್ಬ ಬಾಲಿವುಡ್ ನಟಿ ಆಲಿಯಾ ಎಫ್​​, ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರುಗಳು ಸಹ ಭಾಗಿ ಆಗಲಿದ್ದಾರೆ.

ಇದನ್ನೂ ಓದಿ:ಬಾಯ್​​ಫ್ರೆಂಡ್ ಜೊತೆ ಕರಣ್ ಜೋಹರ್​​ ಶೋಗೆ ಬರಲಿರುವ ಜಾನ್ಹವಿ ಕಪೂರ್

ಸಿನಿಮಾ ತಾರೆಯರ ಜೊತೆಗೆ ಸಾಮಾಜಿಕ ಜಾಲತಾಣದ ತಾರೆಯರಾದ ಓರಿ, ಸಮಯ್ ರೈನಾ, ಪ್ರಾಜಕ್ತಾ ಕೋಲಿ, ಭುವನ್ ಭಮ್ ಇನ್ನೂ ಹಲವರು ಈ ಬಾರಿ ಭಾಗವಹಿಸುವ ಸಾಧ್ಯತೆ ಇದೆ. ಇವರುಗಳ ಜೊತೆಗೆ ಕೆಲವು ದೊಡ್ಡ ತಾರೆಯರು ಸಹ ಅತಿಥಿಗಳಾಗಿ ಬರಲಿದ್ದಾರೆ ಎನ್ನಲಾಗುತ್ತಿದೆ. ‘ಕಾಫಿ ವಿತ್ ಕರಣ್​’ ಮೊದಲ ಸೀಸನ್ನಿಗೆ ಅತಿಥಿಯಾಗಿ ಬಂದಿದ್ದ ಶಾರುಖ್ ಖಾನ್ ಅವರು ಕೊನೆಯ ಸೀಸನ್ನಿಗೂ ಅತಿಥಿ ಆಗಿ ಬರಲಿದ್ದಾರೆ ಎನ್ನಲಾಗುತ್ತಿದೆ. ಯುವ ನಟ-ನಟಿಯರ ಜೊತೆಗೆ ಕೆಲವು ಹಿರಿಯ ನಟ-ನಟಿಯರು ಸಹ ಶೋಗೆ ಬರಲಿದ್ದಾರೆ ಎನ್ನಲಾಗುತ್ತಿದೆ. ‘ಕಾಫಿ ವಿತ್ ಕರಣ್’ ಶೋನ ಒಂಬತ್ತನೇ ಮತ್ತು ಕೊನೆಯ ಸೀಸನ್ ಅಕ್ಟೋಬರ್ 14 ರಿಂದ ಜಿಯೋ ಹಾಟ್​​ಸ್ಟಾರ್​​ನಲ್ಲಿ ಪ್ರಸಾರ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us