‘ದೃಶ್ಯಂ’ ರೀತಿಯ ಈ ಸಿನಿಮಾ ಒಟಿಟಿಯಲ್ಲಿ ಮಿಸ್ ಮಾಡಬೇಡಿ; ಕನ್ನಡದಲ್ಲೂ ವೀಕ್ಷಣೆ ಲಭ್ಯ

Thudarum OTT Release Date: ಮೋಹನ್​ಲಾಲ್ ಅವರ ‘ತುಡರುಮ್’ ಚಿತ್ರವು ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಕೇರಳದಲ್ಲಿ ಭಾರಿ ಯಶಸ್ಸು ಕಂಡ ಈ ಚಿತ್ರವು ‘ದೃಶ್ಯಂ’ ಚಿತ್ರಕ್ಕೆ ಹೋಲಿಸಿದ್ದಾರೆ. ಜಿಯೋ ಹಾಟ್‌ಸ್ಟಾರ್‌ನಲ್ಲಿ ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ವೀಕ್ಷಣೆಗೆ ಲಭ್ಯವಾಗಲಿದೆ. ಈ ಚಿತ್ರವನ್ನು ಕನ್ನಡದಲ್ಲಿಯೂ ವೀಕ್ಷಿಸಬಹುದು.

‘ದೃಶ್ಯಂ’ ರೀತಿಯ ಈ ಸಿನಿಮಾ ಒಟಿಟಿಯಲ್ಲಿ ಮಿಸ್ ಮಾಡಬೇಡಿ; ಕನ್ನಡದಲ್ಲೂ ವೀಕ್ಷಣೆ ಲಭ್ಯ
ತುಡರಮ್

Updated on: May 27, 2025 | 7:05 AM

ಮಲಯಾಳಂ ಸೂಪರ್​ಸ್ಟಾರ್ ಮೋಹನ್​ಲಾಲ್ (Mohanlal) ಅವರು ಈ ವರ್ಷ ಬ್ಯಾಕ್ ಟು ಬ್ಯಾಕ್ ಯಶಸ್ಸು ಕಂಡರು. ‘ಎಲ್​2: ಎಂಪುರಾನ್’ ಸಿನಿಮಾ ಮೊದಲು ರಿಲೀಸ್ ಆಗಿ ಯಶಸ್ಸು ಕಂಡಿತು. ಈ ಚಿತ್ರ ಈಗ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ. ಈಗ ಅವರ ನಟನೆಯ ‘ತುಡರುಮ್’ ಸಿನಿಮಾ ಒಟಿಟಿಗೆ ಲಗ್ಗೆ ಇಡೋಕೆ ರೆಡಿ ಆಗಿದೆ. ಈ ಸಿನಿಮಾನ ಅನೇಕರು ‘ದೃಶ್ಯಂ’ ಚಿತ್ರಕ್ಕೆ ಹೋಲಿಕೆ ಮಾಡಿದ್ದಾರೆ. ಜಿಯೋ ಹಾಟ್​ಸ್ಟಾರ್​ನಲ್ಲಿ ಮೋಹನ್​ಲಾಲ್ ಚಿತ್ರ ಪ್ರಸಾರ ಕಾಣಲಿದೆ.

‘ತುಡರುಮ್’ ಸಿನಿಮಾ ಏಪ್ರಿಲ್ 25ರಂದು ಥಿಯೇಟರ್​ನಲ್ಲಿ ರಿಲೀಸ್ ಆಯಿತು. ಕೇರಳದಲ್ಲೇ ಈ ಚಿತ್ರ 100 ಕೋಟಿ ರೂಪಾಯಿ ಗಳಿಕೆ ಮಾಡಿದರೆ, ವಿಶ್ವಾದ್ಯಂತ 230 ಕೋಟಿ ರೂಪಾಯಿ ಬಾಚಿಕೊಂಡಿದೆ. ಇದು ಮಲಯಾಳಂ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮೂರನೇ ಸಿನಿಮಾ ಎನ್ನುವ ಖ್ಯಾತಿ ಪಡೆದಿದೆ. ಈ ಸಿನಿಮಾ ಇನ್ನೂ ಥಿಯೇಟರ್​ನಲ್ಲಿ ಓಡುತ್ತಿರುವಾಗಲೇ ಒಟಿಟಿ ವೀಕ್ಷಕರನ್ನು ರಂಜಿಸಲು ರೆಡಿ ಆಗಿದೆ.

ಇದನ್ನೂ ಓದಿ
‘ಸರಿಗಮಪ’ ಫಿನಾಲೆಯಲ್ಲಿ ಇಲ್ಲ ಲಹರಿ ಮಹೇಶ್; ಅಭಿಮಾನಿಗಳ ಆಕ್ರೋಶ
‘ಸೀತಾ ರಾಮ’ ಧಾರಾವಾಹಿಗೆ ವಿದಾಯದ ಸಂಚಿಕೆ; ಸೀತಾಗೆ ಗನ್​ ಹಿಡಿದ ಭಾರ್ಗವಿ
‘ಕುಬೇರ’ ಟೀಸರ್: ಪಕ್ಕಾ ಮಿಡಲ್ ಕ್ಲಾಸ್ ಹುಡುಗಿಯಾದ ರಶ್ಮಿಕಾ; ಗ್ಲಾಮರ್ ಮಾಯ
‘ಸರಿಗಮಪ’ ಫೈನಲಿಸ್ಟ್ ಇವರೇ ನೋಡಿ; ಫಿನಾಲೆ ಮತ್ತಷ್ಟು ಕಠಿಣ

ಮೇ ಮೂರನೇ ವಾರದಲ್ಲೇ ‘ತುಡರುಮ್’ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗಬೇಕಿತ್ತು. ಆದರೆ, ಥಿಯೇಟರ್​ನಲ್ಲಿ ಸಿನಿಮಾ ಇನ್ನೂ ಒಳ್ಳೆಯ ಗಳಿಕೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಒಟಿಟಿ ರಿಲೀಸ್​ನ ತಂಡದವರು ಒಂದು ವಾರ ಮುಂದಕ್ಕೆ ಹಾಕಿಕೊಂಡರು ಈಗ ಹಾಟ್​ಸ್ಟಾರ್ ಕಡೆಯಿಂದ ಸಿನಿಮಾ ಒಟಿಟಿ ರಿಲೀಸ್ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಜೀಯೋ ಹಾಟ್​​ಸ್ಟಾರ್​ನಲ್ಲಿ ‘ತುಡರುಮ್’ ಸಿನಿಮಾ ಮೇ 30ರಂದು ರಿಲೀಸ್ ಆಗಲಿದೆ.

ಇದನ್ನೂ ಓದಿ: ನಟ ಮೋಹನ್​ಲಾಲ್​ಗೆ 65, ಬಿಡುಗಡೆ ಆಗಲಿದೆ ನಟನ ಜೀವನ ಚರಿತ್ರೆ

ಮಲಯಾಳಂ ಸಿನಿಮಾಗಳಿಗೆ ಇತ್ತೀಚೆಗೆ ಒಳ್ಳೆಯ ಮಾರುಕಟ್ಟೆ ಸೃಷ್ಟಿ ಆಗಿದೆ. ಕರ್ನಾಟಕದಲ್ಲೂ ಮಲಯಾಳಂನ ಉತ್ತಮ ಸಿನಿಮಾಗಳನ್ನು ವೀಕ್ಷಿಸುತ್ತಾರೆ. ಈಗ ‘ತುಡರುಮ್’ ಕರ್ನಾಟಕದಲ್ಲಿ ಒಳ್ಳೆಯ ಪ್ರದರ್ಶನ ಕಂಡಿದ್ದು,  ಒಟಿಟಿಯಲ್ಲಿ ಹೆಚ್ಚಿನ ವೀಕ್ಷಣೆ ಆಗುವ ಸಾಧ್ಯತೆ ಇದೆ. ವಿಸೇಷ ಎಂದರೆ ಈ ಚಿತ್ರ ಕನ್ನಡದಲ್ಲೂ ವೀಕ್ಷಣೆ ಲಭ್ಯವಿದೆ.

‘ತುಡರುಮ್’ ಚಿತ್ರದ ಕಥೆ ಏನು?

‘ದೃಶ್ಯಂ’ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬಂದಿತ್ತು. ‘ತುಡರುಮ್’ ಚಿತ್ರವೂ ಇದೇ ಶೈಲಿಯಲ್ಲಿ ಮೂಡಿ ಬಂದಿದೆ. ಇದು ಕೂಡ ಕೌಟುಂಬಿಕ ಕಥೆಯನ್ನು ಹೊಂದಿದೆ. ಮೋಹನ್​ಲಾಲ್ ಅವರು ಟ್ಯಾಕ್ಸಿ ಡ್ರೈವರ್ ಪಾತ್ರ ಮಾಡಿದ್ದಾರೆ. ಅವರ ಮನಗ ಕಿಡ್ನ್ಯಾಪ್ ಆಗುತ್ತದೆ. ಈ ಅಪಹರಣ ನಡೆಯಲು ಕಾರಣ ಏನು? ಮುಂದೆ ಏನಾಗುತ್ತದೆ ಎಂಬುದು ಚಿತ್ರದ ಕಥೆ. ಈ ಸಿನಿಮಾದಲ್ಲಿ ಶೋಭನಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 7:03 am, Tue, 27 May 25