AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟ ಮೋಹನ್​ಲಾಲ್​ಗೆ 65, ಬಿಡುಗಡೆ ಆಗಲಿದೆ ನಟನ ಜೀವನ ಚರಿತ್ರೆ

Mohanlal: ನಟ ಮೋಹನ್​ಲಾಲ್ ಹುಟ್ಟುಹಬ್ಬ ಇಂದು (ಮೇ 21). ಇಂದಿಗೆ ಅವರಿಗೆ 65 ವರ್ಷ ವಯಸ್ಸು. ಅಭಿಮಾನಿಗಳು, ಸಹ ನಟ-ನಟಿಯರು ಅದ್ಧೂರಿಯಾಗಿ ಮೋಹನ್​ಲಾಲ್ ಹುಟ್ಟುಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ. ನಟ ಮೋಹನ್​ಲಾಲ್ ತಮ್ಮ ಜೀವನಚರಿತ್ರೆ ಬಗ್ಗೆ ವಿಡಿಯೋ ಅಪ್​ಲೊಡ್ ಮಾಡಿದ್ದಾರೆ. ಪುಸ್ತಕ ಬಿಡುಗಡೆ ಆಗುವ ದಿನಾಂಕವನ್ನು ಪ್ರಕಟಿಸಿದ್ದಾರೆ.

ನಟ ಮೋಹನ್​ಲಾಲ್​ಗೆ 65, ಬಿಡುಗಡೆ ಆಗಲಿದೆ ನಟನ ಜೀವನ ಚರಿತ್ರೆ
Mohanlal
ಮಂಜುನಾಥ ಸಿ.
|

Updated on: May 21, 2025 | 4:42 PM

Share

ಮಲಯಾಳಂ (Malayalam) ಚಿತ್ರರಂಗದ ಸ್ಟಾರ್ ನಟ ಮೋಹನ್​ಲಾಲ್​ಗೆ (Mohanlal) ವಯಸ್ಸು 65 ಆಯ್ತು. ವಯಸ್ಸು ಆದಷ್ಟು ಚಿತ್ರರಂಗದಲ್ಲಿ ಹಿಟ್ ಮೇಲೆ ಹಿಟ್ ನೀಡುತ್ತಲೇ ಸಾಗುತ್ತಿದ್ದಾರೆ. ಕಳೆದ ಎಂಟು ತಿಂಗಳಲ್ಲಿ ಮೋಹನ್​ಲಾಲ್ ನಟನೆಯ 4 ಸಿನಿಮಾಗಳು ಬಿಡುಗಡೆ ಆಗಿದ್ದು, ಅವುಗಳಲ್ಲಿ ಮೂರು ಬ್ಲಾಕ್ ಬಸ್ಟರ್ ಮತ್ತು ಒಂದು ಸಿನಿಮಾ ಸೂಪರ್ ಹಿಟ್. ಮೋಹನ್​ಲಾಲ್​ರ ಈ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ. ಇದರ ಜೊತೆಗೆ ಮೋಹನ್​ಲಾಲ್ ಜೀವನ ಕತೆಯ ಪುಸ್ತಕ ಸಹ ಬಿಡುಗಡೆ ಆಗಲಿರುವುದು ವಿಶೇಷ.

ಮೋಹನ್​ಲಾಲ್ ಅವರ ಜೀವನ ಚರಿತ್ರೆ ಬಿಡುಡಗೆ ಆಗುವ ಬಗ್ಗೆ ಕಳೆದ ಕೆಲ ವರ್ಷಗಳಿಂದಲೂ ಅಲ್ಲಲ್ಲಿ ಸುದ್ದಿಗಳು ಹರಿದಾಡುತ್ತಲೇ ಇತ್ತು. ಇದೀಗ ಪುಸ್ತಕ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಾಗಿದೆ. ಪುಸ್ತಕಕ್ಕೆ ‘ಮುಖರಾಗಮ್’ ಎಂದು ಹೆಸರಿಟ್ಟಿದ್ದು ಪುಸ್ತಕ ಡಿಸೆಂಬರ್ 25, 2025 ಕ್ಕೆ ಬಿಡುಗಡೆ ಆಗಲಿದೆ. 2019 ರಿಂದಲೂ ಈ ಪುಸ್ತಕದ ಮೇಲೆ ಕೆಲಸ ಮಾಡುತ್ತಿದ್ದಾರೆ ಲೇಖಕ ಭಾನುಪ್ರಕಾಶ್.

ಈ ಬಗ್ಗೆ ಟ್ವಿಟ್ಟರ್​ನಲ್ಲಿ ಸ್ವತಃ ಮಾಹಿತಿ ಹಂಚಿಕೊಂಡಿರುವ ನಟ ಮೋಹನ್​ಲಾಲ್, ನನ್ನ 47 ವರ್ಷಗಳ ಸಿನಿಮಾ ಪಯಣದ ಕತೆ ಪುಸ್ತಕದಲ್ಲಿ ಇರಲಿದೆ. ಈ ಪುಸ್ತಕ 1000 ಪುಟಗಳ ಪುಸ್ತಕವಾಗಿರಲಿದ್ದು, ಜೀವನದ ಪ್ರತಿ ವಿಷಯ, ಘಟನೆಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿರಲಿದೆ ಎಂದಿದ್ದಾರೆ. ಅಲ್ಲದೆ ಖ್ಯಾತ ಲೇಖಕ ವಾಸುದೇವ ನಾಯರ್ ಅವರು ಈ ಪುಸ್ತಕಕ್ಕೆ ಮುನ್ನಡಿ ಬರೆಯಲಿರುವ ವಿಷಯವನ್ನೂ ಅವರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಒಂದೇ ವರ್ಷ ಮೋಹನ್​ಲಾಲ್ ನಟನೆಯ 34 ಚಿತ್ರಗಳು ರಿಲೀಸ್; 25 ಸೂಪರ್ ಹಿಟ್

ಮೋಹನ್​ಲಾಲ್ ಅವರು ಸಿನಿಮಾಕ್ಕೆ ಬರುವ ಮೊದಲು ರಾಜ್ಯ ಮಟ್ಟದ ಕುಸ್ತಿಪಟು ಆಗಿದ್ದರು. ಆ ಬಳಿಕ ತಮ್ಮ ಕೆಲ ಗೆಳೆಯರನ್ನು ಸೇರಿಸಿಕೊಂಡು ಸಿನಿಮಾ ಒಂದನ್ನು ನಿರ್ಮಿಸಿ ಅವರೇ ನಟಿಸಿದ್ದರು. ಆದರೆ ಸೆನ್ಸಾರ್ ಸಮಸ್ಯೆಯಿಂದಾಗಿ ಆ ಸಿನಿಮಾ ಬಿಡುಗಡೆ ಆಗಲಿಲ್ಲ. ಅಂದಹಾಗೆ ಆ ಗೆಳೆಯರ ಗುಂಪಿನಲ್ಲಿ ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಸಹ ಇದ್ದರು. ಆ ನಂತರ ಚಿತ್ರರಂಗಕ್ಕೆ ಬಂದ ಮೋಹನ್​ಲಾಲ್​ಗೆ ಸಿಕ್ಕಿದ್ದೆಲ್ಲ ವಿಲನ್ ರೋಲ್​ಗಳೇ. ಮೊದಲ ಅವಕಾಶ ಕೊಟ್ಟಿದ್ದು ಈಗಿನ ಸ್ಟಾರ್ ನಟ ಫಹಾದ್ ಫಾಸಿಲ್ ತಂದೆ ಫಾಸಿಲ್. ಮೊದಲ 25 ಸಿನಿಮಾಗಳಲ್ಲಿ ವಿಲನ್ ಆಗಿಯೇ ನಟಿಸಿದ್ದ ಮೋಹನ್​ಲಾಲ್ ಆ ನಂತರ ನಾಯಕ ನಟನಾಗಿ ಬಡ್ತಿ ಪಡೆದರು ಬಳಿಕ ಹಿಂತಿರುಗಿ ನೋಡಿದ್ದೇ ಇಲ್ಲ. ಕಳೆದ ಮೂವತ್ತು ವರ್ಷಗಳಿಂದಲೂ ಮಲಯಾಳಂ ಚಿತ್ರರಂಗವನ್ನು ಆಳುತ್ತಿದ್ದಾರೆ ಮೋಹನ್​ಲಾಲ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ