ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಸಿನಿಮಾನಲ್ಲಿ ಐಟಂ ಹಾಡು, ನಟ ಮಾಡಿದ್ದೇನು?
Hari Hara Veera Mallu: ಪವನ್ ಕಲ್ಯಾಣ್ ಈಗ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ. ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಅವರ ಮೇಲಿರುವ ಸಾಮಾಜಿಕ ಜವಾಬ್ದಾರಿಯೂ ದೊಡ್ಡದು. ಅವರ ‘ಹರಿ ಹರ ವೀರ ಮಲ್ಲು’ ಸಿನಿಮಾ ಬಿಡುಗಡೆ ಆಗುತ್ತಿದ್ದು, ಸಿನಿಮಾನಲ್ಲಿ ಐಟಂ ಹಾಡೊಂದಿದೆ. ಅದೊಂದು ವಿವಾದ ಆಗುವ ಮುಂಚೆಯೇ ಸೂಕ್ಷ್ಮವಾಗಿ ವಿಷಯವನ್ನು ನಿಭಾಯಿಸಿದ್ದಾರೆ ಪವನ್ ಕಲ್ಯಾಣ್.

ಜವಾಬ್ದಾರಿಯುತ ಸ್ಥಾನಕ್ಕೆ ಏರಿದ ಮೇಲೆ ಕೆಲವು ನಿಯಮಗಳನ್ನು ಪಾಲಿಸಲೇ ಬೇಕಾಗುತ್ತದೆ. ಇತ್ತೀಚೆಗಷ್ಟೆ ನಟ ನಂದಮೂರಿ ಬಾಲಕೃಷ್ಣಗೆ (Nandamuri Balakrishna) ಪದ್ಮ ಪ್ರಶಸ್ತಿ ನೀಡಲಾಯ್ತು. ಅದರ ಬೆನ್ನಲ್ಲೆ, ಪದ್ಮ ಪ್ರಶಸ್ತಿ ತೆಗೆದುಕೊಂಡಿರುವ ವ್ಯಕ್ತಿ ಮ್ಯಾನ್ಷನ್ ಹೌಸ್ ಮದ್ಯದ ಬ್ರ್ಯಾಂಡ್ ಅನ್ನು ಪ್ರಚಾರ ಮಾಡುವುದು ಸರಿಯಲ್ಲ ಎಂಬ ಚರ್ಚೆ ಆರಂಭ ಗೊಂಡಿದೆ. ಬಾಲಯ್ಯ ನಡೆಸಿಕೊಡುವ ಜನಪ್ರಿಯ ಟಾಕ್ ಶೋಗೆ ಮ್ಯಾನ್ಷನ್ ಹೌಸ್ ಪ್ರಯೀಜಕತ್ವ ನೀಡಿದೆ. ಅದರ ವಿವಾದದ ಬೆನ್ನಲ್ಲೆ ಈಗ ಪವನ್ ಕಲ್ಯಾಣ್ ಸಿನಿಮಾದಲ್ಲಿ ಐಟಂ ಹಾಡಿನ ಬಗ್ಗೆ ಚರ್ಚೆ ಎದ್ದಿದೆ. ಆದರೆ ಅದು ವಿವಾದದ ರೂಪ ಪಡೆಯುವ ಮುಂಚೆಯೇ ಮುನ್ನೆಚ್ಚರಿಕೆಯಿಂದ ವಿಷಯವನ್ನು ಸೂಕ್ಷ್ಮವಾಗಿ ನಿಭಾಯಿಸಿದ್ದಾರೆ ನಟ ಪವನ್ ಕಲ್ಯಾಣ್.
ಆಂಧ್ರ ಪ್ರದೇಶ ಡಿಸಿಎಂ ಸಹ ಆಗಿರುವ ಪವನ್ ಕಲ್ಯಾಣ್ ಅವರು ‘ಹರಿ ಹರ ವೀರ ಮಲ್ಲು’ ಸಿನಿಮಾನಲ್ಲಿ ನಟಿಸಿದ್ದು ಈ ಸಿನಿಮಾ ಜೂನ್ 12 ರಂದು ತೆರೆಗೆ ಬರಲಿದೆ. ಸಿನಿಮಾದ ಕೆಲ ಹಾಡುಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಆದರೆ ಸಿನಿಮಾನಲ್ಲಿ ಒಂದು ಐಟಂ ಹಾಡು ಸಹ ಇದೆ. ‘ತಾರಾ.. ತಾರಾ’ ಎಂಭ ಐಟಂ ಹಾಡು ಅದು. ಎಲ್ಲ ಐಟಂ ಹಾಡುಗಳಂತೆ ಅದರಲ್ಲೂ ಶೃಂಗಾರಕ್ಕೆ ಸಂಬಂಧಿಸಿದ ಕೆಲ ಪದಗಳನ್ನು ಬಳಸಲಾಗಿತ್ತಂತೆ. ಆದರೆ ಪವನ್ ಕಲ್ಯಾಣ್ ಆ ಹಾಡು ಕೇಳಿ, ಅದರಲ್ಲಿ ಆಕ್ಷೇಪಾರ್ಹ ಎಂದು ತಮಗೆ ಅನಿಸಿದ ಪದಗಳನ್ನು ತೆಗೆಸಿ ಹಾಕಿದ್ದಾರೆ.
ಈ ಬಗ್ಗೆ ಸಿನಿಮಾದ ಸಂಗೀತ ನಿರ್ದೇಶಕ, ಆಸ್ಕರ್ ವಿಜೇತ ಎಂಎಂ ಕೀರವಾಣಿ ಅವರು ಮಾಹಿತಿ ನೀಡಿದ್ದು, ‘ಪವನ್ ಕಲ್ಯಾಣ್ ಅವರಿಗಾಗಿಯೇ ಕೆಲವು ಸಾಲುಗಳನ್ನು ಆ ಹಾಡಿನಲ್ಲಿ ಬರೆಯಲಾಗಿತ್ತು. ಅವರು ಹಾಡು ಕೇಳಿ ಕೆಲವು ಪದಗಳನ್ನು ಬದಲಾಯಿಸುವಂತೆ ಹೇಳಿದರು. ಈಗ ನನಗೆ ಹೆಚ್ಚಿನ ಜವಾಬ್ದಾರಿ ಇದೆ. ನಾನು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ. ಅವರಿಗೆ ಇರುವ ಸಾಮಾಜಿಕ ಬದ್ಧತೆಗೆ ಇದೊಂದು ಉದಾಹರಣೆ’ ಎಂದಿದ್ದಾರೆ ಎಂಎಂ ಕೀರವಾಣಿ.
ಇದನ್ನೂ ಓದಿ:ತಮಿಳು ಸಿನಿಮಾಕ್ಕೆ ಆಸ್ಕರ್ ವಿಜೇತ ಎಂಎಂ ಕೀರವಾಣಿ ಸಂಗೀತ: ರೆಹಮಾನ್ ಸಂಗೀತ ನೀಡಲಿಲ್ಲವೇಕೆ?
‘ಹರಿ ಹರ ವೀರ ಮಲ್ಲು’ ಸಿನಿಮಾ 2019 ರಲ್ಲಿ ಪ್ರಾರಂಭವಾಗಿತ್ತು. 2020ರಲ್ಲಿ ಚಿತ್ರೀಕರಣ ಆರಂಭಿಸಲಾಗಿತ್ತು. ಇದೀಗ ಆರು ವರ್ಷಗಳ ಬಳಿಕ ಹಲವು ಅಡೆ-ತಡೆಗಳನ್ನು ಎದುರಿಸಿ ಕೊನೆಗೆ ಸಿನಿಮಾ ಬಿಡುಗಡೆ ಆಗುತ್ತಿದೆ. ಆದರೆ ಈಗಲೂ ಸಹ ಸಂಕಷ್ಟವೊಂದು ಎದುರಾಗಿದೆ. ಜೂನ್ 1 ರಿಂದ ಆಂಧ್ರ ಮತ್ತು ತೆಲಂಗಾಣದ ಚಿತ್ರಮಂದಿರಗಳು ಪ್ರತಿಭಟನೆಗೆ ಕರೆ ನೀಡಿದ್ದು ಎರಡು ರಾಜ್ಯದ ಎಲ್ಲ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಬಂದ್ ಆಗಿರಲಿವೆ. ಹಾಗಾಗಿ ‘ಹರಿ ಹರ ವೀರ ಮಲ್ಲು’ ಸಿನಿಮಾದ ಬಿಡುಗಡೆ ಮತ್ತೆ ಮುಂದೂಡಲ್ಪಡುತ್ತದೆಯೋ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




