
ಭಾರತದ ವೆಬ್ ಸಿರೀಸ್ಗಳಲ್ಲಿ ‘ದಿ ಫ್ಯಾಮಿಲಿ ಮ್ಯಾನ್’ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಈಗಾಗಲೇ ಎರಡು ಸೀಸನ್ಗಳಲ್ಲಿ ಈ ವೆಬ್ ಸರಣಿ ಯಶಸ್ವಿ ಆಗಿದೆ. ‘ದಿ ಫ್ಯಾಮಿಲಿ ಮ್ಯಾನ್’ ಮತ್ತು ‘ದಿ ಫ್ಯಾಮಿಲಿ ಮ್ಯಾನ್ 2’ ಯಶಸ್ಸಿನ ಬಳಿಕ ‘ದಿ ಫ್ಯಾಮಿಲಿ ಮ್ಯಾನ್ 3’ (The Family Man Season 3) ಬರುತ್ತಿದೆ. ಈ ಬಗ್ಗೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಮನೆ ಮಾಡಿದೆ. ನಟ ಮನೋಜ್ ಬಾಜಪಾಯಿ (Manoj Bajpayee) ಅವರು ಈ ಬಾರಿ ಕೂಡ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇದರ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಆ ಮೂಲಕ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಲಾಗಿದೆ. ‘ಅಮೇಜಾನ್ ಪ್ರೈಂ ವಿಡಿಯೋ’ (Amazon Prime Video) ಮೂಲಕ ‘ದಿ ಫ್ಯಾಮಿಲಿ ಮ್ಯಾನ್ 3’ ಪ್ರಸಾರ ಆಗಲಿದೆ.
‘ದಿ ಫ್ಯಾಮಿಲಿ ಮ್ಯಾನ್ ಮತ್ತೆ ಬರುತ್ತಿದ್ದಾನೆ’ ಎಂಬ ಬರಹ ಈ ಪೋಸ್ಟರ್ನಲ್ಲಿದೆ. 3ನೇ ಸೀಸನ್ ನೋಡಲು ಒಟಿಟಿ ಪ್ರೇಕ್ಷಕರು ಕಾದಿದ್ದಾರೆ. ನಟ ಮನೋಜ್ ಬಾಜಪೇಯಿ ಅವರು ಈ ಬಾರಿ ಕೂಡ ಶ್ರೀಕಾಂತ್ ತಿವಾರಿ ಪಾತ್ರದಲ್ಲಿ ಮಿಂಚಲಿದ್ದಾರೆ. 2 ಸೀಸನ್ಗಳ ಯಶಸ್ಸಿನ ಬಳಿಕ ಅಭಿಮಾನಿಗಳ ನಿರೀಕ್ಷೆ ಜಾಸ್ತಿ ಆಗಿದೆ. ಹಾಗಾಗಿ 3ನೇ ಸೀಸನ್ ಭರ್ಜರಿಯಾಗಿರಲಿದೆ ಎಂಬುದಕ್ಕೆ ಈ ಪೋಸ್ಟರ್ ಸಾಕ್ಷಿಯಾಗಿದೆ.
‘ಅಮೇಜಾನ್ ಪ್ರೈಂ ವಿಡಿಯೋ’ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ‘ದಿ ಫ್ಯಾಮಿಲಿ ಮ್ಯಾನ್ 3’ ವೆಬ್ ಸರಣಿಯ ಪೋಸ್ಟರ್ ಹಂಚಿಕೊಳ್ಳಲಾಗಿದೆ. ಇದಕ್ಕೆ ಅಭಿಮಾನಿಗಳು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಪ್ರತಿಕ್ರಿಯಿಸಿದ್ದಾರೆ. ನಟಿ ಸಮಂತಾ ರುತ್ ಪ್ರಭು ಕೂಡ ಈ ವೆಬ್ ಸರಣಿ ನೋಡಲು ಕಾದಿದ್ದಾರೆ. ಶ್ರೇಯಾ ಧನ್ವಂತರಿ, ಶರೀಬ್ ಹಷ್ಮಿ ಮುಂತಾದವರು ಕಮೆಂಟ್ ಮಾಡಿದ್ದಾರೆ.
‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸಿರೀಸ್ನಲ್ಲಿ ನಟಿ ಸಮಂತಾ ರುತ್ ಪ್ರಭು ಅವರು ವಿಲನ್ ಪಾತ್ರ ಮಾಡಿದ್ದರು. ಈಗ 3ನೇ ಸೀಸನ್ನಲ್ಲಿ ಖ್ಯಾತ ನಟ ಜಯದೀಪ್ ಅಹಲಾವತ್ ಅವರು ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಒಂದು ವೇಳೆ ಅವರು ವಿಲನ್ ಪಾತ್ರ ಮಾಡಿದ್ದು ಹೌದಾದರೆ ಥ್ರಿಲ್ ಹೆಚ್ಚಲಿದೆ.
ಇದನ್ನೂ ಓದಿ: ಒಟಿಟಿಯಲ್ಲಿ ರಿಲೀಸ್ ಆದ ಈ ಕಾಮಿಡಿ ಚಿತ್ರವನ್ನು ಮಿಸ್ ಮಾಡಲೇಬೇಡಿ; ಕನ್ನಡದಲ್ಲೂ ಲಭ್ಯ
ಸದ್ಯಕ್ಕೆ ‘ದಿ ಫ್ಯಾಮಿಲಿ ಮ್ಯಾನ್ 3’ ಪೋಸ್ಟರ್ ಮಾತ್ರ ರಿಲೀಸ್ ಆಗಿದೆ. ಸ್ಟ್ರೀಮಿಂಗ್ ದಿನಾಂಕದ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಆದಷ್ಟು ಬೇಗ ಆ ಬಗ್ಗೆ ಸುದ್ದಿ ಹೊರಬೀಳಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ರಾಜ್ ಮತ್ತು ಡಿಕೆ ಅವರು ಈ ವೆಬ್ ಸರಣಿಗೆ ನಿರ್ದೇಶನ ಮಾಡಿದ್ದಾರೆ. ‘ಫರ್ಜಿ’ ವೆಬ್ ಸರಣಿಯ ಪಾತ್ರಗಳು ‘ದಿ ಫ್ಯಾಮಿಲಿ ಮ್ಯಾನ್ 3’ ವೆಬ್ ಸೀರೀಸ್ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕೂಡ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.