‘ಮನಿ ಹೇಸ್ಟ್’ ವೆಬ್ ಸೀರಿಸ್ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದಿದೆ. ಸ್ಪ್ಯಾನಿಶ್ ಭಾಷೆಯ ಈ ವೆಬ್ ಸೀರಿಸ್ನಲ್ಲಿ ಬರುವ ಪ್ರತಿ ಪಾತ್ರಗಳು ಹಾಗೂ ಅವರಿಗೆ ಇಡಲಾದ ಹೆಸರುಗಳು ವೀಕ್ಷಕರಿಗೆ ಸಾಕಷ್ಟು ಇಷ್ಟವಾಗಿದೆ. ಈ ಕಾರಣಕ್ಕೆ ಭಾರತದಲ್ಲೂ ಇದಕ್ಕೆ ದೊಡ್ಡ ಅಭಿಮಾನಿ ಬಳಗ ಇದೆ. ಈ ವೆಬ್ ಸೀರಿಸ್ನಲ್ಲಿ ಪ್ರೊಫೆಸರ್ ಪಾತ್ರ ಮಾಡಿದ ಅಲ್ವಾರೊ ಮೊರ್ಟೆಗೆ ಕಾಲಿನ ಕ್ಯಾನ್ಸರ್ ಕಾಡಿತ್ತು. ಈಗ ಅವರು ಅದರಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.
ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗುವ ಈ ವೆಬ್ ಸೀರಿಸ್ನಲ್ಲಿ ಪ್ರೊಫೆಸರ್ ಪಾತ್ರ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ಪ್ರತಿ ದರೋಡೆಯ ರುವಾರಿ ಇದೇ ಪ್ರೊಫೆಸರ್. ಅಲ್ವಾರೊ ನಿರ್ವಹಿಸಿರುವ ಪಾತ್ರದ ಮ್ಯಾನರಿಸಮ್ ಎಲ್ಲರಿಗೂ ಇಷ್ಟವಾಗುತ್ತಿದೆ. ಅವರಿಗೆ ಒಂದು ಕಾಲದಲ್ಲಿ ಕ್ಯಾನ್ಸರ್ ಕಾಡಿತ್ತು. ಅದರಿಂದ ಅವರು ಬದುಕಿ ಬಂದಿದ್ದಾರೆ.
‘ನಾನು ಹಾಸಿಗೆಯ ಮೇಲೆ ಮಲಗಿದ್ದೆ. ಬಿಳಿ ಬಣ್ಣದ ಕೋಟ್ ಹಾಕಿ ಡಾಕ್ಟರ್ ನನ್ನ ಬಳಿ ಬಂದರು. ನೀನು ಸಾಯುತ್ತೀಯಾ ಅಥವಾ ನಿನ್ನ ಕಾಲನ್ನು ಕತ್ತರಿಸಬೇಕು ಎಂದು ವೈದ್ಯರು ಹೇಳುತ್ತಾರೆ. ಅದೆರಡೇ ನನ್ನ ಮುಂದಿರುವ ಆಯ್ಕೆ ಎಂದು ನಾನು ಭಾವಿಸಿದ್ದೆ. ಆದರೆ, ವೈದ್ಯರು ಹಾಗೆ ಹೇಳಲಿಲ್ಲ. ಅವರು ಇದನ್ನು ಗುಣಮಾಡಬಹುದು ಎಂದರು. ಅಂತೆಯೇ ನಾನು ಕ್ಯಾನ್ಸರ್ನಿಂದ ಗುಣಮುಖನಾದೆ’ ಎಂದಿದ್ದಾರೆ ಅವರು.
‘ಮನಿ ಹೇಸ್ಟ್’ ಯಶಸ್ವಿಯಾಗಿ ನಾಲ್ಕು ಸೀಸನ್ ಪೂರ್ಣಗೊಳಿಸಿದೆ. ನೆಟ್ಫ್ಲಿಕ್ಸ್ನಲ್ಲಿ ಈ ವೆಬ್ ಸೀರಿಸ್ ಪ್ರಸಾರವಾಗುತ್ತಿದೆ. ಐದನೇ ಸೀಸನ್ ಸೆಪ್ಟೆಂಬರ್ 3ರಂದು ಪ್ರಸಾರಗೊಳ್ಳಲಿದೆ. ಐದನೇ ಸೀಸನ್ ಎರಡು ಪಾರ್ಟ್ಗಳಲ್ಲಿ ಬರುತ್ತಿದೆ ಅನ್ನೋದು ವಿಶೇಷ. ಈ ವೆಬ್ ಸೀರಿಸ್ಗಾಗಿ ಅನೇಕರು ಕಾದು ಕೂತಿದ್ದಾರೆ.
ಇದನ್ನೂ ಓದಿ: ‘ಜಗಳವಾಡಿ ಕ್ಷಮೆ ಕೇಳುವುದರೊಳಗೆ ಹೆಣವಾಗಿ ಬಂದಿದ್ದರು ತಂದೆ’; ‘ನನ್ನರಸಿ ರಾಧೆ’ ಅಭಿನವ್ ನೋವಿನ ಕಥೆ
ಬಿಗ್ ಬಾಸ್ ಹೊಸ ಸೀಸನ್ ಸೆ.5ರಿಂದ ಆರಂಭ; ಗನ್ ಹಿಡಿದು ಬಂದ ನಿರೂಪಕ