ಈ ವಾರ ಒಟಿಟಿಗೆ ಬರುತ್ತಿವೆ ಹಲವು ಉತ್ತಮ ಸಿನಿಮಾ

OTT Release: ಈ ಶುಕ್ರವಾರ ಚಿತ್ರಮಂದಿರದಲ್ಲಿ ಯಾವೊಂದು ದೊಡ್ಡ ಸಿನಿಮಾಗಳು, ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗಿಲ್ಲ. ಇದು ಡ್ರೈ ಶುಕ್ರವಾರವಾಗಿದೆ. ಆದರೆ ಒಟಿಟಿಯಲ್ಲಿ ಕೆಲವು ಒಳ್ಳೆಯ ಸಿನಿಮಾ, ವೆಬ್ ಸರಣಿಗಳು ಕಳೆದ ಕೆಲ ದಿನಗಳಲ್ಲಿ ಬಿಡುಗಡೆ ಆಗಿವೆ. ಇಲ್ಲಿದೆ ಅವುಗಳು ಕಿರು ಪಟ್ಟಿ.

ಈ ವಾರ ಒಟಿಟಿಗೆ ಬರುತ್ತಿವೆ ಹಲವು ಉತ್ತಮ ಸಿನಿಮಾ
ಒಟಿಟಿ ಸಿನಿಮಾ
Follow us
ಮಂಜುನಾಥ ಸಿ.
|

Updated on: Dec 13, 2024 | 12:02 PM

ಈ ಶುಕ್ರವಾರ ಯಾವುದೇ ಒಳ್ಳೆಯ ಕನ್ನಡ ಸಿನಿಮಾಗಳು ತೆರೆಗೆ ಬಂದಿಲ್ಲ. ಪರಭಾಷೆಯಲ್ಲಿಯೂ ತಮಿಳಿನ ‘ಮಿಸ್ ಯೂ’ ಹಾಗೂ ‘ಸುದ ಕುವಂ 2’ ಬಿಟ್ಟರೆ ಯಾವುದೇ ಒಳ್ಳೆಯ ಸಿನಿಮಾಗಳಿಲ್ಲ. ಆದರೆ ಒಟಿಟಿಯಲ್ಲಿ ಕೆಲ ಉತ್ತಮ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಕೆಲವು ವೆಬ್ ಸರಣಿಗಳು ಸಹ ಈ ವಾರ ತೆರೆಗೆ ಬರಲಿವೆ. ಇಲ್ಲಿವೆ ಸಿನಿಮಾ ಹಾಗೂ ವೆಬ್ ಸರಣಿಗಳ ಪಟ್ಟಿ.

ತಂಗಾಲಾನ್

ಆಗಸ್ಟ್ 15 ರಂದು ಬಿಡುಗಡೆ ಆಗಿದ್ದ ವಿಕ್ರಂ ನಟನೆಯ ‘ತಂಗಲಾನ್’ ಸಿನಿಮಾ ಕೆಲವು ವಿವಾದಗಳ ಕಾರಣಕ್ಕೆ ಒಟಿಟಿ ಬಿಡುಗಡೆ ತಡೆಯಾಗುತ್ತಲೇ ಬಂದಿತ್ತು. ಹಲವು ಬಾರಿ ಒಟಿಟಿ ಬಿಡುಗಡೆ ದಿನಾಂಕ ಪ್ರಕಟವಾಗಿ ಮುಂದೂಡಲಾಗಿತ್ತು. ಆದರೆ ಈ ಬಾರಿ ‘ತಂಗಲಾನ್’ ಸಿನಿಮಾ ಕೊನೆಗೂ ಒಟಿಟಿಗೆ ಬಂದಿದೆ. ಇದೇ ವಾರ ‘ತಂಗಲಾನ್’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಕಂಡಿದೆ. ನೆಟ್​ಫ್ಲಿಕ್ಸ್​ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಕಂಗುವ

ಸೂರ್ಯ, ದಿಶಾ ಪಟಾನಿ ನಟಿಸಿದ್ದ ‘ಕಂಗುವ’ ಕೆಲ ವಾರಗಳ ಹಿಂದೆ ಬಲು ಅದ್ಧೂರಿಯಾಗಿ ಬಿಡುಗಡೆ ಆಗಿತ್ತು. ಆದರೆ ಚಿತ್ರಮಂದಿರದಲ್ಲಿ ಉತ್ತಮ ಪ್ರದರ್ಶನ ಕಂಡಿರಲಿಲ್ಲ. ಈ ಸಿನಿಮಾ ಕೆಲವು ದಿನಗಳ ಹಿಂದೆ ಒಟಿಟಿಗೆ ಬಂದಿದೆ. ಅಮೆಜಾನ್ ಪ್ರೈಂ ವಿಡಿಯೋನಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಆದರೆ ಒಟಿಟಿಯಲ್ಲಿ ದಿಶಾ ಪಟಾಣಿಯ ಕೆಲ ಹಾಟ್ ಸೀನ್​ಗಳನ್ನು ಕತ್ತರಿಸಲಾಗಿದೆ.

ಬೆಗನ್​ವಿಲಿಯಾ

ಸ್ಟಾರ್ ನಟ ಫಹಾದ್ ಫಾಸಿಲ್, ಕುಂಚಕ್ಕೊ ಬೋಬನ್ ನಟಿಸಿರುವ ‘ಬೆಗನ್​ವಿಲಿಯಾ’ ಮಲಯಾಳಂ ಸಿನಿಮಾ ಇದೇ ವಾರ ಒಟಿಟಿಗೆ ಬಂದಿದೆ. ಸೋನಿ ಲಿವ್​ನಲ್ಲಿ ಈ ಸಿನಿಮಾ ಸ್ಟ್ರೀಂ ಆಗುತ್ತಿದ್ದು, ಸಿನಿಮಾ ಥ್ರಿಲ್ಲರ್ ಕತೆ ಒಳಗೊಂಡಿದೆ. ಸಿನಿಮಾ ಅಕ್ಟೋಬರ್ 17ಕ್ಕೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿತ್ತು. ಆದರೆ ಅಷ್ಟೇನು ಉತ್ತಮ ಪ್ರದರ್ಶನ ಕಂಡಿರಲಿಲ್ಲ.

ಇದನ್ನೂ ಓದಿ:

ಜೀಬ್ರಾ

ಡಾಲಿ ಧನಂಜಯ್, ಸತ್ಯದೇವ್ ನಟನೆಯ ‘ಜೀಬ್ರಾ’ ಸಿನಿಮಾ ಸಹ ಒಟಿಟಿಗೆ ಬರಲಿದೆ. ಈ ಸಿನಿಮಾ ಆಹಾ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಆದರೆ ದಿನಾಂಕ ಪ್ರಕಟವಾಗಿಲ್ಲ. ಇದೇ ವಾರವೇ ‘ಜೀಬ್ರಾ’ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ. ಕೆಲ ವಾರಗಳ ಹಿಂದೆ ಬಿಡುಗಡೆ ಆಗಿದ್ದ ಈ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.

ಮಿಸ್ ಮ್ಯಾಚ್ಡ್ ಸೀಸನ್ 3

ಖ್ಯಾತ ಯೂಟ್ಯೂಬರ್ ಪ್ರಾಜಕ್ತಾ ಕೋಲಿ ಮತ್ತು ರೋಹಿತ್ ಸರಫ್ ನಟಿಸಿರುವ ರೊಮ್ಯಾಂಟಿಕ್ ವೆಬ್ ಸರಣಿ ‘ಮಿಸ್ ಮ್ಯಾಚ್ಡ್’ ಸೀಸನ್ 3 ಬಿಡುಗಡೆ ಆಗುತ್ತಿದೆ. ನೆಟ್​ಫ್ಲಿಕ್ಸ್​ನಲ್ಲಿ ವೆಬ್ ಸರಣಿ ಬಿಡುಗಡೆ ಆಗುತ್ತಿದೆ. ಸೀಸನ್ 3 ಹೈದರಾಬಾದ್​ನಲ್ಲಿ ನಡೆಯುವ ಕತೆಯನ್ನು ಒಳಗೊಂಡಿದ್ದು, ಈ ಬಾರಿ ಕೆಲವು ಪ್ರಮುಖ ನಟರು ವೆಬ್ ಸರಣಿಯಲ್ಲಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಧಾರವಾಡ ಸಭೆಯಲ್ಲಿ ಭಾಗಿಯಾಗಿದ್ದ ಬೆಲ್ಲದ್ ಸತ್ಯ ಸಭೆಗೆ ತಿಳಿಸಲಿ: ಜಮೀರ್
ಧಾರವಾಡ ಸಭೆಯಲ್ಲಿ ಭಾಗಿಯಾಗಿದ್ದ ಬೆಲ್ಲದ್ ಸತ್ಯ ಸಭೆಗೆ ತಿಳಿಸಲಿ: ಜಮೀರ್
ಸುಮ್ಮನೆ ಮಾತಾಡಿದರೂ ಅನುಕುಮಾರ್ ತಾಯಿ ಜಯಮ್ಮಗೆ ಎದೆನೋವು ಬರುತ್ತದೆ
ಸುಮ್ಮನೆ ಮಾತಾಡಿದರೂ ಅನುಕುಮಾರ್ ತಾಯಿ ಜಯಮ್ಮಗೆ ಎದೆನೋವು ಬರುತ್ತದೆ
ಸಿಎಂರನ್ನು ಭೇಟಿಯಾಗುವ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ: ಕಾಶೀನಾಥಯ್ಯ
ಸಿಎಂರನ್ನು ಭೇಟಿಯಾಗುವ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ: ಕಾಶೀನಾಥಯ್ಯ
ವಕ್ಫ್​ ಜಟಾಪಟಿ: ಸಚಿವ ಸ್ಥಾನಕ್ಕೆ ರಾಜೀನಾಮೆ ಸವಾಲ್ ಹಾಕಿದ ಜಮೀರ್!
ವಕ್ಫ್​ ಜಟಾಪಟಿ: ಸಚಿವ ಸ್ಥಾನಕ್ಕೆ ರಾಜೀನಾಮೆ ಸವಾಲ್ ಹಾಕಿದ ಜಮೀರ್!
ವಿಷಯ ಪ್ರಸ್ತಾಪಿಸಿ ಸಮರ್ಥಿಸಿಕೊಳ್ಳಲು ಹೆಣಗುತ್ತಿರುವ ವಿಪಕ್ಷ ನಾಯಕ ಅಶೋಕ
ವಿಷಯ ಪ್ರಸ್ತಾಪಿಸಿ ಸಮರ್ಥಿಸಿಕೊಳ್ಳಲು ಹೆಣಗುತ್ತಿರುವ ವಿಪಕ್ಷ ನಾಯಕ ಅಶೋಕ
ಪವಿತ್ರಾ ಗೌಡಗೆ ಜಾಮೀನು; ಮೊದಲ ಬಾರಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ತಾಯಿ
ಪವಿತ್ರಾ ಗೌಡಗೆ ಜಾಮೀನು; ಮೊದಲ ಬಾರಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ತಾಯಿ
ಮದವೇರಿದಾಗ ಸ್ಮಶಾನದಲ್ಲಿ ಸುತ್ತು ಹಾಕಬೇಕು: ಹೀಗೆಂದಿದ್ದೇಕೆ ಅಶೋಕ್?
ಮದವೇರಿದಾಗ ಸ್ಮಶಾನದಲ್ಲಿ ಸುತ್ತು ಹಾಕಬೇಕು: ಹೀಗೆಂದಿದ್ದೇಕೆ ಅಶೋಕ್?
ಹಿಂದೆ ನೀವು ಸದನವನ್ನು ಹೀಗಾ ನಡೆಸಿದ್ದು ಅಂತ ಸಿಎಂರನ್ನು ಪ್ರಶ್ನಿಸಿದ ಅಶೋಕ
ಹಿಂದೆ ನೀವು ಸದನವನ್ನು ಹೀಗಾ ನಡೆಸಿದ್ದು ಅಂತ ಸಿಎಂರನ್ನು ಪ್ರಶ್ನಿಸಿದ ಅಶೋಕ
ತಮ್ಮದೇ ಪಕ್ಷದ ಮಂತ್ರಿಯನ್ನು ಮಾತಾಡಲುಮ ಬಿಡದ ನರೇಂದ್ರ ಸ್ವಾಮಿ
ತಮ್ಮದೇ ಪಕ್ಷದ ಮಂತ್ರಿಯನ್ನು ಮಾತಾಡಲುಮ ಬಿಡದ ನರೇಂದ್ರ ಸ್ವಾಮಿ
ಅಲ್ಲು ಅರ್ಜುನ್ ಬಂಧಿಸಿ ಕರೆದೊಯ್ದ ಪೊಲೀಸರು: ವಿಡಿಯೋ ಇಲ್ಲಿದೆ
ಅಲ್ಲು ಅರ್ಜುನ್ ಬಂಧಿಸಿ ಕರೆದೊಯ್ದ ಪೊಲೀಸರು: ವಿಡಿಯೋ ಇಲ್ಲಿದೆ