My Daughter joined a cult: ‘ಮೈ ಡಾಟರ್ ಜಾಯಿನ್ಡ್​​ ಎ ಕಲ್ಟ್​’; ನಿತ್ಯಾನಂದನ ಕತೆ ಆಧರಿಸಿದ ಡಾಕ್ಯುಮೆಂಟರಿ ಸೀರೀಸ್​​ ರಿಲೀಸ್

| Updated By: shivaprasad.hs

Updated on: Jun 04, 2022 | 5:24 PM

Swami Nithyananda | Docu-Series: ಸಾಕ್ಷ್ಯಚಿತ್ರಗಳನ್ನು ಪ್ರಸಾರ ಮಾಡುವ ಓಟಿಟಿ ವೇದಿಕೆಯಾದ ‘ಡಿಸ್ಕವರಿ +’ನಲ್ಲಿ ಗುರುವಾರದಿಂದ ಸ್ವಾಮಿ ನಿತ್ಯಾನಂದನ ಕತೆಯನ್ನು ಆಧರಿಸಿದ ಡಾಕ್ಯುಮೆಂಟರಿ ಸೀರೀಸ್ ‘ಮೈ ಡಾಟರ್​ ಜಾಯಿನ್ಡ್​​ ಎ ಕಲ್ಟ್​’ ಬಿತ್ತರವಾಗುತ್ತಿದೆ.

My Daughter joined a cult: ‘ಮೈ ಡಾಟರ್ ಜಾಯಿನ್ಡ್​​ ಎ ಕಲ್ಟ್​’; ನಿತ್ಯಾನಂದನ ಕತೆ ಆಧರಿಸಿದ ಡಾಕ್ಯುಮೆಂಟರಿ ಸೀರೀಸ್​​ ರಿಲೀಸ್
‘ಮೈ ಡಾಟರ್ ಜಾಯಿನ್ಡ್​​ ಎ ಕಲ್ಟ್’ ಸೀರೀಸ್ ಪೋಸ್ಟರ್
Follow us on

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನ (Swami Nithyananda) ಕತೆಯನ್ನು ಆಧರಿಸಿ ತಯಾರಾದ ಡಾಕ್ಯುಮೆಂಟರಿ ಸೀರೀಸ್ ‘ಮೈ ಡಾಟರ್​ ಜಾಯಿನ್ಡ್​​ ಎ ಕಲ್ಟ್​’ (My daughter joined a cult) ತೆರೆ ಕಂಡಿದೆ. ಮುಖ್ಯವಾಗಿ ಸಾಕ್ಷ್ಯಚಿತ್ರಗಳನ್ನು ಪ್ರಸಾರ ಮಾಡುವ ಓಟಿಟಿ ವೇದಿಕೆಯಾದ ‘ಡಿಸ್ಕವರಿ +’ನಲ್ಲಿ ಗುರುವಾರದಿಂದ ಡಾಕ್ಯುಮೆಂಟರಿಯು ಬಿತ್ತರವಾಗುತ್ತಿದೆ. VICE ಸ್ಟುಡಿಯೋಸ್‌ನಿಂದ ನಿರ್ಮಿಸಲ್ಪಟ್ಟ ಈ ಸರಣಿಯು ಹಿಂದಿ, ತಮಿಳು, ತೆಲುಗು, ಇಂಗ್ಲೀಷ್, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆ. ನಮನ್ ಸಾರಯ್ಯ ನಿರ್ದೇಶಿಸಿದ ಈ ಸರಣಿಯಲ್ಲಿ ನಿತ್ಯಾನಂದನ ಮೇಲಿರುವ ಆರೋಪಗಳು ಸೇರಿದಂತೆ ಹಲವು ವಿಚಾರಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಭಕ್ತರನ್ನು ಆಮಿಷವೊಡ್ಡಿ ಧ್ಯಾನಪೀಠಕ್ಕೆ ಸೇರುವಂತೆ ಒತ್ತಾಯಿಸಿದ್ದು ನಂತರ ಅವರಿಗೆ ವಂಚಿಸಿದ್ದು, ಮಕ್ಕಳ ಅಕ್ರಮ ಬಂಧನದ ಆರೋಪ, ಅತ್ಯಾಚಾರ ಪ್ರಕರಣ, ವಿದೇಶಕ್ಕೆ ಪಲಾಯನ.. ಹೀಗೆ ಹಲವು ವಿಚಾರಗಳನ್ನು ಡಾಕ್ಯುಮೆಂಟರಿಯಲ್ಲಿ ತೋರಿಸಲಾಗಿದೆ.

ಪ್ರಸ್ತುತ ರಿಲೀಸ್ ಆಗಿರುವ ನಿತ್ಯಾನಂದನ ಕುರಿತ ಡಾಕ್ಯುಮೆಂಟರಿಗೆ ಪರ ವಿರೋಧದ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ. ಕೆಲವರು ಈ ಸೀರೀಸ್ ಅನ್ನು ಹಿಂದೂ ವಿರೋಧಿ ಎಂದು ಆರೋಪಿಸಿದ್ದಾರೆ. ಮತ್ತೆ ಕೆಲವರು ಒಬ್ಬರ ಮೇಲೆ ಅಷ್ಟೊಂದು ಆರೋಪವಿದ್ದಾಗಲೂ ಆತ ದೇವರಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಸಂಬಂಧಪಟ್ಟ ಕೆಲವು ಟ್ವೀಟ್​ಗಳು ಇಲ್ಲಿವೆ:

ಮೂರು ಸಂಚಿಕೆಗಳನ್ನು ಹೊಂದಿರುವ ‘ಮೈ ಡಾಟರ್ ಜಾಯಿನ್ಡ್​​ ಎ ಕಲ್ಟ್​’ನಲ್ಲಿ ಭಕ್ತರು, ವಕೀಲರು, ಪತ್ರಕರ್ತರು ಸೇರಿದಂತೆ ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಹಾಗೆಯೇ ಅದಕ್ಕೆ ಸಂಬಂಧಪಟ್ಟ ಸಾಕ್ಷ್ಯಗಳನ್ನೂ ಒದಗಿಸಲಾಗಿದೆ.​ ನಿತ್ಯಾನಂದನ ಮೇಲೆ ಹಲವು ಆರೋಪಗಳಿದ್ದರೂ ಹೇಗೆ ಹೆಚ್ಚು ಅನುಯಾಯಿಗಳನ್ನು ಆತ ಸಂಪಾದಿಸಿದ್ದಾನೆ ಎಂಬುದನ್ನು ಸೀರೀಸ್​ನಲ್ಲಿ ವಿವರಿಸಲಾಗಿದೆ.

ಪ್ರಸ್ತುತ ನಿತ್ಯಾನಂದ ಈಕ್ವೆಡಾರ್ ಬಳಿಯ ದ್ವೀಪವೊಂದರಲ್ಲಿ ಪ್ರತ್ಯೇಕ ರಾಷ್ಟ್ರ ಸ್ಥಾಪಿಸಿದ್ದು, ಅದಕ್ಕೆ ಕೈಲಾಸ ಎಂದು ಹೆಸರಿಡಲಾಗಿದೆ ಎಂದು ವರದಿಗಳು ಹೇಳಿವೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ