Aaliya Siddiqui: ‘ಬಿಗ್​ ಬಾಸ್​ ಒಟಿಟಿ 2’ ಶೋನಲ್ಲಿ ಏನೋ ಸಾಬೀತು ಮಾಡಲು ಹೋಗಿ ಮುಖಭಂಗ ಅನುಭವಿಸಿದ ನವಾಜುದ್ದೀನ್​ ಸಿದ್ಧಿಕಿ ಪತ್ನಿ ಆಲಿಯಾ

|

Updated on: Jun 28, 2023 | 12:06 PM

Nawazuddin Siddiqui: ಆಲಿಯಾ ಸಿದ್ಧಿಕಿ ಅವರು ನಿರ್ಮಾಪಕಿ ಕೂಡ ಹೌದು. ಆದರೆ ಅವರಿಗೆ ತಮ್ಮದೇ ಆದಂತಹ ಐಡೆಂಟಿಟಿ ಇರಲಿಲ್ಲ. ಕೇವಲ ಸ್ಟಾರ್​ ನಟನ ಪತ್ನಿ ಎಂದು ಅವರನ್ನು ಗುರುತಿಸಲಾಗಿತ್ತು.

Aaliya Siddiqui: ‘ಬಿಗ್​ ಬಾಸ್​ ಒಟಿಟಿ 2’ ಶೋನಲ್ಲಿ ಏನೋ ಸಾಬೀತು ಮಾಡಲು ಹೋಗಿ ಮುಖಭಂಗ ಅನುಭವಿಸಿದ ನವಾಜುದ್ದೀನ್​ ಸಿದ್ಧಿಕಿ ಪತ್ನಿ ಆಲಿಯಾ
ನವಾಜುದ್ದೀನ್​ ಸಿದ್ಧಿಕಿ, ಆಲಿಯಾ ಸಿದ್ಧಿಕಿ
Follow us on

ನಟ ನವಾಜುದ್ದೀನ್​ ಸಿದ್ಧಿಕಿ (Nawazuddin Siddiqui) ಅವರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿ ಆಗಿದ್ದೇ ಸಂಸಾರದ ಗಲಾಟೆ ಮೂಲಕ. ಪತ್ನಿ ಆಲಿಯಾ ಸಿದ್ಧಿಕಿ ಜೊತೆ ಅವರು ಕಿರಿಕ್​ ಮಾಡಿಕೊಂಡಿದ್ದಾರೆ. ಇಬ್ಬರು ಇನ್ನೇನು ಕೆಲವೇ ದಿನಗಳಲ್ಲಿ ವಿಚ್ಛೇದನ ಪಡೆಯುತ್ತಾರೆ ಎನ್ನಲಾಗಿದೆ. ಈ ನಡುವೆ ಆಲಿಯಾ ಸಿದ್ಧಿಕಿ (Aaliya Siddiqui) ಅವರು ಹೊಸ ಬದುಕು ಕಟ್ಟಿಕೊಳ್ಳಲು ನಿರ್ಧರಿಸಿದ್ದಾರೆ. ಅದರ ಮೊದಲ ಹೆಜ್ಜೆ ಎಂಬಂತೆ ಅವರು ‘ಬಿಗ್​ ಬಾಸ್​ ಒಟಿಟಿ 2’ (Bigg Boss OTT 2) ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದರು. ಆದರೆ ಎರಡನೇ ವಾರವೇ ಅವರು ಎಲಿಮಿನೇಟ್​ ಆಗಿದ್ದಾರೆ. ಆ ಮೂಲಕ ಅವರಿಗೆ ಮುಖಭಂಗ ಆಗಿದೆ.

ಆಲಿಯಾ ಸಿದ್ಧಿಕಿ ಅವರು ನಿರ್ಮಾಪಕಿ ಕೂಡ ಹೌದು. ಆದರೆ ಅವರಿಗೆ ತಮ್ಮದೇ ಆದಂತಹ ಐಡೆಂಟಿಟಿ ಇರಲಿಲ್ಲ. ಕೇವಲ ಸ್ಟಾರ್​ ನಟನ ಪತ್ನಿ ಎಂದು ಅವರನ್ನು ಗುರುತಿಸಲಾಗಿತ್ತು. ಅಲ್ಲದೇ ಗಂಡನ ಜೊತೆ ಕಿರಿಕ್​ ಮಾಡಿಕೊಂಡ ಬಳಿಕ ಅವರಿಗೆ ಬೇರೆ ಐಡೆಂಟಿಟಿ ಪಡೆಯುವುದು ಅನಿವಾರ್ಯ ಆಗಿತ್ತು. ಆ ಕಾರಣಕ್ಕಾಗಿ ಅವರು ‘ಬಿಗ್ ಬಾಸ್​​ ಒಟಿಟಿ 2’ ಶೋಗೆ ಬಂದಿದ್ದರು. ಈ ವೇದಿಕೆಯಲ್ಲಿ ತಮ್ಮ ಜೀವನದ ವಿವರಗಳನ್ನು ಜನರಿಗೆ ತಿಳಿಸಬೇಕು ಎಂಬುದು ಅವರ ಉದ್ದೇಶ ಆಗಿತ್ತು. ಆದರೆ ಮಿಡ್​ ಮೀಕ್​ನಲ್ಲಿ ಎಲಿಮಿನೇಟ್​ ಆಗಿದ್ದರಿಂದ ಅವರ ಉದ್ದೇಶ ಈಡೇರಲಿಲ್ಲ.

ಇದನ್ನೂ ಓದಿ: Aaliya Siddiqui: ಹೊಸ ಬಾಯ್​ಫ್ರೆಂಡ್​ ಫೋಟೋ ಹಂಚಿಕೊಂಡ ನವಾಜುದ್ದೀನ್​ ಸಿದ್ಧಿಕಿ ಪತ್ನಿ ಆಲಿಯಾ; ಶೀಘ್ರದಲ್ಲೇ ಹೆಸರು ಬದಲಾವಣೆ

‘ಬಿಗ್​ ಬಾಸ್​ ಒಟಿಟಿ 2’ ರಿಯಾಲಿಟಿ ಶೋ ‘ಜಿಯೋ ಸಿನಿಮಾಸ್​’ ಮೂಲಕ ಉಚಿತವಾಗಿ ಪ್ರಸಾರ ಆಗುತ್ತಿದೆ. ಮೊದಲ ಸೀಸನ್​ ಅನ್ನು ಕರಣ್​ ಜೋಹರ್​ ನಡೆಸಿಕೊಟ್ಟಿದ್ದರು. ಈ ಸೀಸನ್​ಗೆ ಸಲ್ಮಾನ್​ ಖಾನ್​ ಅವರು ನಿರೂಪಣೆ ಮಾಡುತ್ತಿದ್ದಾರೆ. ಹಲವು ಕಾಂಟ್ರವರ್ಸಿಗಳ ಕಾರಣದಿಂದಲೂ ಈ ಶೋ ಹೈಲೈಟ್​ ಆಗುತ್ತಿದೆ. 2ನೇ ವಾರದಲ್ಲಿ ಎಲಿಮಿನೇಟ್​ ಆಗುವ ಮೂಲಕ ಆಲಿಯಾ ಸಿದ್ಧಿಕಿ ಅವರು ತಮ್ಮ ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್​ಗೆ ನವಾಜುದ್ದೀನ್ ಸಿದ್ಧಿಕಿ ಮಾಜಿ ಪತ್ನಿ ರೆಡಿ; ಬಾಯ್​ಫ್ರೆಂಡ್ ವಿಚಾರದಲ್ಲಿ ಸಿಗಲಿದೆ ಸ್ಪಷ್ಟನೆ?

ನವಾಜುದ್ದೀನ್​ ಸಿದ್ಧಿಕಿ ಜೊತೆ ಜಗಳ ಮಾಡಿಕೊಂಡಿರುವ ಆಲಿಯಾ ಅವರು ಈಗಾಗಲೇ ಹೊಸ ಬಾಯ್​ಫ್ರೆಂಡ್​ ಜೊತೆ ಕಾಲ ಕಳೆಯುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಹೊಸ ಪ್ರಿಯಕರನ ಜೊತೆಗಿನ ಫೋಟೋವನ್ನು ಅವರು ಹಂಚಿಕೊಂಡಿದ್ದರು. ಅಲ್ಲದೇ ಶೀಘ್ರವೇ ತಮ್ಮ ಹೆಸರು ಬದಲಾಯಿಸಿಕೊಳ್ಳುವುದಾಗಿ ಹೇಳಿದ್ದರು. ವಿಚ್ಛೇದನ ಪಡೆದ ಬಳಿಕ ಅವರು ‘ಅಂಜನಾ ಕಿಶೋರ್​ ಪಾಂಡೆ’ ಎಂದು ಹೆಸರು ಚೇಂಜ್​ ಮಾಡಿಕೊಳ್ಳಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.