ಪ್ರಭಾಸ್ಗೊಂದು ನ್ಯಾಯ, ‘ಟೂರಿಸ್ಟ್ ಫ್ಯಾಮಿಲಿ’ಗೊಂದು ನ್ಯಾಯ?
Tourist Family-Prabhas: ತಮಿಳಿನ ಸಣ್ಣ ಬಜೆಟ್ ಸಿನಿಮಾ ‘ಟೂರಿಸ್ಟ್ ಫ್ಯಾಮಿಲಿ’ ಚಿತ್ರಮಂದಿರಗಳಲ್ಲಿ ದೊಡ್ಡ ಹಿಟ್ ಆಗಿದೆ. ಸಿನಿಮಾ ಒಟಿಟಿಯಲ್ಲೂ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದೆ. ಆದರೆ ಇದೀಗ ‘ಟೂರಸ್ಟ್ ಫ್ಯಾಮಿಲಿ’ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಗೆಟಿವ್ ವಿಮರ್ಶೆಗಳು ಕೇಳಿ ಬರುತ್ತಿವೆ. ಇದೊಂದು ‘ಡೇಂಜರಸ್’ ಸಿನಿಮಾ ಎನ್ನಲಾಗುತ್ತಿದೆ. ಇದರ ನಡುವೆ ಪ್ರಭಾಸ್ ನಟನೆಯ ‘ಛತ್ರಪತಿ’ ಸಿನಿಮಾ ಬಗ್ಗೆಯೂ ಚರ್ಚೆ ಎದ್ದಿದೆ.

ತಮಿಳಿನ ಸಣ್ಣ ಬಜೆಟ್ ಸಿನಿಮಾ ‘ಟೂರಿಸ್ಟ್ ಫ್ಯಾಮಿಲಿ’ (Tourist Family) ಕಳೆದ ತಿಂಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ದೊಡ್ಡ ಹಿಟ್ ಎನಿಸಿಕೊಂಡಿತು. ಸಸಿಕುಮಾರ್, ಸಿಮ್ರನ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ ಫ್ಯಾಮಿಲಿ ಆಡಿಯೆನ್ಸ್ ಮೆಚ್ಚುಗೆ ಗಳಿಸಿಕೊಂಡಿದೆ. ಶ್ರೀಲಂಕಾದಿಂದ ನಿಯಮಬಾಹಿರವಾಗಿ ತಮಿಳುನಾಡಿಗೆ ಬರುವ ತಮಿಳು ಕುಟುಂಬವೊಂದರ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಕೆಲ ವಾರಗಳ ಹಿಂದಷ್ಟೆ ಜಿಯೋ ಹಾಟ್ಸ್ಟಾರ್ ಒಟಿಟಿಯಲ್ಲಿ ಬಿಡುಗಡೆ ಆಗಿದ್ದು, ಒಟಿಟಿಯಲ್ಲಿಯೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಅದರ ಬೆನ್ನಲ್ಲೆ ಸಿನಿಮಾದ ಬಗ್ಗೆ ನೆಗೆಟಿವ್ ಚರ್ಚೆಗಳು ಸಹ ಶುರುವಾಗಿವೆ.
‘ಟೂರಿಸ್ಟ್ ಫ್ಯಾಮಿಲಿ’ ಸಿನಿಮಾ ನೋಡಿದ ಕೆಲವು ಮಂದಿ ಸಿನಿಮಾದ ಮುಖ್ಯಧಾತುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿನಿಮಾದಲ್ಲಿ ಅಕ್ರಮ ವಲಸೆಯನ್ನು ನಾರ್ಮಲೈಜ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಭಾರತ ಪ್ರಸ್ತುತ ಅಕ್ರಮ ವಲಸಿಗರ ಸಮಸ್ಯೆಯ ವಿರುದ್ಧ ಹೋರಾಡುತ್ತಿದೆ. ಆದರೆ ‘ಟೂರಿಸ್ಟ್ ಫ್ಯಾಮಿಲಿ’ ಸಿನಿಮಾನಲ್ಲಿ ಅಕ್ರಮ ವಲಸೆಯನ್ನು ವೈಭವೀಕರಿಸಲಾಗಿದೆ’ ಎಂದು ಟೀಕೆ ಮಾಡಿದ್ದಾರೆ.
ಇದನ್ನೂ ಓದಿ:ತಮಿಳಿನ ‘ಟೂರಿಸ್ಟ್ ಫ್ಯಾಮಿಲಿ’ಯ ಕೊಂಡಾಡಿದ ಕಿಚ್ಚ, ಸುದೀಪ್ಗೆ ಇಷ್ಟವಾಗಿದ್ದೇನು?
ಅದು ಮಾತ್ರವೇ ಅಲ್ಲದೆ ಸಿನಿಮಾದಲ್ಲಿರುವ ಕೆಲವು ಸಣ್ಣ-ಪುಟ್ಟ ವಿಷಯಗಳನ್ನು ಹುಡುಕಿ-ಹುಡುಕಿ ಟೀಕೆ ಮಾಡಲಾಗುತ್ತಿದೆ. ಇನ್ನು ‘ಟೂರಿಸ್ಟ್ ಫ್ಯಾಮಿಲಿ’ ಸಿನಿಮಾದ ಪರವಾಗಿ ಸಹ ಸಾಮಾಜಿಕ ಜಾಲತಾಣದಲ್ಲಿ ಕೆಲವರು ವಾದ ಮಂಡಿಸಿದ್ದು, ಪ್ರಭಾಸ್ ನಟನೆಯ ‘ಛತ್ರಪತಿ’ ಸಿನಿಮಾವನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದಾರೆ. ಆ ಸಿನಿಮಾನಲ್ಲಿ ಸಹ ಪ್ರಭಾಸ್ ಹಾಗೂ ಕುಟುಂಬ ತಮಿಳುನಾಡಿನಿಂದ ತಪ್ಪಿಸಿಕೊಂಡು ವೈಜಾಗ್ಗೆ ಬಂದಿರುತ್ತಾರೆ. ಆದರೆ ಅಲ್ಲಿ ಪ್ರಭಾಸ್ ಅನ್ನು ಹೀರೋ ರೀತಿ ಕಾಣಲಾಗುತ್ತದೆ. ಆದರೆ ‘ಟೂರಿಸ್ಟ್ ಫ್ಯಾಮಿಲಿ’ ಸಿನಿಮಾಕ್ಕೆ ವಿರೋಧ ಏಕೆ ಎಂದು ಪ್ರಶ್ನೆ ಮಾಡಿದ್ದಾರೆ.
‘ಛತ್ರಪತಿ’ ಸಿನಿಮಾನಲ್ಲಿ ಪ್ರಭಾಸ್, ಅವರ ತಾಯಿ, ಸಹೋದರ ಶ್ರೀಲಂಕಾದಿಂದ ತಪ್ಪಿಸಿಕೊಂಡು ಬಂದಿರುತ್ತಾರೆ. ಆದರೆ ಅವರ ದಾಖಲೆಗಳನ್ನು ಸ್ಥಳೀಯ ಸರ್ಕಾರ ತೆಗೆದುಕೊಂಡಿರುತ್ತದೆ. ಅವರು ಅಧಿಕೃತ ವಲಸಿಗರಾಗಿರುತ್ತಾರೆ, ಆದರೆ ‘ಟೂರಿಸ್ಟ್ ಫ್ಯಾಮಿಲಿ’ ಸಿನಿಮಾನಲ್ಲಿ ಸಸಿಕುಮಾರ್ ಕುಟುಂಬ ಉದ್ದೇಶಪೂರ್ವಕವಾಗಿ ಪೊಲೀಸರಿಂದ ಈ ವಿಷಯ ಮುಚ್ಚಿಡುತ್ತಾರೆ. ಅವರಿಗೆ ಸ್ಥಳೀಯರು ಸಹಕಾರ ಸಹ ನೀಡುತ್ತಾರೆ. ಎಂದು ಇನ್ನು ಕೆಲವರು ವಾದ ಮಂಡಿಸಿದ್ದಾರೆ. ಏನೇ ಆಗಲಿ, ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆದಾಗ ಇಲ್ಲದ ಚರ್ಚೆ, ಟೀಕೆ, ವಿಮರ್ಶೆಗಳು, ಈಗ ಒಟಿಟಿಗೆ ಬಂದ ಮೇಲೆ ಶುರುವಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ