ಪಂಚಾಯತ್ 4: ಪುಲ್ಹೇರಾನಲ್ಲಿ ಎಲೆಕ್ಷನ್ ಜೋರು, ಗೆಲ್ಲೋದು ಯಾರು?
Panchayat season 4: ಭಾರತದ ಬಲು ಜನಪ್ರಿಯ ವೆಬ್ ಸರಣಿ ‘ಪಂಚಾಯತ್’ ಹೊಸ ಸೀಸನ್ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಒಂದು ಸಣ್ಣ ಗ್ರಾಮದಲ್ಲಿ ನಡೆಯುವ ಸಣ್ಣ-ಪುಟ್ಟ ಘಟನೆಗಳನ್ನೇ ಇರಿಸಿಕೊಂಡು ಕಟ್ಟಿರುವ ‘ಪಂಚಾಯತ್’ ವೆಬ್ ಸರಣಿಯ ನಾಲ್ಕನೇ ಸೀಸನ್ ಬಿಡುಗಡೆ ಆಗಲಿದೆ. ಇಂದು ನಾಲ್ಕನೇ ಸೀಸನ್ನ ಟ್ರೈಲರ್ ಬಿಡುಡಗೆ ಆಗಿದೆ. ನೋಡಿದವರು ಟ್ರೈಲರ್ ಮೆಚ್ಚಿಕೊಂಡಿದ್ದಾರೆ.

ಭಾರತದ ಬಲು ಜನಪ್ರಿಯ ವೆಬ್ ಸರಣಿ ‘ಪಂಚಾಯತ್’ (Panchayat) ತನ್ನ ಐದನೇ ಸರಣಿಯೊಂದಿಗೆ ಮರಳಿ ಬಂದಿದೆ. ಸರಳವಾದ ಕತೆ, ಅತ್ಯಂತ ನೈಜ ನಟನೆ, ಹಾಸ್ಯ, ಭಾವುಕತೆ, ಪ್ರೇಮಕತೆ, ಅಸೂಯೆ, ಆಕ್ಷನ್, ಥ್ರಿಲ್ಲರ್ ಎಲ್ಲವೂ ಒಳಗೊಂಡಿರುವ ಈ ವೆಬ್ ಸರಣಿ ಇದೇ ಕಾರಣಕ್ಕೆ ಎಲ್ಲರ ಮೆಚ್ಚಿನ ಸರಣಿ ಆಗಿದೆ. ಭಾರತದಲ್ಲಿ ಅತಿ ಹೆಚ್ಚು ಸರಣಿ ಪ್ರದರ್ಶನಗೊಂಡಿರುವ ವೆಬ್ ಸರಣಿ ‘ಪುಲ್ಹೇರಾ’ ಆಗಿದೆ. ಇದೀಗ ನಾಲ್ಕನೇ ಸೀಸನ್ ಬಿಡುಗಡೆಗೆ ಸಜ್ಜಾಗಿದೆ. ಐದನೇ ಸೀಸನ್ನ ಟ್ರೈಲರ್ ಇಂದು ಯೂಟ್ಯೂಬ್ನಲ್ಲಿ ಬಿಡುಗಡೆ ಆಗಿದೆ.
ಪಂಚಾಯಿತಿ ಅಧಿಕಾರಿ, ಪಂಚಾಯಿತಿಯ ಅಧ್ಯಕ್ಷೆ, ಅಧ್ಯಕ್ಷೆಯ ಪತಿ, ಅಧ್ಯಕ್ಷೆಯ ಪತಿಯ ಇಬ್ಬರು ಚೇಲಾಗಳು, ಅಧ್ಯಕ್ಷೆಯ ಪುತ್ರಿ, ಕೂಲಿ ಕಾರ್ಮಿಕ, ಅಧ್ಯಕ್ಷ ಸೀಟಿನ ಮೇಲೆ ಕಣ್ಣಿಟ್ಟಿರುವ ವ್ಯಕ್ತಿ ಆತನ ಪತ್ನಿ ಹೀಗೆ ಒಂದು ಊರಲ್ಲಿ ಸಿಗುವ ಪಾತ್ರಗಳನ್ನೇ ಹಿಡಿದುಕೊಂಡು ಅದ್ಭುತವಾದ ಕತೆಯನ್ನು ಹೆಣೆದಿದ್ದಾರೆ. ತಮ್ಮ ಸರಳತನದಿಂದಲೇ ಈ ವೆಬ್ ಸರಣಿ ದೇಶದಾದ್ಯಂತ ಜನಪ್ರಿಯವಾಗಿದೆ. ಈಗಾಗಲೇ ತೆಲುಗಿಗೆ ರೀಮೇಕ್ ಸಹ ಆಗಿದೆ.
ಇದೀಗ ಈ ವೆಬ್ ಸರಣಿಯ ನಾಲ್ಕನೇ ಸೀಸನ್ ಬಿಡುಗಡೆಗೆ ಸಜ್ಜಾಗಿದೆ. ಈ ಬಾರಿ ಪುಲ್ಹೇರಾ ಊರಿನಲ್ಲಿ ಚುನಾವಣೆ ನಡೆಯುತ್ತಿದೆ. ಹಾಲಿ ಅಧ್ಯಕ್ಷೆ ಮಂಜು ದೇವಿ ಮತ್ತೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರ ಎದುರಾಳಿಯಾಗಿ ಬನ್ರಾಕಸ್ ಪತ್ನಿ ಕ್ರಾಂತಿ ದೇವಿ ಸ್ಪರ್ಧಿಸಿದ್ದಾರೆ. ಈ ಚುನಾವಣೆ ಫಲಿತಾಂಶದ ಮೇಲೆ ಪಂಚಾಯಿತಿ ಅಧಿಕಾರಿ ಅಭಿಷೇಕ್ ಅವರ ಜೀವನ ನಿರತವಾಗಿದೆ. ಮಂಜು ದೇವಿ ಗೆದ್ದರೆ ಅಭಿಷೇಕ್ ಅಧಿಕಾರಿ ಸ್ಥಾನದಲ್ಲಿ ಉಳಿಯಲಿದ್ದಾರೆ, ಸೋತರೆ ರಾಜೀನಾಮೆ ಕೊಟ್ಟು ಹೋಗಲೇ ಬೇಕಿದೆ.
ಇದನ್ನೂ ಓದಿ:ಹಾಲಿವುಡ್ ಭಾರಿ ಬಜೆಟ್ ವೆಬ್ ಸರಣಿಯಲ್ಲಿ ಟಬು, ವಾವ್ ಎಂದ ನೆಟ್ಟಿಗರು
ಈಗ ಬಿಡುಗಡೆ ಆಗಿರುವ ಟ್ರೈಲರ್ ನೋಡಿದರೆ ಕ್ಷೇತ್ರದ ಶಾಸಕ ಬನ್ರಾಕಸ್ ಮತ್ತು ಆತನ ಪತ್ನಿ ಕ್ರಾಂತಿ ದೇವಿಗೆ ಬೆಂಬಲ ನೀಡಿದ್ದಾರೆ. ಮಂಜು ದೇವಿ ಹಾಗೂ ಪ್ರಧಾನ್ ಅವರ ಹವಾ ಊರಿನಲ್ಲಿ ಕಡಿಮೆ ಆದಂತೆ ಕಾಣುತ್ತಿದ್ದು, ಚುನಾವಣೆ ಪ್ರಚಾರ ತಂತ್ರ, ಕುತಂತ್ರ ಬಲು ಜೋರಾಗಿ ನಡೆಯುತ್ತಿದೆ. ಇದರ ನಡುವೆ ಊರಲ್ಲಿ ಗಲಾಟೆಗಳು ಸಹ ನಡೆದಿವೆ. ಚುನಾವಣೆಯಲ್ಲಿ ಅಂತಿಮವಾಗಿ ಯಾರು ಗೆಲ್ಲುತ್ತಾರೆ? ಸಚಿವ್ಜೀ (ಪಂಚಾಯಿತಿ ಅಧಿಕಾರಿ) ಪಂಚಾಯಿತಿಯಲ್ಲಿ ಉಳಿಯುತ್ತಾರಾ ಅಥವಾ ಹೊರಡುತ್ತಾರಾ ಇತರೆ ವಿಷಯಗಳು ವೆಬ್ ಸರಣಿ ಬಿಡುಗಡೆ ಆದ ಬಳಿಕವೇ ತಿಳಿಯಲಿದೆ. ಅಮೆಜಾನ್ ಪ್ರೈಂ ವಿಡಿಯೋನಲ್ಲಿ ‘ಪಂಚಾಯತ್ ಸೀಸನ್ 4’ ಜೂನ್ 24ಕ್ಕೆ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:36 pm, Wed, 11 June 25