Alia Bhat: ಗಂಡಸರ ಮೇಲಿನ ದೌರ್ಜನ್ಯಕ್ಕೆ ಆಲಿಯಾ ಭಟ್ ಚಿತ್ರದಿಂದ ಪ್ರಚೋದನೆ; ‘ಡಾರ್ಲಿಂಗ್ಸ್’ ಬಹಿಷ್ಕಾರಕ್ಕೆ ನೆಟ್ಟಿಗರ ಒತ್ತಾಯ
Darlings | Netflix: ‘ಡಾರ್ಲಿಂಗ್ಸ್’ ಚಿತ್ರದಲ್ಲಿ ಗಂಡನಿಗೆ ಮನಬಂದಂತೆ ಥಳಿಸುವ ಹೆಂಡತಿಯಾಗಿ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಗಂಡಸರ ಮೇಲಿನ ದೌರ್ಜನ್ಯವನ್ನು ಪ್ರಚೋದಿಸಲಾಗುತ್ತಿದೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.
ಅನೇಕ ಸಿನಿಮಾಗಳಿಗೆ ಈಗ ಬಹಿಷ್ಕಾರದ (Boycott) ಬಿಸಿ ತಟ್ಟುತ್ತಿದೆ. ನಟ-ನಟಿಯರು ಏನಾದರೂ ತಪ್ಪು ಮಾಡಿದರೆ ಅಂಥವರಿಗೆ ಜನರು ಬ್ಯಾನ್ ಮೂಲಕ ಪಾಠ ಕಲಿಸುತ್ತಾರೆ. ಸದ್ಯ ಆಮಿರ್ ಖಾನ್ ಅವರ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾವನ್ನು ಬಹಿಷ್ಕರಿಸಬೇಕು ಎಂಬ ಅಭಿಯಾನ ನಡೆಯುತ್ತಿದೆ. ಅದರ ಬೆನ್ನಲ್ಲೇ ಆಲಿಯಾ ಭಟ್ (Alia Bhat) ನಟನೆಯ ‘ಡಾರ್ಲಿಂಗ್ಸ್’ ಚಿತ್ರ ಕೂಡ ಸಂಕಷ್ಟಕ್ಕೆ ಸಿಲುಕಿದೆ. ಈ ಸಿನಿಮಾದಲ್ಲಿ ಗಂಡಸರ ಮೇಲಿನ ದೌರ್ಜನ್ಯವನ್ನು ಪ್ರಚೋದಿಸುವಂತಹ ದೃಶ್ಯಗಳು ಇವೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಹಾಗಾಗಿ ಈ ಸಿನಿಮಾವನ್ನು ಬಹಿಷ್ಕಾರ ಮಾಡಲು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಶುರುವಾಗಿದೆ. ನೆಟ್ಫ್ಲಿಕ್ಸ್ ಮೂಲಕ ಆಗಸ್ಟ್ 5ರಂದು ‘ಡಾರ್ಲಿಂಗ್ಸ್’ (Darlings Movie) ಸಿನಿಮಾ ಬಿಡುಗಡೆ ಆಗಲಿದೆ. ರಿಲೀಸ್ ಹೊಸ್ತಿಲಿನಲ್ಲಿ #BoycottDarlings #BoycottAliaBhatt ಹ್ಯಾಶ್ ಟ್ಯಾಗ್ಗಳು ಟ್ರೆಂಡ್ ಆಗಿವೆ.
ಹಿಂದಿ ಚಿತ್ರರಂಗದ ಸ್ಥಿತಿ ಸದ್ಯ ಕಷ್ಟದಲ್ಲಿದೆ. ಜನರು ಚಿತ್ರಮಂದಿರಕ್ಕೆ ಬಂದು ಬಾಲಿವುಡ್ ಸಿನಿಮಾಗಳನ್ನು ನೋಡಲು ಹಿಂದೇಟು ಹಾಕುತ್ತಿದ್ದಾರೆ. ನೇರವಾಗಿ ಒಟಿಟಿ ಮೂಲಕ ರಿಲೀಸ್ ಮಾಡಿದರೆ ಉತ್ತಮ ಎಂಬುದು ಕೆಲವು ನಿರ್ಮಾಪಕರ ಅಭಿಪ್ರಾಯ. ಅದೇ ರೀತಿ ‘ಡಾರ್ಲಿಂಗ್ಸ್’ ಕೂಡ ಒಟಿಟಿ ಮೂಲಕ ಬಿಡುಗಡೆ ಆಗಲಿದೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿತ್ತು. ಅದನ್ನು ಕಂಡು ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಡಾರ್ಲಿಂಗ್ಸ್’ ಸಿನಿಮಾದಲ್ಲಿ ಆಲಿಯಾ ಭಟ್, ವಿಜಯ್ ವರ್ಮಾ, ಶೆಫಾಲಿ ಶಾ, ರೋಹನ್ ಮ್ಯಾಥೀವ್ ಮುಂತಾದವರು ನಟಿಸಿದ್ದಾರೆ. ತನಗೆ ಹಿಂಸೆ ನೀಡಿದ ಗಂಡನನ್ನು ಕಿಡ್ನಾಪ್ ಮಾಡಿ, ಆತನಿಗೂ ಅದೇ ರೀತಿಯಲ್ಲಿ ಹಿಂಸೆ ನೀಡುವ ಮೂಲಕ ಸೇಡು ತೀರಿಸಿಕೊಳ್ಳುವ ಪತ್ನಿಯ ಕಥೆ ಈ ಸಿನಿಮಾದಲ್ಲಿ ಇದೆ ಎಂಬುದು ಟ್ರೇಲರ್ನಲ್ಲಿ ಗೊತ್ತಾಗಿದೆ. ಗಂಡನಿಗೆ ಮನಬಂದಂತೆ ಥಳಿಸುವ ಹೆಂಡತಿಯಾಗಿ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮೂಲಕ ಗಂಡಸರ ಮೇಲಿನ ದೌರ್ಜನ್ಯವನ್ನು ಪ್ರಚೋದಿಸಲಾಗುತ್ತಿದೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.
Empowering men is necessary nowadays and what alia bhatt is doing ?? ?#BoycottAliaBhatt
— ?????? (@AryanMane45) August 4, 2022
ಆಲಿಯಾ ಭಟ್ ಅವರಿಗೆ ಈ ವರ್ಷ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದ ಮೂಲಕ ಗೆಲುವು ಸಿಕ್ಕಿದೆ. ಆದರೆ ಈಗ ಅವರ ಹೊಸ ಚಿತ್ರಕ್ಕೆ ಜನರು ಬಹಿಷ್ಕಾರದ ಭೀತಿ ಹುಟ್ಟಿಸಿದ್ದಾರೆ. ಈ ಸಿನಿಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗುತ್ತಿರುವುದರಿಂದ ಚಿತ್ರತಂಡಕ್ಕೆ ಬರಬೇಕಾದ ಲಾಭ ಈಗಾಗಲೇ ಬಂದಿರುತ್ತದೆ. ಹಾಗಾಗಿ ಯಾರೇ ಬಹಿಷ್ಕಾರ ಎಂದು ಬಾಯಿ ಬಡಿದುಕೊಂಡರೂ ಚಿತ್ರತಂಡಕ್ಕೆ ನಷ್ಟ ಆಗುವುದಿಲ್ಲ.
Published On - 12:16 pm, Thu, 4 August 22