ಈ ವಾರ ಒಟಿಟಿಗೆ ಬಂದಿವೆ ಹಿಟ್ ಸಿನಿಮಾಗಳು: ಪಟ್ಟಿ ಇಲ್ಲಿದೆ
OTT Release this week: ಈ ವಾರ ಚಿತ್ರಮಂದಿರದಲ್ಲಿ ಕೆಲ ಒಳ್ಳೆಯ ಸಿನಿಮಾಗಳಿವೆ. ಸುದೀಪ್ ನಟನೆಯ ‘ಮಾರ್ಕ್’, ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ ‘45’ ಸೇರಿದಂತೆ ಪರಭಾಷೆಯ ಕೆಲ ಒಳ್ಳೆಯ ಸಿನಿಮಾಗಳು ಸಹ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿವೆ. ಚಿತ್ರಮಂದಿರಗಳು ಮಾತ್ರವಲ್ಲ ಒಟಿಟಿಯಲ್ಲಿಯೂ ಕೆಲ ಒಳ್ಳೆಯ ಸಿನಿಮಾಗಳು ಬಿಡುಗಡೆ ಆಗಿವೆ. ಇಲ್ಲಿದೆ ನೋಡಿ ಪಟ್ಟಿ...
Updated on: Dec 27, 2025 | 9:41 AM

ಕನ್ನಡದ ನಟ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿರುವ ತೆಲುಗು ಸಿನಿಮಾ ‘ಆಂಧ್ರ ಕಿಂಗ್ ತಾಲೂಕ’ ಸಿನಿಮಾ ಇದೇ ವಾರ ಒಟಿಟಿಗೆ ಬಂದಿದೆ. ರಾಮ್ ಪೋತಿನೇನಿ ನಾಯಕನಾಗಿ ನಟಿಸಿರುವ ಈ ಸಿನಿಮಾವನ್ನು ನೆಟ್ಫ್ಲಿಕ್ಸ್ನಲ್ಲಿ ವೀಕ್ಷಿಸಬಹುದಾಗಿದೆ.

‘ಬಾಹುಬಲಿ’ ಸಿನಿಮಾದ ಎರಡೂ ಭಾಗಗಳನ್ನು ಒಂದೇ ಭಾಗವನ್ನಾಗಿ ‘ಬಾಹುಬಲಿ: ದಿ ಎಪಿಕ್’ ಮಾಡಿ ಇತ್ತೀಚೆಗಷ್ಟೆ ಮರು ಬಿಡುಗಡೆ ಮಾಡಲಾಗಿತ್ತು. ಮರು ಬಿಡುಗಡೆಗೆ ಮುಂಚೆ ಒಟಿಟಿಯಲ್ಲಿದ್ದ ‘ಬಾಹುಬಲಿ’ ಸಿನಿಮಾಗಳನ್ನು ತೆಗೆಯಲಾಗಿತ್ತು. ಇದೀಗ ‘ಬಾಹುಬಲಿ: ದಿ ಎಪಿಕ್’ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿದ್ದು ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ನೋಡಬಹುದಾಗಿದೆ.

ಮುನಿಕಾಂತ್, ರಾಧಾ ರವಿ ಇನ್ನೂ ಕೆಲವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಮಿಡ್ಲ್ ಕ್ಲಾಸ್’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಮಧ್ಯಮವರ್ಗಗಳ ಬದುಕು, ಬವಣೆಗಳನ್ನು ಹಾಸ್ಯಪ್ರಧಾನವಾಗಿ ಸಿನಿಮಾನಲ್ಲಿ ತೋರಿಸಲಾಗಿದೆ. ಸಿನಿಮಾ ಅನ್ನು ಜೀ5ನಲ್ಲಿ ವೀಕ್ಷಿಸಬಹುದಾಗಿದೆ.

ಮಲಯಾಳಂ ಥ್ರಿಲ್ಲರ್ ಸಿನಿಮಾ ‘ಪ್ಯಾರಡೈಸ್’ ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ನೆಟ್ಫ್ಲಿಕ್ಸ್ನಲ್ಲಿ ಸಿನಿಮಾವನ್ನು ವೀಕ್ಷಿಸಬಹುದಾಗಿದೆ. ಶ್ರೀಲಂಕಾಗೆ ಹೋಗುವ ದಂಪತಿ ಅಲ್ಲಿ ಅನುಭವಿಸುವ ಸಂಕಷ್ಟದ ಕತೆ ಸಿನಿಮಾನಲ್ಲಿದೆ. ‘ಪ್ಯಾರಡೈಸ್’ ಸಿನಿಮಾವನ್ನು ನೆಟ್ಫ್ಲಿಕ್ಸ್ನಲ್ಲಿ ವೀಕ್ಷಿಸಬಹುದಾಗಿದೆ.

ಸ್ಟಾರ್ ನಟಿ ಕೀರ್ತಿ ಸುರೇಶ್ ನಟಿಸಿರುವ ಕಾಮಿಡಿ ಥ್ರಿಲ್ಲರ್ ಸಿನಿಮಾ ‘ರಿವಾಲ್ವರ್ ರೀಟಾ’ ಇತ್ತೀಚೆಗಷ್ಟೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿತ್ತು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ‘ರಿವಾಲ್ವರ್ ರೀಟಾ’ ಸಿನಿಮಾವನ್ನು ನೆಟ್ಫ್ಲಿಕ್ಸ್ನಲ್ಲಿ ವೀಕ್ಷಿಸಬಹುದಾಗಿದೆ.

‘ಸ್ಟ್ರೇಂಜರ್ ಥಿಂಗ್ಸ್’ ವಿಶ್ವದ ಬಲು ಜನಪ್ರಿಯ ವೆಬ್ ಸರಣಿಗಳಲ್ಲಿ ಒಂದಾಗಿದೆ. ಈ ವೆಬ್ ಸರಣಿ ಹಲವು ವರ್ಷಗಳಿಂದ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗುತ್ತಲೇ ಬರುತ್ತಿದೆ. ಇದೀಗ ‘ಸ್ಟ್ರೇಂಜರ್ ಥಿಂಗ್ಸ್’ ಸರಣಿಯ ಐದನೇ ಸೀಸನ್ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ.




