
ಪ್ರಶಾಂತ್ ನೀಲ್ ಪ್ರೆಸೆಂಟ್ ಮಾಡಿ, ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿರುವ ಹಾರರ್ ಸಿನಿಮಾ ‘418’ ಈ ವಾರ ಒಟಿಟಿಗೆ ಬಂದಿದೆ. ಚೈತ್ರಾ ಆಚಾರ್ ಸೇರಿದಂತೆ ಕನ್ನಡದ ಹಲವು ಕಲಾವಿದರು ನಟನೆ ಮಾಡಿರುವ ಇದೊಂದು ಹಾರರ್-ಥ್ರಿಲ್ಲರ್ ಕಥಾನಕ ಹೊಂದಿರುವ ಸಿನಿಮಾ ಆಗಿದ್ದು, ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ವೀಕ್ಷಣೆಗೆ ಲಭ್ಯವಿದೆ.
ಮಲಯಾಳಂ ಸಿನಿಮಾ ‘ಚಿರಮ್’ ನವಿರಾದ ಪ್ರೇಮಕತೆ ಹೊಂದಿರುವ ಸಿನಿಮಾ. ಬೌಲ್ ಸಂಗೀತದ ಬಗ್ಗೆ ಸಂಶೋಧನೆ ನಡೆಸುವ ನಾಯಕಿ, ಫೋಟೊಗ್ರಾಫರ್ ಒಬ್ಬರೊಟ್ಟಿಗೆ ಪ್ರೀತಿಯಲ್ಲಿ ಬಿದ್ದು ಆತನೊಟ್ಟಿಗೆ ಕೇರಳದ ಕಾಡುಗಳಲ್ಲಿ ಬುಡಕಟ್ಟು ಸಮುದಾಯಗಳನ್ನು ಭೇಟಿ ಆಗುತ್ತಾಳೆ. ಬಳಿಕ ಫೋಟೊಗ್ರಾಫರ್ ಕಾಣೆ ಆಗುತ್ತಾನೆ. ಮುಂದೇನಾಗುತ್ತದೆ ಎಂಬುದೇ ಕತೆ. ಸಿನಿಮಾ ಸನ್ ನೆಕ್ಸ್ಟ್ನಲ್ಲಿ ವೀಕ್ಷಣೆಗೆ ಲಭ್ಯವಿದೆ.
‘ಕ್ರೇಜಿ ಕಲ್ಯಾಣಂ’ ತೆಲುಗಿನ ಹಾಸ್ಯ ಪ್ರಧಾನ ಕೌಟುಂಬಿಕ ಸಿನಿಮಾ. ದೊಡ್ಡ ಅಳಿಯನ ವರ್ತನೆಯಿಂದ ಕಿರಿ ಮಗಳನ್ನು ವಿದೇಶದ ವರನಿಗೆ ಮದುವೆ ಮಾಡಿಕೊಡುವ ಪ್ರಯತ್ನ ಮಾಡುವ ಅಪ್ಪನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಆಹಾ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ.
ಜನಪ್ರಿಯ ಯೂಟ್ಯೂಬರ್ ಭುವನ್ ಭಾಮ್ ಒಬ್ಬರೇ ವಿವಿಧ ಪಾತ್ರಗಳಲ್ಲಿ ನಟಿಸಿ ನಿರ್ಮಾಣ ಮಾಡಿರುವ ವೆಬ್ ಸರಣಿ. ವೆಬ್ ಸರಣಿಯ ಮೊದಲ ಭಾಗ ಈಗಾಗಲೇ ರಿಲೀಸ್ ಆಗಿದೆ. ಇದೀಗ ಇದೇ ವೆಬ್ ಸರಣಿಯ ಎರಡನೇ ಸೀಸನ್ ನೆಟ್ಫ್ಲಿಕ್ಸ್ನಲ್ಲಿ ಈ ವಾರ ತೆರೆಗೆ ಬಂದಿದೆ.
‘ಮಾಂಗ್ಲಿಕ್’ ಬೆಂಗಾಳಿ ಮೂಲ ವೆಬ್ ಸರಣಿ ಈ ವಾರ ಒಟಿಟಿಗೆ ಬಂದಿದೆ. ನೆಟ್ಫ್ಲಿಕ್ಸ್ನಲ್ಲಿ ಹಲವು ಭಾಷೆಗಳಲ್ಲಿ ಲಭ್ಯವಿರುವ ಈ ವೆಬ್ ಸರಣಿ ಕನ್ನಡದ ‘ಅಯ್ಯನ ಮನೆ’ ವೆಬ್ ಸರಣಿಯ ಕತೆಯನ್ನು ಹೋಲುವಂತಿದೆ. ಆದರೆ ಇದು ರೀಮೇಕ್ ಅಲ್ಲ.
ಕ್ಟಿಸ್ಟೊಫರ್ ನೋಲನ್ ನಿರ್ದೇಶನದ ‘ದಿ ಆಡಸ್ಸಿ’ ಸಿನಿಮಾ ಇದೇ ವರ್ಷ ಜುಲೈ ತಿಂಗಳಲ್ಲಿ ವಿಶ್ವದಾದ್ಯಂತ ಬಿಡುಗಡೆ ಆಗಿ ಭಾರಿ ಮೆಚ್ಚುಗೆ ಗಳಿಸಿತ್ತು. ಆ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಸಿನಿಮಾ ಆಪಲ್ ಟಿವಿ, ಅಮೆಜಾನ್ ಸೇರಿದಂತೆ ಇನ್ನೂ ಕೆಲ ಒಟಿಟಿಗಳಿಗೆ ರಿಲೀಸ್ ಆಗಿದೆ. ಆದರೆ ಸದ್ಯಕ್ಕೆ ಅದು ಪೇ ಪರ್ ವೀವ್ ಮಾದರಿಯಲ್ಲಿ ಮಾತ್ರ ವೀಕ್ಷಣೆಗೆ ಲಭ್ಯವಿದೆ.