ಈ ವಾರ ಒಟಿಟಿಗೆ ಬಂದಿವೆ ಭರ್ಜರಿ ಸಿನಿಮಾಗಳು
OTT Release this week: ಪ್ರತಿ ವಾರದಂತೆ ಈ ವಾರವೂ ಸಹ ಒಟಿಟಿಗೆ ಕೆಲವು ಒಳ್ಳೆಯ ಸಿನಿಮಾಗಳು ಬಂದಿವೆ. ಕನ್ನಡ ಸೇರಿದಂತೆ ಪರ ಭಾಷೆಯ ಕೆಲವು ಹಿಟ್ ಹಾಗೂ ಸೂಪರ್ ಹಿಟ್ ಸಿನಿಮಾಗಳು ಈ ವಾರ ಒಟಿಟಿಗೆ ಬಂದಿವೆ. ಯಾವ ಯಾವ ಸಿನಿಮಾಗಳು ಯಾವ ಯಾವ ಒಟಿಟಿಗಳಲ್ಲಿ ವೀಕ್ಷಿಸಬಹುದು? ಇಲ್ಲಿದೆ ನೋಡಿ ಪೂರ್ಣ ಪಟ್ಟಿ...

Ott Release This Week
- ವಿನಯ್ ರಾಜ್ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿ ಸಿಂಪಲ್ ಸುನಿ ನಿರ್ದೇಶನ ಮಾಡಿರುವ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಅಸಲಿಗೆ ಈ ಹಿಂದೆಯೇ ಈ ಸಿನಿಮಾ ಅಮೆಜಾನ್ ಪ್ರೈಂಗೆ ಬಂದಿತ್ತು. ಈಗ ಜೀ5ನಲ್ಲೂ ಬಿಡುಗಡೆ ಆಗಿದೆ.
- ತಿಲಕ್, ಪ್ರಿಯಾ ಹೆಗಡೆ, ಸಂತೋಷ ನಂದಿವಾಡ, ಅಪೂರ್ವ ನಾಗರಾಜ್ ಇನ್ನೂ ಕೆಲವರು ಮುಖ್ಯ ಪಾತ್ರಗಳಲ್ಲಿ ನಟಿಸಿರುವ ‘ಉಸಿರು’ ಕನ್ನಡ ಸಿನಿಮಾ ಇದೇ ವಾರದಿಂದ ಸನ್ ನೆಕ್ಸ್ಟ್ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಸಿನಿಮಾ ನಿರ್ದೇಶನ ಮಾಡಿರುವುದು ಪಣೆಮ್ ಪ್ರಭಾಕರ್ ಅವರದ್ದು.
- ಚಿಯಾನ್ ವಿಕ್ರಂ ಅವರ ಪುತ್ರ ಧ್ರುವ್ ನಟಿಸಿ ಮಾರಿ ಸೆಲ್ವರಾಜ್ ನಿರ್ದೇಶನ ಮಾಡಿರುವ ‘ಬೈಸನ್’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿತ್ತು, ಜೊತೆಗೆ ವಿಮರ್ಶಕರಿಂದಲೂ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ಈ ವಾರದಿಂದ ಸಿನಿಮಾವನ್ನು ನೆಟ್ಫ್ಲಿಕ್ಸ್ನಲ್ಲಿ ನೋಡಬಹುದಾಗಿದೆ.
- ಈ ಬಾರಿ ಭಾರತದಿಂದ ಅಧಿಕೃತವಾಗಿ ಆಸ್ಕರ್ಗೆ ಪ್ರವೇಶ ಪಡೆದಿರುವ ಸಿನಿಮಾ ‘ಹೋಂ ಬೌಂಡ್’ ಕರಣ್ ಜೋಹರ್ ನಿರ್ಮಿಸಿ, ಜಾನ್ಹವಿ ಕಪೂರ್, ಇಶಾನ್ ಕಟ್ಟರ್, ವಿಶಾಲ್ ಜೇಟ್ವಾ ನಟಿಸಿರುವ ‘ಹೋಂಬೌಂಡ್’ ಸಿನಿಮಾ ಈ ವಾರ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ. ಸಿನಿಮಾ ವಿಮರ್ಶಕರ ಮೆಚ್ಚುಗೆ ಪಡೆದಿದೆ.
- ಹಿಂದಿ ವೆಬ್ ಸರಣಿಗಳಲ್ಲಿ ಕೆಲವೇ ವೆಬ್ ಸರಣಿಗಳು ಮಾತ್ರವೇ ಹೆಚ್ಚು ಜನಪ್ರಿಯ ಅದರಲ್ಲಿ ಒಂದು ‘ದಿ ಫ್ಯಾಮಿಲಿ ಮ್ಯಾನ್’ ಮನೋಜ್ ಬಾಜಪೇಯಿ, ಪ್ರಿಯಾಮಣಿ ಮುಖ್ಯಪಾತ್ರಗಳಲ್ಲಿ ನಟಿಸಿರುವ ಈ ವೆಬ್ ಸರಣಿ ಅಮೆಜಾನ್ ಪ್ರೈಂನಲ್ಲಿ ಈ ವಾರ ಸ್ಟ್ರೀಮಿಂಗ್ ಆರಂಭಿಸಿದೆ. ರಾಜ್ ಆಂಡ್ ಡಿಕೆ ಈ ವೆಬ್ ಸರಣಿ ನಿರ್ದೇಶಿಸಿದ್ದಾರೆ.
- ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿರುವ ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ಬಿಡುಗಡೆಗೆ ಮುಂಚೆ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಪಶ್ಚಿಮ ಬಂಗಾಳ ಸರ್ಕಾರವು ಈ ಸಿನಿಮಾದ ನಿಷೇಧಕ್ಕೂ ಯತ್ನಿಸಿತ್ತು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ಈ ಸಿನಿಮಾವನ್ನು ಜೀ5ನಲ್ಲಿ ವೀಕ್ಷಿಸಬಹುದಾಗಿದೆ.










