ಈ ವಾರ ಒಟಿಟಿಗೆ ಬಂದಿವೆ ಭರ್ಜರಿ ಸಿನಿಮಾಗಳು, ಕನ್ನಡ ಸಿನಿಮಾಗಳೂ ಇವೆ
OTT Release this week: ಚಿತ್ರಮಂದಿರಗಳು ಡಲ್ ಆಗಿರುವಾಗೆಲ್ಲ ಒಟಿಟಿಗಳು ಅದರ ಲಾಭ ಪಡೆದುಕೊಳ್ಳುತ್ತವೆ. ಈ ವಾರ ಚಿತ್ರಮಂದಿರಗಳಲ್ಲಿ ದೊಡ್ಡ ನಟರ ಸಿನಿಮಾಗಳು ಬಿಡುಗಡೆ ಆಗಿಲ್ಲ. ಅದರ ಬೆನ್ನಲ್ಲೆ ಒಟಿಟಿಯಲ್ಲಿ ಕೆಲವು ಬ್ಲಾಕ್ ಬಸ್ಟರ್ ಸಿನಿಮಾಗಳು ಬಿಡುಗಡೆ ಆಗಿವೆ. ವಿಶೇಷವೆಂದರೆ ಕನ್ನಡದ ನಾಲ್ಕು ಸಿನಿಮಾಗಳು ಈ ವಾರ ಒಟಿಟಿಗೆ ಬಂದಿವೆ. ಪರಭಾಷೆಯ ಹಿಟ್ ಸಿನಿಮಾಗಳೂ ಸಹ ಇವೆ. ಇಲ್ಲಿದೆ ಪಟ್ಟಿ...

Ott Release This Week
- ರಂಗಾಯಣ ರಘು ಮುಖ್ಯ ಪಾತ್ರದಲ್ಲಿ ನಟಿಸಿರುವ ಕನ್ನಡದ ಭಿನ್ನ ಪ್ರಯತ್ನ, ಅದ್ಭುತ ಥ್ರಿಲ್ಲರ್ ಸಿನಿಮಾ ‘ಅಜ್ಞಾತವಾಸಿ’ ಈ ವಾರ ಒಟಿಟಿಗೆ ಬಂದಿದೆ. ಈ ವಾರ ಈ ಸಿನಿಮಾ ಜೀ 5ಗೆ ಬಂದಿದ್ದು, ವೀಕ್ಷಣೆಗೆ ಲಭ್ಯವಿದೆ.
- ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ವಿಭಿನ್ನ ಪ್ರಯತ್ನ ‘ವೀರಚಂದ್ರಹಾಸ’ ಸಿನಿಮಾ ಇದೇ ವಾರ ಒಟಿಟಿಗೆ ಬಂದಿದೆ. ಯಕ್ಷಗಾನವನ್ನು ಆಧರಿಸಿ ಮಾಡಿದ ಸಿನಿಮಾ ಇದಾಗಿದ್ದು, ಶಿವರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಅಮೆಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ.
- ಪೂರ್ಣಚಂದ್ರ ಮೈಸೂರು ಮುಖ್ಯ ಪಾತ್ರದಲ್ಲಿ ನಟಿಸಿರುವ ಥ್ರಿಲ್ಲರ್ ಸಿನಿಮಾ ‘ನಿಮಿತ್ತ ಮಾತ್ರ’. 15 ವರ್ಷದ ಹಿಂದೆ ನಡೆದ ಘಟನೆಯ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಸನ್ನೆಕ್ಟ್ಸ್ ನಲ್ಲಿ ಸ್ಟ್ರೀಂ ಆಗುತ್ತಿದೆ. ಅಂತರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡಿರುವ ‘ಮೈ ಹೀರೋ’ ಸಿನಿಮಾ ಇದೇ ವಾರ ಅಮೆಜಾನ್ ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.
- ಎಸ್ಎಸ್ ರಾಜಮೌಳಿ, ಸ್ಟಾರ್ ನಟ ಸೂರ್ಯ ಸೇರಿದಂತೆ ಹಲವರಿಗೆ ಇಷ್ಟವಾದ ಸರಳವಾದ ತಮಿಳು ಸಿನಿಮಾ ‘ಟೂರಿಸ್ಟ್ ಪ್ಯಾಮಿಲಿ’ ಇದೇ ವಾರ ಒಟಿಟಿಗೆ ಬಂದಿದೆ. ಈ ಸಿನಿಮಾ ಜಿಯೋ ಹಾಟ್ಸ್ಟಾರ್ನಲ್ಲಿ ನೋಡಲು ಲಭ್ಯವಿದೆ.
- ತಮಿಳಿನ ಸ್ಟಾರ್ ನಟ ಸೂರ್ಯ ಮತ್ತು ಪೂಜಾ ಹೆಗ್ಡೆ ನಟಿಸಿ ಕಾರ್ತಿಕ್ ಸುಬ್ಬರಾಜು ನಿರ್ದೇಶನ ಮಾಡಿರುವ ‘ರೆಟ್ರೊ’ ಸಿನಿಮಾ ಇದೇ ವಾರ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ. ಕೆಲವೇ ವಾರಗಳ ಹಿಂದೆ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು.
- ಮೋಹನ್ಲಾಲ್ ನಟನೆಯ ‘ತುಡರುಂ’ ಸಿನಿಮಾ ಏಪ್ರಿಲ್ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಭಾರಿ ದೊಡ್ಡ ಹಿಟ್ ಆಗಿತ್ತು. ಇದೀಗ ಈ ಸಿನಿಮಾ ಜಿಯೋ ಹಾಟ್ಸ್ಟಾರ್ನಲ್ಲಿ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಪಾಸಿಟಿವ್ ವಿಮರ್ಶೆಗಳಿವೆ.
- ನ್ಯಾಚುರಲ್ ಸ್ಟಾರ್ ನಾನಿ ಹಾಗೂ ಕನ್ನಡತಿ ಶ್ರೀನಿಧಿ ಶೆಟ್ಟಿ ನಟಿಸಿರುವ ‘ಹಿಟ್ 3’ ಸಿನಿಮಾ ಈ ವಾರ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಚಿತ್ರಮಂದಿರಗಳಲ್ಲಿ ಹಿಟ್ ಆದ ಈ ಸಿನಿಮಾಕ್ಕೆ ಒಟಿಟಿಯಲ್ಲಿಯೂ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ.
- ಸನ್ನಿ ಡಿಯೋನ್ ನಟನೆಯ ಆಕ್ಷನ್ ಬ್ಲಾಕ್ ಬಸ್ಟರ್ ಸಿನಿಮಾ ‘ಜಾಟ್’ ಇದೇ ವಾರ ಒಟಿಟಿಗೆ ಬಂದಿದೆ. ಚಿತ್ರಮಂದಿರಗಳಲ್ಲಿ ಭಾರಿ ಹಿಟ್ ಆಗಿತ್ತು ಈ ಸಿನಿಮಾ. ‘ಜಾಟ್’ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ವೀಕ್ಷಿಸಬಹುದಾಗಿದೆ.












