Shah Rukh Khan: ‘ಪಠಾಣ್’ ಚಿತ್ರದ ಪ್ರೇಕ್ಷಕರಿಗೆ ಒಟಿಟಿಯಲ್ಲಿ ಕಾದಿದೆ ಅಚ್ಚರಿ; ಮಾ.22ರಂದು ಡಿಲಿಟೆಡ್ ದೃಶ್ಯಗಳ ದರ್ಶನ?
Pathaan Movie OTT Release: ‘ಪಠಾಣ್’ ಚಿತ್ರದ ಡಿಲಿಟೆಡ್ ಸೀನ್ಗಳನ್ನು ಒಟಿಟಿ ವರ್ಷನ್ನಲ್ಲಿ ಸೇರಿಸಲಾಗುವುದು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ.
ಈ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ‘ಪಠಾಣ್’ ಚಿತ್ರ (Pathaan Movie) ಅಗ್ರಸ್ಥಾನ ಪಡೆದುಕೊಂಡಿದೆ. ವಿಶ್ವ ಮಾರುಕಟ್ಟೆಯಲ್ಲಿ ಈ ಸಿನಿಮಾಗೆ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಥಿಯೇಟರ್ನಲ್ಲಿ ಈ ಚಿತ್ರ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ‘ಪಠಾಣ್’ ಒಟಿಟಿ ರಿಲೀಸ್ ದಿನಾಂಕ ಕೂಡ ಬಹಿರಂಗ ಆಗಿದೆ. ಮಾರ್ಚ್ 22ರಂದು ‘ಅಮೇಜಾನ್ ಪ್ರೈಂ ವಿಡಿಯೋ’ (Amazon Prime Video) ಮೂಲಕ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ. ಚಿತ್ರಮಂದಿರದಲ್ಲಿ ನೋಡಿದ ಸಿನಿಮಾವನ್ನು ಮತ್ತೆ ಯಾಕೆ ಒಟಿಟಿಯಲ್ಲಿ ನೋಡಬೇಕು ಅಂತ ಕೆಲವರು ನಿರ್ಲಕ್ಷ್ಯ ಮಾಡಬಹುದು. ಆದರೆ ‘ಪಠಾಣ್’ ವಿಚಾರದಲ್ಲಿ ಹಾಗೆ ಮಾಡುವಂತಿಲ್ಲ. ಶಾರುಖ್ ಖಾನ್ ಅಭಿಮಾನಿಗಳಿಗೆ ಒಟಿಟಿಯಲ್ಲಿ ಅಚ್ಚರಿ ಇರಲಿದೆ. ಒಟಿಟಿ ವರ್ಷನ್ನಲ್ಲಿ ಪಠಾಣ್ ಸಿನಿಮಾದ ಡಿಲಿಟೆಡ್ ದೃಶ್ಯಗಳನ್ನು (Pathaan Deleted Scenes) ಸೇರಿಸಲಾಗುವುದು ಎಂಬ ಮಾತು ಕೇಳಿಬಂದಿದೆ.
ಚಿತ್ರದ ಅವಧಿಯನ್ನು ಗಮನದಲ್ಲಿ ಇಟ್ಟುಕೊಂಡು ಕೆಲವು ದೃಶ್ಯಗಳನ್ನು ಕಟ್ ಮಾಡಲಾಗಿರುತ್ತದೆ. ಆ ದೃಶ್ಯಗಳನ್ನು ನೋಡಬೇಕು ಎಂಬ ಆಸೆ ಅಭಿಮಾನಿಗಳಿಗೆ ಇರುತ್ತದೆ. ‘ಪಠಾಣ್’ ವಿಚಾರದಲ್ಲೂ ಹಾಗೆಯೇ ಆಗಿದೆ. ಕೆಲವು ಡಿಲಿಟೆಡ್ ಸೀನ್ಗಳನ್ನು ಒಟಿಟಿ ವರ್ಷನ್ನಲ್ಲಿ ಸೇರಿಸಲಾಗುವುದು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆ ಕಾರಣದಿಂದ ‘ಪಠಾಣ್’ ಚಿತ್ರದ ಒಟಿಟಿ ರಿಲೀಸ್ ಬಗ್ಗೆ ಕೌತಕ ಹೆಚ್ಚಿದೆ.
ಇದನ್ನೂ ಓದಿ: Jawan: ತಡವಾಗುತ್ತಾ ‘ಜವಾನ್’ ಬಿಡುಗಡೆ? ಶಾರುಖ್ ಖಾನ್ ಚಿತ್ರದ ರಿಲೀಸ್ ದಿನಾಂಕದ ಬಗ್ಗೆ ಹಬ್ಬಿದೆ ಗಾಸಿಪ್
‘ಪಠಾಣ್’ ಸಿನಿಮಾದಲ್ಲಿ ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಾಹಂ, ಡಿಂಪಲ್ ಕಪಾಡಿಯಾ, ಆಶುತೋಷ್ ರಾಣಾ, ಪ್ರಕಾಶ್ ಬೆಳವಾಡಿ ಮುಂತಾದವರು ನಟಿಸಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ವಿಶ್ವಾದ್ಯಂತ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಈ ಸಿನಿಮಾದಿಂದ ನಿರ್ಮಾಪಕರಿಗೆ ಭರ್ಜರಿ ಲಾಭ ಆಗಿದೆ. ‘ಪಠಾಣ್’ ಚಿತ್ರಕ್ಕೆ ಸಿದ್ದಾರ್ಥ್ ಆನಂದ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಗೆಲುವಿನಿಂದಾಗಿ ಅವರ ಡಿಮ್ಯಾಂಡ್ ಹೆಚ್ಚಾಗಿದೆ.
ಇದನ್ನೂ ಓದಿ: The Romantics: ಶಾರುಖ್ ಖಾನ್ ಮನೆಗೆ ಶೂಟಿಂಗ್ ಮಾಡಲು ಹೋದಾಗ ಆದ ಅನುಭವ ವಿವರಿಸಿದ ನಿರ್ದೇಶಕಿ
ಜನವರಿ 25ರಂದು ‘ಪಠಾಣ್’ ಚಿತ್ರ ಅದ್ದೂರಿಯಾಗಿ ತೆರೆ ಕಂಡಿತು. ಮೊದಲ ದಿನವೇ ಭರ್ಜರಿ ಕಲೆಕ್ಷನ್ (57 ಕೋಟಿ ರೂಪಾಯಿ) ಮಾಡುವ ಮೂಲಕ ಎಲ್ಲರ ಗಮನ ಸೆಳೆಯಿತು. ಈಗ ಈ ಚಿತ್ರ 50 ದಿನಗಳನ್ನು ಪೂರೈಸಿರುವುದು ಶಾರುಖ್ ಖಾನ್ ಅಭಿಮಾನಿಗಳಿಗೆ ಖುಷಿ ನೀಡಿದೆ. 50 ದಿನ ಕಳೆದಿದ್ದರೂ ಕೂಡ 20 ದೇಶಗಳಲ್ಲಿ ಇಂದಿಗೂ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಬೇರೆ ಸ್ಟಾರ್ ನಟರ ಹೊಸ ಸಿನಿಮಾಗಳು ಬಂದು ಪೈಪೋಟಿ ನೀಡಿದರೂ ಕೂಡ ಶಾರುಖ್ ಖಾನ್ ಚಿತ್ರಕ್ಕೆ ಹಿನ್ನಡೆ ಆಗಿಲ್ಲ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.