‘ಪಂಚಾಯತ್’ ವೆಬ್ ಸರಣಿ ನಟರನ್ನು ಭೇಟಿಯಾದ ಪ್ರಧಾನಿ ಮೋದಿ; ‘ಬಿನೋದ್’ ಜೊತೆಗಿನ ರೀಲ್ ವೈರಲ್

ಸರಣಿಯಲ್ಲಿ 'ಭೂಷಣ್' ಪಾತ್ರದ ಮೂಲಕ ಗಮನ ಸೆಳೆದ ದುರ್ಗೇಶ್ ಕುಮಾರ್ ಮತ್ತು 'ಬಿನೋದ್' ಪಾತ್ರದ ಮೂಲಕ ಮನೆಮಾತಾಗಿರುವ ಅಶೋಕ್ ಪಾಠಕ್ ಅವರೊಂದಿಗೆ ಪ್ರಧಾನಿ ಮೋದಿ ಕೈಕುಲುಕಿದರು. ಈ ವಿಶೇಷ ಭೇಟಿಯ ಸಂದರ್ಭದಲ್ಲಿ ಟಾಲಿವುಡ್ ನಟ ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಕೊನಿಡೇಲ ಕೂಡ ಉಪಸ್ಥಿತರಿದ್ದರು.

‘ಪಂಚಾಯತ್’ ವೆಬ್ ಸರಣಿ ನಟರನ್ನು ಭೇಟಿಯಾದ ಪ್ರಧಾನಿ ಮೋದಿ; ‘ಬಿನೋದ್’ ಜೊತೆಗಿನ ರೀಲ್ ವೈರಲ್
ಪಂಚಾಯತ್
Edited By:

Updated on: Jun 24, 2026 | 8:20 AM

ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಅಮೆಜಾನ್ ಪ್ರೈಮ್ ವಿಡಿಯೋದ ಜನಪ್ರಿಯ ವೆಬ್ ಸರಣಿ ‘ಪಂಚಾಯತ್’. ಈಗ ಪ್ರಧಾನಿ ನರೇಂದ್ರ ಮೋದಿ ಅವರೂ ಈ ಸಾಲಿಗೆ ಸೇರಿಕೊಂಡಿದ್ದಾರೆ! ಇತ್ತೀಚೆಗೆ ನಡೆದ ರಿಪಬ್ಲಿಕ್ ಸಮಿಟ್‌ನಲ್ಲಿ ಪ್ರಧಾನಿ ಮೋದಿ ಅವರು ‘ಪಂಚಾಯತ್’ ಸರಣಿಯ ಪ್ರಮುಖ ನಟರನ್ನು ಭೇಟಿಯಾಗಿ ಸಂವಾದ ನಡೆಸಿದ್ದಾರೆ.

  • ‘ಪಂಚಾಯತ್’ ಸರಣಿ ನಟರನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ.
  • ನಟ ‘ಬಿನೋದ್’ ಜೊತೆ ಪ್ರಧಾನಿ ಮೋದಿ ರೀಲ್ ವೈರಲ್.
  • ಶೀಘ್ರದಲ್ಲೇ ‘ಪಂಚಾಯತ್’ ಸೀಸನ್ ಐದು ಬಿಡುಗಡೆಗೆ ಸಿದ್ಧತೆ.

ಸರಣಿಯಲ್ಲಿ ‘ಭೂಷಣ್’ ಪಾತ್ರದ ಮೂಲಕ ಗಮನ ಸೆಳೆದ ದುರ್ಗೇಶ್ ಕುಮಾರ್ ಮತ್ತು ‘ಬಿನೋದ್’ ಪಾತ್ರದ ಮೂಲಕ ಮನೆಮಾತಾಗಿರುವ ಅಶೋಕ್ ಪಾಠಕ್ ಅವರೊಂದಿಗೆ ಪ್ರಧಾನಿ ಮೋದಿ ಕೈಕುಲುಕಿದರು. ಈ ವಿಶೇಷ ಭೇಟಿಯ ಸಂದರ್ಭದಲ್ಲಿ ಟಾಲಿವುಡ್ ನಟ ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಕೊನಿಡೇಲ ಕೂಡ ಉಪಸ್ಥಿತರಿದ್ದರು.

‘ಬಿನೋದ್’ ಜೊತೆ ಪ್ರಧಾನಿ ಮೋದಿ ರೀಲ್!

ಪ್ರಧಾನಿ ಮೋದಿ ಅವರು ಈ ನಟರೊಂದಿಗಿನ ಭೇಟಿಯ ಸುಂದರ ಕ್ಷಣಗಳ ವೀಡಿಯೋವನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ರೀಲ್‌ಗೆ ‘ಪಂಚಾಯತ್’ ಸರಣಿಯ ಪ್ರಸಿದ್ಧ ಥೀಮ್ ಮ್ಯೂಸಿಕ್ ಅನ್ನು ಬಳಸಲಾಗಿರುವುದು ಅಭಿಮಾನಿಗಳಿಗೆ ಮತ್ತಷ್ಟು ಖುಷಿ ನೀಡಿದೆ. ಅಷ್ಟೇ ಅಲ್ಲದೆ, ಈ ವೀಡಿಯೋಗೆ ಪ್ರಧಾನಿಯವರು ‘ಬಿನೋದ್ ಜೊತೆ ಕೆಲವು ಕ್ಷಣಗಳು’ ಎಂಬ ತಮಾಷೆಯ ಅಡಿಬರಹವನ್ನು ಬರೆದುಕೊಂಡಿದ್ದಾರೆ.

ಪ್ರಧಾನಿಯವರ ಈ ರೀಲ್‌ಗೆ ನಟ ಅಶೋಕ್ ಪಾಠಕ್ ಪ್ರತಿಕ್ರಿಯಿಸಿ, ‘ನಿಮ್ಮ ಪ್ರೀತಿ ಮತ್ತು ಆಶೀರ್ವಾದಕ್ಕೆ ಧನ್ಯವಾದಗಳು’ ಎಂದು ಹಿಂದಿಯಲ್ಲಿ ಬರೆದಿದ್ದಾರೆ. ಇನ್ನು ಅಭಿಮಾನಿಗಳು, ‘ಇದು ಈ ವರ್ಷದ ಅತ್ಯಂತ ಅನಿರೀಕ್ಷಿತ ಭೇಟಿ ಮತ್ತು ಕೊಲಾಬರೇಷನ್’, ‘ಇನ್ಮುಂದೆ ಫುಲೇರಾ ಗ್ರಾಮದ ಅಭಿವೃದ್ಧಿ ಖಂಡಿತ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತರಾವರಿ ಕಮೆಂಟ್ ಮಾಡುತ್ತಿದ್ದಾರೆ.

‘ಭೂಷಣ್’ ಮತ್ತು ‘ಬಿನೋದ್’ ಹಿನ್ನೆಲೆ

‘ಬನ್ರಾಕಸ್’ ಎಂದೇ ಕರೆಯಲ್ಪಡುವ ಭೂಷಣ್ (ದುರ್ಗೇಶ್ ಕುಮಾರ್) ಮತ್ತು ಬಿನೋದ್ (ಅಶೋಕ್ ಪಾಠಕ್) ‘ಪಂಚಾಯತ್’ ಸರಣಿಯ ವಿಭಿನ್ನ ಪಾತ್ರಗಳಾಗಿದ್ದು, ತಮ್ಮ ಹಾಸ್ಯಪ್ರಜ್ಞೆ ಮತ್ತು ವಿಶಿಷ್ಟ ನಟನೆಯ ಮೂಲಕ ಪ್ರೇಕ್ಷಕರ ನೆಚ್ಚಿನ ನಟರಾಗಿದ್ದಾರೆ.

ದುರ್ಗೇಶ್ ಕುಮಾರ್: ರಾಷ್ಟ್ರೀಯ ನಾಟಕ ಶಾಲೆ (NSD) ಹಳೆಯ ವಿದ್ಯಾರ್ಥಿಯಾಗಿರುವ ಇವರು ಇಮ್ತಿಯಾಜ್ ಅಲಿ ಅವರ ‘ಹೈವೇ’ (2014) ಚಿತ್ರದ ಮೂಲಕ ಗುರುತಿಸಿಕೊಂಡರು. ನಂತರ ಸುಲ್ತಾನ್, ಸಂಜು, ಧಡಕ್ ಚಿತ್ರಗಳಲ್ಲಿ ನಟಿಸಿದ್ದಾರೆ.

ಅಶೋಕ್ ಪಾಠಕ್: ಬಿಟ್ಟೂ ಬಾಸ್, ಶಾಂಘೈ, 102 ನಾಟ್ ಔಟ್ ನಂತಹ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದರೂ, ‘ಪಂಚಾಯತ್’ ಸರಣಿಯೇ ಇವರಿಗೆ ದೊಡ್ಡ ಬ್ರೇಕ್ ನೀಡಿತು.

ಇದನ್ನೂ ಓದಿ: ಪಂಚಾಯತ್ ನಟನ ಮೇಲೆ ಜಾತಿ ತಾರತಮ್ಯ; ಕರ್ನಾಟಕದ ದೇವಸ್ಥಾನದಲ್ಲಿ ಪ್ರವೇಶ ನಿರಾಕರಣೆ

ಈಗಾಗಲೇ 2025 ರಲ್ಲಿ ಈ ಸರಣಿಯ 4ನೇ ಸೀಸನ್ ಬಿಡುಗಡೆಯಾಗಿದ್ದು, ಸದ್ಯ ಸೀಸನ್ 5 ರ ಸಿದ್ಧತೆಗಳು ನಡೆಯುತ್ತಿದ್ದು 2026 ರಲ್ಲಿ ಪ್ರಸಾರವಾಗಲಿದೆ ಎಂದು ಪ್ರೈಮ್ ವಿಡಿಯೋ ಖಚಿತಪಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us