ಸಮಂತಾಗೆ ಸ್ವಾಗತ ಕೋರಿದ ನಟಿ ಪ್ರಿಯಾಂಕಾ ಚೋಪ್ರಾ; ಏನಿದು ಹೊಸ ಅಪ್ಡೇಟ್?
ಸಮಂತಾ ಹಾಗೂ ವರುಣ್ ಧವನ್ ಒಟ್ಟಾಗಿ ವೆಬ್ ಸೀರಿಸ್ನಲ್ಲಿ ನಟಿಸುತ್ತಿದ್ದಾರೆ. ಹಾಲಿವುಡ್ನಲ್ಲಿ ಫೇಮಸ್ ಆದ ಸಿಟಾಡೆಲ್ನ ಸ್ಫೂರ್ತಿ. ಯಾಗಿಟ್ಟುಕೊಂಡು, ಭಾರತಕ್ಕೆ ಹೊಂದುವಂತೆ ಕಥೆ ಮಾಡಿಕೊಳ್ಳಲಾಗಿದೆ
ನಟಿ ಸಮಂತಾ (Samantha) ಅವರು ಅನಾರೋಗ್ಯದಿಂದ ಚೇತರಿಕೆ ಕಾಣುತ್ತಿದ್ದಾರೆ. ಅವರು ಮತ್ತೆ ವರ್ಕೌಟ್ ಹಾಗೂ ಶೂಟಿಂಗ್ ಸೆಟ್ಗೆ ಮರಳಿದ್ದಾರೆ. ಇದು ಅವರ ಫ್ಯಾನ್ಸ್ಗೆ ಖುಷಿ ನೀಡಿದೆ. ಈಗ ಸಮಂತಾಗೆ ನಟಿ ಪ್ರಿಯಾಂಕಾ ಚೋಪ್ರಾ ಅವರು ಸ್ವಾಗತ ಕೋರಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಿಯಾಂಕಾ ಅವರು ನಟಿಯನ್ನು ವೆಲ್ಕಮ್ ಮಾಡಿದ್ದಾರೆ. ಹಾಗಾದರೆ ಸಮಂತಾ ಅವರು ಪ್ರಿಯಾಂಕಾ (Priyanka Chopra) ಜತೆ ಸಿನಿಮಾ ಮಾಡುತ್ತಿದ್ದಾರಾ? ಇಲ್ಲ. ಅಮೇಜಾನ್ ಪ್ರೈಮ್ ವಿಡಿಯೋ ಜತೆ ಸಮಂತಾ ಹೊಸ ಸಿನಿಮಾ ಮಾಡುತ್ತಿದ್ದಾರೆ. ಇದಕ್ಕೆ ಪ್ರಿಯಾಂಕಾ ವೆಲ್ಕಮ್ ಹೇಳಿದ್ದಾರೆ.
ಸಮಂತಾ ಹಾಗೂ ವರುಣ್ ಧವನ್ ಒಟ್ಟಾಗಿ ವೆಬ್ ಸೀರಿಸ್ನಲ್ಲಿ ನಟಿಸುತ್ತಿದ್ದಾರೆ. ಹಾಲಿವುಡ್ನಲ್ಲಿ ಫೇಮಸ್ ಆದ ಸಿಟಾಡೆಲ್ನ ಸ್ಫೂರ್ತಿಯಾಗಿಟ್ಟುಕೊಂಡು, ಭಾರತಕ್ಕೆ ಹೊಂದುವಂತೆ ಕಥೆ ಮಾಡಿಕೊಳ್ಳಲಾಗಿದೆ. ಇದರಲ್ಲಿ ಸಮಂತಾ ಹಾಗೂ ವರುಣ್ ಒಟ್ಟಾಗಿ ನಟಿಸುತ್ತಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್’ ಖ್ಯಾತಿಯ ರಾಜ್ ಹಾಗೂ ಡಿಕೆ ಈ ಸೀರಿಸ್ಗೆ ನಿರ್ದೇಶನ ಮಾಡುತ್ತಿದ್ದಾರೆ. ಇದರ ಶೂಟಿಂಗ್ ಈಗ ಆರಂಭ ಆಗಿದೆ. ಇದಕ್ಕಾಗಿ ಅಮೇಜಾನ್ ಪ್ರೈಮ್ ವಿಡಿಯೋ ಹೊಸ ಪೋಸ್ಟ್ ಹಂಚಿಕೊಂಡಿದೆ.
‘ಸಿಟಾಡೆಲ್’ನಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದಾರೆ. ಈಗ ಇದು ಭಾರತದಲ್ಲೂ ಸಿದ್ಧಗೊಳ್ಳುತ್ತಿರುವುದರಿಂದ ಸಹಜವಾಗಿಯೇ ಪ್ರಿಯಾಂಕಾ ಚೋಪ್ರಾಗೆ ಖುಷಿ ಆಗಿದೆ. ಈ ಕಾರಣಕ್ಕೆ ಅವರು ಸೋಶಿಯಲ್ ಮೀಡಿಯಾದಲ್ಲಿ ಸಂತಸ ಹೊರಹಾಕಿದ್ದಾರೆ. ಈ ಸೀರಿಸ್ ನೋಡಲು ಫ್ಯಾನ್ಸ್ ಕಾದಿದ್ದಾರೆ.
ಸಮಂತಾಗೆ Myositis ಹೆಸರಿನ ಕಾಯಿಲೆ ಕಾಡಿತ್ತು. ಸ್ನಾಯುಗಳಲ್ಲಿ ಅತೀವವಾಗಿ ನೋವು ಕಾಣುವ ಸಮಸ್ಯೆ ಇದಾಗಿತ್ತು. ಇದಕ್ಕಾಗಿ ಅವರು ಸಾಕಷ್ಟು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಈ ಕಾರಣದಿಂದ ಹಲವು ತಿಂಗಳ ಕಾಲ ಅವರು ವಿಶ್ರಾಂತಿಯಲ್ಲಿದ್ದರು. ಇದರಿಂದ ಅವರ ಪ್ರಾಜೆಕ್ಟ್ಗಳ ಶೂಟಿಂಗ್ ವಿಳಂಬ ಆಗಿತ್ತು.
ಇದನ್ನೂ ಓದಿ:Samantha: ಮತ್ತೆ ವರ್ಕೌಟ್ ಶುರು ಮಾಡಿದ ಸಮಂತಾ; ವಿಚಿತ್ರ ಕಾಯಿಲೆಯಿಂದ ಹೊರಬರಲು ನಟಿಯ ಪ್ರಯತ್ನ
ಸಮಂತಾ ಅವರು ಇತ್ತೀಚೆಗೆ ವರ್ಕೌಟ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಸಮಂತಾ ಕಂಬ್ಯಾಕ್ ಮಾಡಿದ್ದನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದರು. ಈ ಬೆನ್ನಲ್ಲೇ ಅವರ ಕಡೆಯಿಂದ ಮತ್ತೊಂದು ಅಪ್ಡೇಟ್ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ