ಪ್ರಿಯಾಂಕಾ ಚೋಪ್ರಾಯಿಂದಾಗಿ ಅಮೆಜಾನ್​ಗೆ ಭಾರಿ ನಷ್ಟ: ವರದಿ ಕೇಳಿದ ಸಿಇಓ, ಸಮಂತಾ ವೆಬ್​ಸರಣಿಗೂ ಸಂಕಷ್ಟ?

Amazon Prime: ಪ್ರಿಯಾಂಕಾ ಚೋಪ್ರಾ ನಟಿಸಿದ್ದ ಸಿಟಾಡೆಲ್ ವೆಬ್ ಸರಣಿ ಫ್ಲಾಪ್ ಆಗದ್ದು ಅಮೆಜಾನ್ ಸಿಇಒ ವಿವರವಾದ ವರದಿಯನ್ನು ಕೇಳಿದ್ದಾರೆ.

ಪ್ರಿಯಾಂಕಾ ಚೋಪ್ರಾಯಿಂದಾಗಿ ಅಮೆಜಾನ್​ಗೆ ಭಾರಿ ನಷ್ಟ: ವರದಿ ಕೇಳಿದ ಸಿಇಓ, ಸಮಂತಾ ವೆಬ್​ಸರಣಿಗೂ ಸಂಕಷ್ಟ?
ಸಿಟಾಡೆಲ್
Follow us
ಮಂಜುನಾಥ ಸಿ.
|

Updated on: Jul 08, 2023 | 6:56 AM

ದೊಡ್ಡ ಸ್ಟಾರ್​ ನಟ-ನಟಿಯರನ್ನು ನೂರಾರು ಕೋಟಿಗಳನ್ನು ಬಂಡವಾಳವಾಗಿ ನಿರ್ಮಾಪಕರು (Producer), ನಿರ್ಮಾಣ ಸಂಸ್ಥೆಗಳು ಹೂಡುತ್ತಿವೆ. ಒಂದೊಮ್ಮೆ ಸಿನಿಮಾ ಮಕಾಡೆ ಮಲಗಿದರೆ ನಿರ್ಮಾಪಕ ಬೀದಿಗೆ ಬರುತ್ತಾರಷ್ಟೆ. ಇನ್ನು ಒಟಿಟಿಗಳೂ ಸಹ ಕಂಟೆಂಟ್​ ಮೇಲೆ ಸಾವಿರಾರು ಕೋಟಿಗಳನ್ನು ಸುರಿಯುತ್ತಿವೆ, ಆದರೆ ಅಲ್ಲಿಯೂ ಸಹ ಹಣ ಮರಳಿ ಬರುತ್ತದೆ ಎಂಬ ಗ್ಯಾರೆಂಟಿ ಇಲ್ಲ. ಇತ್ತೀಚೆಗಷ್ಟೆ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ನಟಿಸಿರುವ ಸಿಟಾಡೆಲ್ ವೆಬ್ ಸರಣಿ ಅಮೆಜಾನ್ ಪ್ರೈಂನಲ್ಲಿ (Amazon Prime) ಬಿಡುಗಡೆ ಆಗಿತ್ತು. ಈ ವೆಬ್ ಸರಣಿ ಫ್ಲಾಪ್ ಆಗಿದ್ದು ಅಮೆಜಾನ್ ಪ್ರೈಂ ಸಂಕಷ್ಟಕ್ಕೆ ಸಿಲುಕಿದೆ.

ಸಿಟಾಡೆಲ್ ಆಕ್ಷನ್ ಥ್ರಿಲ್ಲರ್ ವೆಬ್​ಸರಣಿಗೆ ಸುಮಾರು 2000 ಕೋಟಿ ಹಣವನ್ನು ಅಮೆಜಾನ್ ಪ್ರೈಂ ಸುರಿದಿತ್ತು. ಅಮೆಜಾನ್​ ಪ್ರೈಂ ನಿರ್ಮಾಣದ ಅತಿ ದೊಡ್ಡ ಬಜೆಟ್​ನ ವೆಬ್​ ಸರಣಿಗಳಲ್ಲಿ ಒಂದು ಎಂಬ ಖ್ಯಾತಿಗೆ ಸಿಟಾಡೆಲ್ ಪಾತ್ರವಾಗಿತ್ತು. ಪ್ರಿಯಾಂಕಾ ಚೋಪ್ರಾ ಹಾಗೂ ಗೇಮ್ ಆಫ್ ಥ್ರೋನ್ಸ್ ಖ್ಯಾತಿಯ ರಿಚರ್ಡ್ ಮ್ಯಾಡನ್ ಇನ್ನಿತರ ದೊಡ್ಡ ನಟರಿದ್ದ ವೆಬ್ ಸರಣಿಗೆ ಪ್ರಚಾರವನ್ನೂ ಜೋರಾಗಿಯೇ ಮಾಡಲಾಗಿತ್ತು. ಇದೆಲ್ಲವುದರ ನಡುವೆಯೂ ಸಿಟಾಡೆಲ್ ಪ್ರೇಕ್ಷಕರಿಂದ ತಿರಸ್ಕರಿಸಲ್ಪಟ್ಟಿದೆ.

ಇದೀಗ ಸಿಟಾಡೆಲ್ ಸೋತಿರುವ ಬೆನ್ನಲ್ಲೆ ಅಮೆಜಾನ್​ ಸಿಇಒ ಆಂಡಿ ಜಸ್ಸಿ, ಸಿಟಾಡೆಲ್ ಸೇರಿದಂತೆ ಇನ್ನೂ ಕೆಲವು ಶೋಗಳ ಬಜೆಟ್ ನಿರ್ವಹಣೆ ಇನ್ನಿತರೆ ಮಾಹಿತಿಗಳ ಪರಿಪೂರ್ಣ ವರದಿಯನ್ನು ಕೇಳಿದ್ದಾರಂತೆ. ಈಗಾಗಲೆ ಅಮೆಜಾನ್ ಕಾಸ್ಟ್ ಕಟಿಂಗ್ ನೆವ ಹೇಳಿ ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳಿಸುತ್ತಿದೆ. ಇದರ ಬೆನ್ನಲ್ಲೆ ಈಗ ಅದರ ಶೋಗಳು ಸಹ ಒಂದರ ಮೇಲೊಂದು ಸೋಲುತ್ತಿರುವುದು ದೈತ್ಯ ಒಟಿಟಿಗೆ ನುಂಗಲಾರದ ತುತ್ತಾಗಿದೆ. ಹೀಗಾಗಿಯೇ ಸಿಟಾಡೆಲ್ ಮಾತ್ರವೇ ಅಲ್ಲದೆ ಇನ್ನೂ ಕೆಲವು ಶೋಗಳ ಬಜೆಟ್ ವರದಿಯನ್ನು ಸಿಇಒ ಕೇಳಿದ್ದಾರೆ.

ಇದನ್ನೂ ಓದಿ:Reliance Jio: ಅಮೆಜಾನ್, ನೆಟ್​ಫ್ಲಿಕ್ಸ್​ ಫ್ರೀ ಆಗಿ ನೋಡಬೇಕಾ?: ಜಿಯೋದಲ್ಲಿದೆ ಧಮಾಕ ಪ್ಲಾನ್

ಸಿಟಾಡೆಲ್ ಮಾತ್ರವಲ್ಲದೆ ಅಮೆಜಾನ್ ಅವರೇ ನಿರ್ಮಾಣ ಮಾಡಿರುವ ಡೈಸಿ ಜೋನಸ್ ಆಂಡ್ ದಿ ಸಿಕ್ಸ್, ದಿ ಪವರ್, ಡೆಡ್ ರಿಂಗರ್ಸ್ ಇನ್ನೂ ಕೆಲವು ವೆಬ್ ಸರಣಿ ಹಾಗೂ ಸಿನಿಮಾಗಳು ಜನರನ್ನು ನಿರೀಕ್ಷಿತ ಮಟ್ಟದಲ್ಲಿ ತಲುಪಿಲ್ಲ. ಅಲ್ಲದೆ ವಿಶ್ವದ ಅತಿ ದೊಡ್ಡ ಬಜೆಟ್​ನ ವೆಬ್ ಸರಣಿ ಎಂಬ ಖ್ಯಾತಿಗೆ ಪಾತ್ರವಾಗದ್ದ ಲಾರ್ಡ್ ಆಫ್​ ದಿ ರಿಂಗ್ಸ್; ದಿ ರಿಂಗ್ಸ್ ಆಫ್ ಪವರ್ ವೆಬ್ ಸರಣಿಯೂ ಸಹ ಭಾರಿ ಮಟ್ಟದಲ್ಲೇನೂ ಯಶಸ್ಸು ಕಂಡಿಲ್ಲ. ಈ ವೆಬ್ ಸರಣಿಯ ಒಂದು ಸೀಸನ್​ ಮೇಲೆಯೇ ಅಮೆಜಾನ್ ಸುಮಾರು 3300 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿತ್ತು.

ಹಾಲಿವುಡ್​ನಲ್ಲಿ ಪ್ರಿಯಾಂಕಾ ಚೋಪ್ರಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಸಿಟಾಡೆಲ್ ವೆಬ್ ಸರಣಿ ಹಿಂದಿಯಲ್ಲಿಯೂ ನಿರ್ಮಾಣವಾಗುತ್ತಿದೆ. ಅಲ್ಲಿ ಪ್ರಿಯಾಂಕಾ ನಟಿಸಿದ್ದ ಪಾತ್ರದಲ್ಲಿ ಇಲ್ಲಿ ಸಮಂತಾ ನಟಿಸುತ್ತಿದ್ದಾರೆ. ನಾಯಕನಾಗಿ ಬಾಲಿವುಡ್ ಸ್ಟಾರ್ ವರುಣ್ ಧವನ್ ಇದ್ದಾರೆ. ಪ್ರಿಯಾಂಕಾರ ಸಿಟಾಡೆಲ್ ಸೋಲು ಸಮಂತಾರ ಸಿಟಾಡೆಲ್​ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಸಮಂತಾ ಹಾಗೂ ವರುಣ್ ಧವನ್​ರ ವೆಬ್ ಸರಣಿಯ ಚಿತ್ರೀಕರಣ ಬಹುತೇಕ ಮುಗಿದಿದೆ ಎನ್ನಲಾಗುತ್ತಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯ ಪ್ರಗತಿಯಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?