ವ್ಯಕ್ತಿಯ ಬಾಯಿಗೆ ಟೇಪ್ ಹಾಕಿ ಕಾರಿನ ಡಿಕ್ಕಿಯಲ್ಲಿ ತುಂಬಿದ ರಾಣಾ-ಜಾನ್ವಿ; ಲೀಕ್ ಆಯ್ತು ಸ್ಪೈ ವಿಡಿಯೋ

ರಾಣಾ ದಗ್ಗುಬಾಟಿ ನಟನೆಯ ‘ರಾಣಾ ನಾಯ್ಡು’ ಸೀರಿಸ್​ನ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಯಿತು. ಆ್ಯಕ್ಷನ್ ಹಾಗೂ ಕ್ರೈಮ್ ಕಥೆಯನ್ನು ಈ ವೆಬ್ ಸರಣಿ ಹೊಂದಿದೆ.

ವ್ಯಕ್ತಿಯ ಬಾಯಿಗೆ ಟೇಪ್ ಹಾಕಿ ಕಾರಿನ ಡಿಕ್ಕಿಯಲ್ಲಿ ತುಂಬಿದ ರಾಣಾ-ಜಾನ್ವಿ; ಲೀಕ್ ಆಯ್ತು ಸ್ಪೈ ವಿಡಿಯೋ
ರಾಣಾ-ಜಾನ್ವಿ
Follow us
ರಾಜೇಶ್ ದುಗ್ಗುಮನೆ
|

Updated on:Mar 04, 2023 | 8:01 AM

ನಟ ರಾಣಾ ದಗ್ಗುಬಾಟಿ (Rana Daggubati) ಹಾಗೂ ಜಾನ್ವಿ ಕಪೂರ್ ಅವರು ಕಾರಿನ ಡಿಕ್ಕಿಯಲ್ಲಿ ಯಾರನ್ನೋ ತುಂಬಿದ್ದಾರೆ. ನಂತರ ಕಾರನ್ನು ತೆಗೆದುಕೊಂಡು ಎತ್ತಲೋ ಸಾಗಿದ್ದಾರೆ. ಇದನ್ನು ಯಾರೋ ಸ್ಪೈ ಮಾಡಿದ್ದಾರೆ ಹಾಗೂ ನೆಟ್​​ಫ್ಲಿಕ್ಸ್ ಇಂಡಿಯಾ ಈ ವಿಡಿಯೋನ ಶೇರ್ ಮಾಡಿಕೊಂಡಿದೆ! ಅಂದಹಾಗೆ ಇದು ‘ರಾಣಾ ನಾಯ್ಡು’ (Rana Naidu) ವೆಬ್ ಸೀರಿಸ್​ನ ಪ್ರಮೋಷನ್​ ಗಿಮಿಕ್. ಈ ವಿಡಿಯೋನ ನೆಟ್​​ಫ್ಲಿಕ್ಸ್ ಇಂಡಿಯಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇದಕ್ಕೆ ಫ್ಯಾನ್ಸ್ ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ರಾಣಾ ದಗ್ಗುಬಾಟಿ ನಟನೆಯ ‘ರಾಣಾ ನಾಯ್ಡು’ ಸೀರಿಸ್​ನ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಯಿತು. ಆ್ಯಕ್ಷನ್ ಹಾಗೂ ಕ್ರೈಮ್ ಕಥೆಯನ್ನು ಈ ವೆಬ್ ಸರಣಿ ಹೊಂದಿದೆ. ಅಮೆರಿಕದ ಕ್ರೈಮ್ ಸೀರಿಸ್ ಒಂದನ್ನು ಸ್ಫೂರ್ತಿಯಾಗಿಟ್ಟುಕೊಂಡು ಇದನ್ನು ರಿಮೇಕ್ ಮಾಡಲಾಗಿದೆ. ಸುಪರ್ಣ್ ವರ್ಮ ಹಾಗೂ ಕರಣ್ ಅಶುಮನ್ ಅವರು ಇದನ್ನು ನಿರ್ದೇಶನ ಮಾಡಿದ್ದಾರೆ.

ಬಾಲಿವುಡ್​ನ ಮುಖ್ಯವಾಗಿಟ್ಟುಕೊಂಡು ಕಾಲ್ಪನಿಕ ಕಥೆ ಹೆಣೆಯಲಾಗಿದೆ. ಬಾಲಿವುಡ್​ನಲ್ಲಿ ನಡೆಯುವ ಪ್ರತಿ ಹಗರಣದಲ್ಲಿ ರಾಣಾ ಕೈವಾಡ ಇರುತ್ತದೆ ಎಂಬುದನ್ನು ಸೀರಿಸ್ ಟ್ರೇಲರ್​ನಲ್ಲಿ ತೋರಿಸಲಾಗಿದೆ. ರಾಣಾ ದಗ್ಗುಬಾಟಿ, ವೆಂಕಟೇಶ್ ದಗ್ಗುಬಾಟಿ ಮೊದಲಾದವರು ಇದರಲ್ಲಿ ನಟಿಸಿದ್ದಾರೆ. ಹಿಂದಿ ಹಾಗೂ ತೆಲುಗು ಭಾಷೆಯಲ್ಲಿ ಸೀರಿಸ್ ರಿಲೀಸ್ ಆಗುತ್ತಿದೆ. ಈ ವೆಬ್ ಸರಣಿಯಲ್ಲಿ ಜಾನ್ವಿ ಕೂಡ ಅತಿಥಿ ಪಾತ್ರ ಮಾಡಲಿದ್ದಾರೆ ಎಂಬುದು ಈಗ ರಿವೀಲ್ ಆಗಿದೆ.

ನೆಟ್​​ಫ್ಲಿಕ್ಸ್ ಇಂಡಿಯಾ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ರಾಣಾ ಹಾಗೂ ಜಾನ್ವಿ ವ್ಯಕ್ತಿಯೊಬ್ಬನ ಬಾಯಿಗೆ ​ಟೇಪ್ ಹಾಕಿ ಎತ್ತಿಕೊಂಡು ಬರುತ್ತಾರೆ. ಕಾರಿನ ಡಿಕ್ಕಿಯಲ್ಲಿ ಆತನ ತುಂಬಲಾಗುತ್ತದೆ. ಈ ವಿಡಿಯೋಗೆ ‘ನಾವು ಕಪೂರ್ ಅವರ ಕೆಲಸದ ಮೇಲೆ ಕಣ್ಣಿಡುತ್ತಿದ್ದೇವೆ’ ಎಂದು ಕ್ಯಾಪ್ಶನ್ ನೀಡಲಾಗಿದೆ.

ಇದನ್ನೂ ಓದಿ: Netflix: 30 ರಾಷ್ಟ್ರಗಳಲ್ಲಿ ಶುಲ್ಕ ತಗ್ಗಿಸಿದ ನೆಟ್​ಫ್ಲಿಕ್ಸ್, ಭಾರತವೂ ಇದೆಯೇ ಪಟ್ಟಿಯಲ್ಲಿ?

ರಾಣಾ ದಗ್ಗುಬಾಟಿ ಅವರು ನಟನೆ ಮೂಲಕ ಪ್ರೇಕ್ಷಕರಿಗೆ ಇಷ್ಟವಾಗಿದ್ದಾರೆ. ಈಗ ಅವರು ವೆಬ್​ ಸೀರಿಸ್ ಮೂಲಕ ಪ್ರೇಕ್ಷಕರ ಎದುರು ಬರಲು ರೆಡಿ ಆಗಿದ್ದಾರೆ. ಮಾರ್ಚ್ 10ರಂದು ‘ರಾಣಾ ನಾಯ್ಡು’ ಸೀರಿಸ್ ರಿಲೀಸ್ ಆಗುತ್ತಿದೆ. ಟ್ರೇಲರ್ ನೋಡಿದ ಅನೇಕರು ಇದನ್ನು ಮೆಚ್ಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:01 am, Sat, 4 March 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್