Kantara Movie: ಇಂಗ್ಲಿಷ್ನಲ್ಲೂ ಬರುತ್ತಿದೆ ‘ಕಾಂತಾರ’ ಸಿನಿಮಾ; ಮಾರ್ಚ್ 1ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ
Rishab Shetty | Kantara English Version: ‘ಕಾಂತಾರ’ ಸಿನಿಮಾ ಇಂಗ್ಲಿಷ್ನಲ್ಲೂ ವೀಕ್ಷಣೆಗೆ ಲಭ್ಯವಾಗಲಿದೆ. ಇದರಿಂದ ಇನ್ನೂ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗಲಿದೆ.
ಕನ್ನಡ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಮಿಂಚುತ್ತಿವೆ. ಕಳೆದ ವರ್ಷ ತೆರೆಕಂಡ ‘ಕೆಜಿಎಫ್: ಚಾಪ್ಟರ್ 2’, ‘ಕಾಂತಾರ’ (Kantara) ಸಿನಿಮಾಗಳು ಆ ರೀತಿ ಮೋಡಿ ಮಾಡಿವೆ. ಡಬ್ಬಿಂಗ್ ಸಹಾಯದಿಂದ ಕನ್ನಡದ ಚಿತ್ರಗಳು ತಮಿಳು, ಮಲಯಾಳಂ, ತೆಲುಗು ಹಾಗೂ ಹಿಂದಿಯಲ್ಲಿ ಅದ್ದೂರಿ ಪ್ರದರ್ಶನ ಕಂಡಿವೆ. ಈಗ ಇಂಗ್ಲಿಷ್ನಲ್ಲೂ ಸದ್ದು ಮಾಡುವ ಕಾಲ ಕೂಡಿಬಂದಿದೆ. ಹೌದು, ರಿಷಬ್ ಶೆಟ್ಟಿ (Rishab Shetty) ನಿರ್ದೇಶನದ ‘ಕಾಂತಾರ’ ಸಿನಿಮಾ ಇಂಗ್ಲಿಷ್ಗೆ ಡಬ್ ಆಗುತ್ತಿದೆ. ಮಾರ್ಚ್ 1ರಂದು ನೆಟ್ಫ್ಲಿಕ್ಸ್ ಮೂಲಕ ವೀಕ್ಷಣೆಗೆ ಲಭ್ಯವಾಗಲಿದೆ. ಇದು ಕನ್ನಡಿಗರಿಗೆ ಹೆಮ್ಮೆ ತರುವಂತಹ ವಿಚಾರವಾಗಿದ್ದು, ಕನ್ನಡ ಇನ್ನಷ್ಟು ಸಿನಿಮಾಗಳು (Kannada Movies) ಇದೇ ರೀತಿ ವಿಶ್ವಮಟ್ಟದಲ್ಲಿ ಮಿಂಚಲಿ ಎಂದು ಸಿನಿಪ್ರಿಯರು ಆಶಿಸುತ್ತಿದ್ದಾರೆ.
ತುಳುನಾಡಿನ ಸಂಸ್ಕೃತಿ ಮತ್ತು ಆಚರಣೆಗಳನ್ನು ಆಧರಿಸಿ ‘ಕಾಂತಾರ’ ಸಿನಿಮಾ ಮೂಡಿಬಂತು. ಭೂತಕೋಲದ ಬಗ್ಗೆ ಈ ಚಿತ್ರದಲ್ಲಿ ತೋರಿಸಲಾಗಿದೆ. ಇದು ಪರಭಾಷಿಕ ಪ್ರೇಕ್ಷಕರಿಗೂ ಇಷ್ಟ ಆಗಿದ್ದರಿಂದ ತಮಿಳು, ಹಿಂದಿ, ಮಲಯಾಳಂ, ತೆಲುಗು ಭಾಷೆಗಳಿಗೆ ಡಬ್ ಮಾಡಿ ತೆರೆಕಾಣಿಸಲಾಯಿತು. ಜಾಗತಿಕ ಮಟ್ಟದಲ್ಲಿ ಈ ಸಿನಿಮಾ ಬಗ್ಗೆ ಚರ್ಚೆ ಆಗಿದೆ. ಇಂಗ್ಲಿಷ್ನಲ್ಲೂ ವೀಕ್ಷಣೆಗೆ ಲಭ್ಯವಾಗಲಿರುವುದರಿಂದ ಇನ್ನೂ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗಲಿದೆ. ‘ಕಾಂತಾರ’ದ ಡೈಲಾಗ್ಗಳನ್ನು ಇಂಗ್ಲಿಷ್ನಲ್ಲಿ ಕೇಳಿ ಸವಿಯಲು ಸಿನಿಪ್ರಿಯರು ಕಾದಿದ್ದಾರೆ.
ಇದನ್ನೂ ಓದಿ: ‘ನೀವು ನೋಡಿರೋದೇ ಎರಡನೇ ಭಾಗ’; ‘ಕಾಂತಾರ’ ಗುಟ್ಟು ರಿವೀಲ್ ಮಾಡಿದ ರಿಷಬ್ ಶೆಟ್ಟಿ
‘ಹೊಂಬಾಳೆ ಫಿಲ್ಮ್ಸ್’ ಬ್ಯಾನರ್ ಮೂಲಕ ನಿರ್ಮಾಪಕ ವಿಜಯ್ ಕಿರಗಂದೂರು ಅವರು ‘ಕಾಂತಾರ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ್ದು ಈ ಸಿನಿಮಾದ ಹೆಚ್ಚುಗಾರಿಕೆ. 100 ದಿನಗಳ ಕಾಲ ಅದ್ದೂರಿ ಪ್ರದರ್ಶನ ಕಂಡಿದ್ದರಿಂದ ಇತ್ತೀಚೆಗೆ ಬೆಂಗಳೂರಿನಲ್ಲಿ ಸಕ್ಸಸ್ ಮೀಟ್ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಭಾಗಿಯಾಗಿ ಸಂಭ್ರಮಿಸಿದೆ.
ಇದನ್ನೂ ಓದಿ: Kantara: ಹಿಂದಿಯಲ್ಲೂ 100 ದಿನ ಪೂರೈಸಿದ ‘ಕಾಂತಾರ’ ಚಿತ್ರ; ರಿಷಬ್ ಶೆಟ್ಟಿಗೆ ಉತ್ತರ ಭಾರತದಲ್ಲಿ ಭರ್ಜರಿ ಮೆಚ್ಚುಗೆ
‘ಕಾಂತಾರ 2’ ಬರುವುದು ಖಚಿತವಾಗಿದೆ. ಈ ಬಗ್ಗೆ ಇಷ್ಟು ದಿನ ಸೈಲೆಂಟ್ ಆಗಿದ್ದ ರಿಷಬ್ ಶೆಟ್ಟಿ ಅವರು ಶತದಿನೋತ್ಸವದ ಸಂಭ್ರಮದಲ್ಲಿ ಮೌನ ಮುರಿದರು. ಆದರೆ ಎರಡನೇ ಪಾರ್ಟ್ನಲ್ಲಿ ಹಿಂದಿನ ಭಾಗದ ಕಥೆ ಇರಲಿದೆ ಎಂದು ಅವರು ಹೇಳಿದ್ದಾರೆ. ಇದರಿಂದ ಅಭಿಮಾನಿಗಳ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: Kantara 2 Shooting: ‘ಕಾಂತಾರ 2’ ಆರಂಭಿಸಲು ಮಳೆಗಾಲಕ್ಕೆ ಕಾದಿರುವ ರಿಷಬ್ ಶೆಟ್ಟಿ; ಮಾಹಿತಿ ನೀಡಿದ ವಿಜಯ್ ಕಿರಗಂದೂರು
‘ಕಾಂತಾರ’ ಸಿನಿಮಾದಲ್ಲಿ ಸಪ್ತಮಿ ಗೌಡ, ರಿಷಬ್ ಶೆಟ್ಟಿ ಅವರು ಜೋಡಿಯಾಗಿ ನಟಿಸಿದ್ದಾರೆ. ಅವರಿಬ್ಬರ ಕೆಮಿಸ್ಟ್ರಿಯನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಇನ್ನುಳಿದ ಕಲಾವಿದರಾದ ಮಾನಸಿ ಸುಧೀರ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಕಿಶೋರ್ ಮುಂತಾದ ಕಲಾವಿದರು ಸಹ ಗಮನ ಸೆಳೆದಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆಯಲ್ಲಿ ಬಂದ ಹಾಡುಗಳು ಜನಮನ ಗೆದ್ದಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:51 pm, Tue, 7 February 23