ಮತ್ತೆ ಬಂದು ‘ಸ್ಕ್ಯಾಮ್’ ಸರಣಿ, ಸಹರಾ ಸಂಸ್ಥೆ ನೀಡಿತು ಎಚ್ಚರಿಕೆ

‘ಸ್ಕ್ಯಾಮ್ 2010’ ಘೋಷಣೆಯಾಗಿದೆ. ಸುಬ್ರತಾ ರಾಯ್ ಮಾಡಿದ ಹಗರಣ ಕುರಿತಾದ ಕತೆಯನ್ನು ಈ ಬಾರಿಯ ಸ್ಕ್ಯಾಮ್ ಒಳಗೊಂಡಿರಲಿದೆ. ಆದರೆ ಸಹರಾ ಸಂಸ್ಥೆ ನಿರ್ಮಾಪಕರಿಗೆ ಎಚ್ಚರಿಕೆ ನೀಡಿದೆ.

ಮತ್ತೆ ಬಂದು ‘ಸ್ಕ್ಯಾಮ್’ ಸರಣಿ, ಸಹರಾ ಸಂಸ್ಥೆ ನೀಡಿತು ಎಚ್ಚರಿಕೆ
Follow us
|

Updated on: May 18, 2024 | 2:56 PM

ಸ್ಕ್ಯಾಮ್’ (Scam), ಭಾರತದಲ್ಲಿ ನಿರ್ಮಾಣವಾಗುತ್ತಿರುವ ವೆಬ್ ಸೀರೀಸ್​ಗಳಲ್ಲಿ (Web Series) ಒಂದು ಉತ್ತಮ ವೆಬ್ ಸೀರೀಸ್. ಮೊದಲಿಗೆ ಷೇರುಮಾರುಕಟ್ಟೆಯಲ್ಲಿ ಭಾರಿ ದೊಡ್ಡ ಸ್ಕ್ಯಾಮ್ ಮಾಡಿದ್ದ ಹರ್ಷದ್ ಮೆಹ್ತಾ ಜೀವನವನ್ನು ‘ಸ್ಕ್ಯಾಮ್ 1992’ ವೆಬ್ ಸರಣಿಯಲ್ಲಿ ಕಟ್ಟಿಕೊಡಲಾಗಿತ್ತು. ಆ ವೆಬ್ ಸರಣಿ ಭಾರಿ ದೊಡ್ಡ ಹಿಟ್ ಆಗಿತ್ತು. ‘ಸ್ಕ್ಯಾಮ್ 1992’ ವೆಬ್ ಸರಣಿಯ ನಿರ್ಮಾಣದ ಗುಣಮಟ್ಟ, ಕಲಾವಿದರ ನಟನೆ, ಹಿನ್ನೆಲೆ ಸಂಗೀತ ಎಲ್ಲವೂ ಭಾರತೀಯ ಪ್ರೇಕ್ಷಕನ ಸೆಳೆದಿತ್ತು. ಅದಾದ ಬಳಿಕ ‘ಸ್ಕ್ಯಾಮ್ 2003 ನಿರ್ಮಿಸಲಾಯ್ತು. ಇದರಲ್ಲಿ ಬೆಂಗಳೂರಿನ ಗಾಢ ನಂಟಿರುವ ತೆಲಗಿ ಛಾಪಾ ಕಾಗದ ಹಗರಣವನ್ನು ವಿಷಯವಸ್ತುವನ್ನಾಗಿಸಿಕೊಳ್ಳಲಾಗಿತ್ತು. ಇದೀಗ ‘ಸ್ಕ್ಯಾಮ್ 2010’ ತೆರೆಗೆ ತರಲು ತಯಾರಾಗಿದೆ ಅದೇ ತಂಡ.

‘ಸ್ಕ್ಯಾಮ್ 2010’ ಇನ್ನೂ ದೊಡ್ಡ ಭ್ರಷ್ಟಾಚಾರಿಯ ಬಗೆಗಿನ ಕತೆಯನ್ನು ಒಳಗೊಂಡಿದೆ. ಸಹರಾ ಸ್ಕ್ಯಾಮ್ ಮಾಡಿದ ಸುಬ್ರತಾ ರಾಯ್ ಕುರಿತಾದ ಕತೆಯನ್ನು ‘ಸ್ಕ್ಯಾಮ್ 2010’ ಒಳಗೊಂಡಿದೆ. ಸಹರಾ ಇಂಡಿಯಾ ಪರಿವಾರ್​ನ ಮಾಲೀಕ ಸುಬ್ರತಾ ರಾಯ್ ಕುರಿತಾದ ಕತೆಯನ್ನು ಈ ವೆಬ್ ಸರಣಿ ಒಳಗೊಂಡಿರಲಿದೆ. ವೆಬ್ ಸರಣಿಯ ಘೋಷಣೆಯನ್ನಷ್ಟೆ ಇದೀಗ ಮಾಡಲಾಗಿದ್ದು, ಚಿತ್ರೀಕರಣ ಇನ್ನಷ್ಟೆ ಪ್ರಾರಂಭವಾಗಬೇಕಿದೆ. ಅಷ್ಟರಲ್ಲಾಗಲೆ ಸಹರಾ ಸಂಸ್ಥೆಯಿಂದ ವೆಬ್ ಸರಣಿಯ ನಿರ್ಮಾಪಕರಿಗೆ ನೊಟೀಸ್ ಬಂದಿದೆ.

ಇದನ್ನೂ ಓದಿ:ವೆಬ್ ಸರಣಿಯಲ್ಲಿ ನಟಿಸಲಿದ್ದಾರೆ ಶಾರುಖ್ ಪುತ್ರಿ ಸುಹಾನಾ ಖಾನ್

‘ಸ್ಕಾಮ್ 2010: ದಿ ಸುಬ್ರತಾ ರಾಯ್ ಸಾಗಾ’ ಘೋಷಿಸುವ ಮೂಲಕ ಅಗ್ಗದ ಪ್ರಚಾರವನ್ನು ಪಡೆಯಲು ‘ಸ್ಕ್ಯಾಮ್’ ವೆಬ್ ಸರಣಿಯ ನಿರ್ಮಾಪಕರು ಯತ್ನಿಸುತ್ತಿರುವುದು ನಿಂದನೀಯ ಮತ್ತು ತೀವ್ರವಾಗಿ ಖಂಡನೀಯ. ಸಹರಾ ಪರಿವಾರದ ಮಾನಹಾನಿ ಮಾಡುವ ಪ್ರಯತ್ನದಲ್ಲಿ ನಿರತರಾಗಿರವ ಎಲ್ಲಾ ವ್ಯಕ್ತಿಗಳು ಮತ್ತು ಪಕ್ಷಗಳ ಇಂಥಹ ಕೃತ್ಯಗಳನ್ನು ಸಹರಾ ಇಂಡಿಯಾ ಪರಿವಾರ್ ಖಂಡಿಸುತ್ತದೆ ಮತ್ತು ಅವರ ಆಕ್ಷೇಪಾರ್ಹ ನಡವಳಿಕೆಯನ್ನು ವಿರೋಧಿಸುತ್ತದೆ. ಈ ನಿಟ್ಟಿನಲ್ಲಿ ನಿರ್ಮಾಪಕರು, ನಿರ್ದೇಶಕರು ಹಾಗೂ ಅಕ್ರಮ ಎಸಗಿರುವ ಎಲ್ಲರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ನೊಟೀಸ್ ನಲ್ಲಿ ಹೇಳಲಾಗಿದೆ.

ಸೆಬಿ ಮತ್ತು ಸಹಾರಾ ನಡುವಿನ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇನ್ನೂ ಬಾಕಿ ಉಳಿದಿವೆ ಮತ್ತು ಈಗ ನಡೆಯುತ್ತಿರುವ ನ್ಯಾಯ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರುವ ಯಾವುದೇ ಪ್ರಯತ್ನವು ‘ನ್ಯಾಯಾಂಗ ನಿಂದನೆ’ ಎಂದೆನಿಸಿಕೊಳ್ಳುತ್ತದೆ. “ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿಯ ಹಕ್ಕಿನ ಅಡಿಯಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳಲು, ವ್ಯಕ್ತಿಯ ಅಭಿಮಾನ ಮತ್ತು ಖ್ಯಾತಿಯನ್ನು ಹಾಳುಮಾಡಲು ಯಾರಿಗೂ ಅವಕಾಶ ನೀಡಲಾಗುವುದಿಲ್ಲ’ ಎಂದು ಸಹರಾ ಪರಿವಾರ್ ಹೇಳಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್