Year Ender 2021: ಈ ವರ್ಷ ಒಟಿಟಿಯಲ್ಲಿ ಹೊಸ ದಾಖಲೆ ಬರೆದ ಸಿದ್ದಾರ್ಥ್ ನಟನೆಯ ‘ಶೇರ್ಷಾ’ ಸಿನಿಮಾ
Year Ender 2021: ಕ್ಯಾಪ್ಟನ್ ವಿಕ್ರಮ್ ಭಾತ್ರ ಜೀವನ ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದೆ. ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ ಈ ಸಿನಿಮಾವನ್ನು ನಿರ್ಮಾಣ ಮಾಡಿತ್ತು. ಸಿನಿಮಾ ರಿಲೀಸ್ಗೂ ಮೊದಲೇ ಈ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು.
ಸಿದ್ದಾರ್ಥ್ ಮಲ್ಹೋತ್ರಾ ( Sidharth Malhotra) ಹಾಗೂ ಕಿಯಾರಾ ಅಡ್ವಾಣಿ (Kiara Advani) ನಟನೆಯ ‘ಶೇರ್ಷಾ’ (Shershaah) ಸಿನಿಮಾ ಸೆಪ್ಟೆಂಬರ್ ತಿಂಗಳಲ್ಲಿ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾ ಈ ವರ್ಷ ಹೊಸ ದಾಖಲೆ ಬರೆದಿದೆ. ಅಮೇಜಾನ್ ಪ್ರೈಮ್ನಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಶೇರ್ಷಾ’ ಪಾತ್ರವಾಗಿದೆ.
ಕ್ಯಾಪ್ಟನ್ ವಿಕ್ರಮ್ ಭಾತ್ರ ಜೀವನ ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದೆ. ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ ಈ ಸಿನಿಮಾವನ್ನು ನಿರ್ಮಾಣ ಮಾಡಿತ್ತು. ಸಿನಿಮಾ ರಿಲೀಸ್ಗೂ ಮೊದಲೇ ಈ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಈ ಸಿನಿಮಾವನ್ನು ಚಿತ್ರಮಂದಿರದಲ್ಲೇ ರಿಲೀಸ್ ಮಾಡಬೇಕು ಎಂದು ಚಿತ್ರತಂಡ ನಿರ್ಧರಿಸಿತ್ತು. ಆದರೆ, ಕೊವಿಡ್ ಇರುವ ಕಾರಣ ಕೆಲವು ರಾಜ್ಯಗಳಲ್ಲಿ ಶೇ.50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ಇತ್ತು. ಹೀಗಾಗಿ, ಈ ಸಿನಿಮಾವನ್ನು ಧರ್ಮ ಪ್ರೊಡಕ್ಷನ್ ಒಟಿಟಿಯಲ್ಲಿ ರಿಲೀಸ್ ಮಾಡಿತ್ತು.
‘ಶೇರ್ಷಾ’ ರಿಲೀಸ್ ಆದ ಬಳಿಕ ಇದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಸಿದ್ದಾರ್ಥ್ ನಟನೆಯನ್ನು ಎಲ್ಲರೂ ಕೊಂಡಾಡಿದ್ದರು. ಅಲ್ಲದೆ, ವಿಕ್ರಮ್ ಭಾತ್ರ ಅವರ ಜೀವನ ಅನೇಕರಿಗೆ ಸ್ಫೂರ್ತಿದಾಯಕವಾಗಿತ್ತು. ಈ ಸಿನಿಮಾ ಸಿದ್ದಾರ್ಥ್ ಅವರ ವೃತ್ತಿ ಜೀವನಕ್ಕೆ ಅತಿ ದೊಡ್ಡ ಹಿಟ್ ತಂದುಕೊಟ್ಟ ಚಿತ್ರ ಎನ್ನುವ ಖ್ಯಾತಿಗೂ ಪಾತ್ರವಾಗಿದೆ.
210 ದೇಶಗಳಲ್ಲಿ ಅಮೇಜಾನ್ ಪ್ರೈಮ್ ವಿಡಿಯೋ ವೀಕ್ಷಣೆಗೆ ಲಭ್ಯವಿದೆ. ಈ ಕಾರಣಕ್ಕೆ ಈ ಚಿತ್ರವನ್ನು ಹೆಚ್ಚೆಚ್ಚು ವೀಕ್ಷಣೆ ಮಾಡಿದ್ದಾರೆ. ಐಎಂಡಿಬಿಯಲ್ಲಿ ಈ ಚಿತ್ರಕ್ಕೆ 8.9/10 ರೇಟಿಂಗ್ ನೀಡಲಾಗಿದೆ. ಸಿದ್ದಾರ್ಥ್ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಚಿತ್ರ ಇದಾಗಿದೆ. ಈಗ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಈ ವರ್ಷ ಅತಿ ಹೆಚ್ಚು ವೀಕ್ಷಣೆ ಕಂಡು ದಾಖಲೆ ಬರೆದಿದೆ.
ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ನಿಜ ಜೀವನದ ಜೋಡಿಗಳು ಎನ್ನಲಾಗಿದೆ. ಇವರನ್ನು ತೆರೆಮೇಲೆ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದರು. ಸಿನಿಮಾಗೆ ವಿಷ್ಣುವರ್ಧನ್ ಅವರ ನಿರ್ದೇಶನವಿದೆ.
ಇದನ್ನೂ ಓದಿ:ಸಿದ್ದಾರ್ಥ್ ಶುಕ್ಲಾ ಪ್ರಿಯತಮೆ ಶೆಹನಾಜ್ ಗಿಲ್ ತಂದೆ ಮೇಲೆ ಗುಂಡಿನ ದಾಳಿ; ನಟಿಗೆ ಮತ್ತೊಂದು ಆಘಾತ
ಸಿದ್ದಾರ್ಥ್ ಮಲ್ಹೋತ್ರಾ- ಕಿಯಾರಾ ಅಡ್ವಾಣಿ ಪ್ರೇಮಕ್ಕೆ ಸಿಕ್ತು ಮತ್ತೊಂದು ಸಾಕ್ಷ್ಯ
Published On - 2:52 pm, Fri, 31 December 21