AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂತು ‘ಸ್ಕ್ವಿಡ್ ಗೇಮ್ 3’ ಕೊನೆಯ ಆಟದಲ್ಲಿ ಗೆಲುವು ಯಾರಿಗೆ?

Squid Game season 3: ಸ್ಕ್ವಿಡ್ ಗೇಮ್ ವಿಶ್ವಪ್ರಸಿದ್ಧ ವೆಬ್ ಸರಣಿ. ಈಗಾಗಲೇ ಎರಡು ಸೀಸನ್​ ಬಿಡುಗಡೆ ಆಗಿದೆ. ಇದೀಗ ಸ್ಕ್ವಿಡ್ ಗೇಮ್ ಸೀಸನ್ 3ರ ಟೀಸರ್ ಇದೀಗ ಬಿಡುಗಡೆ ಆಗಿದ್ದು, ಟೀಸರ್ ಕುತೂಹಲ ಹುಟ್ಟಿಸುವಂತಿದೆ. ಟೀಸರ್​ನ ಜೊತೆಗೆ ವೆಬ್ ಸರಣಿ ಯಾವಾಗ ಬಿಡುಗಡೆ ಆಗಲಿದೆ ಎಂಬುದನ್ನು ಸಹ ಘೋಷಿಸಲಾಗಿದೆ.

ಬಂತು ‘ಸ್ಕ್ವಿಡ್ ಗೇಮ್ 3’ ಕೊನೆಯ ಆಟದಲ್ಲಿ ಗೆಲುವು ಯಾರಿಗೆ?
Squid Game 3
ಮಂಜುನಾಥ ಸಿ.
|

Updated on:May 06, 2025 | 12:01 PM

Share

ಸ್ಕ್ವಿಡ್ ಗೇಮ್’ (Squid Game) ಜಗತ್ಪ್ರಸಿದ್ಧ ವೆಬ್ ಸರಣಿ. ಕೊರಿಯನ್ ವೆಬ್ ಸರಣಿ ಆಗಿರುವ ಸ್ಕ್ವಿಡ್ ಗೇಮ್ ವಿಶ್ವದಾದ್ಯಂತ ವೀಕ್ಷಕರನ್ನು ಸೆಳೆದಿದೆ. ಮಕ್ಕಳು ಆಡುವ ಸಣ್ಣ ಪುಟ್ಟ ಅದೃಷ್ಟದ ಆಟಗಳನ್ನು ಆಡಿಸಿ, ಸೋತವರನ್ನು ಕೊಲ್ಲುವ ಗುಂಪೊಂದು ಇದೆ. ಕೊನೆಯಲ್ಲಿ ಯಾರು ಬದುಕಿ ಉಳಿಯುತ್ತಾರೆಯೋ ಅವರಿಗೆ ಭಾರಿ ಮೊತ್ತದ ಬಹುಮಾನ. ಈ ಸಾವು-ಬದುಕಿನ ಆಟವನ್ನು ಆಡಿಸುವ ದೊಡ್ಡ ಮಾಫಿಯಾ ಇದೆ. ಆಟದ ಮೇಲೆ ಬೆಟ್ಟಿಂಗ್ ಸಹ ಹಾಕುತ್ತಾರೆ. ಮೊದಲ ಸ್ಕ್ವಿಡ್ ಗೇಮ್ ವೆಬ್ ಸರಣಿ ಭಾರಿ ದೊಡ್ಡ ಹಿಟ್ ಆಗಿತ್ತು. ಕೆಲ ತಿಂಗಳ ಹಿಂದಷ್ಟೆ ‘ಸ್ಕ್ವಿಡ್ ಗೇಮ್ 2’ ಬಿಡುಗಡೆ ಆಗಿತ್ತು, ಆದರೆ ನಿರೀಕ್ಷಿತ ಮಟ್ಟದಲ್ಲಿ ಹಿಟ್ ಎನಿಸಿಕೊಳ್ಳಲಿಲ್ಲ. ಇದೀಗ ‘ಸ್ಕ್ವಿಡ್ ಗೇಮ್ 3’ ಬಿಡುಗಡೆ ಆಗಲಿದೆ.

ಇಂದಷ್ಟೆ ‘ಸ್ಕ್ವಿಡ್ ಗೇಮ್ 3’ ವೆಬ್ ಸರಣಿಯ ಟೀಸರ್ ಬಿಡುಗಡೆ ಆಗಿದೆ. ಇದು ‘ಸ್ಕ್ವಿಡ್ ಗೇಮ್’ ಸರಣಿಯ ಕೊನೆಯ ಸೀಸನ್ ಎಂಬುದರ ಸುಳಿವು ಟೀಸರ್​ನಲ್ಲಿಯೇ ಇದೆ. ‘ಸ್ಕ್ವಿಡ್ ಗೇಮ್ 2’ನಲ್ಲಿ ನಾಯಕ, ಇತರೆ ಆಟಗಾರರನ್ನೆಲ್ಲ ಒಟ್ಟು ಮಾಡಿ ಆಟ ಆಡಿಸುವವರ ವಿರುದ್ಧ ಹೋರಾಟ ಮಾಡಿದ್ದ ಆ ಹೋರಾಟದಲ್ಲಿ ಸಾಕಷ್ಟು ಮಂದಿ ನಿಧನ ಹೊಂದಿದ್ದರು ಆದರೆ ವೆಬ್ ಸರಣಿಯ ಅಂತ್ಯದಲ್ಲಿ ನಾಯಕ ಸೆರೆ ಸಿಕ್ಕುವ ಮೂಲಕ ವೆಬ್ ಸರಣಿ ಅಂತ್ಯವಾಗಿತ್ತು.

ಇದನ್ನೂ ಓದಿ:ಮತ್ತೆ ಬರುತ್ತಿದೆ ವಿಶ್ವವೇ ಮೆಚ್ಚಿದ್ದ ‘ಸ್ಕ್ವಿಡ್ ಗೇಮ್ಸ್’: ಆಟ ಅದೇ, ಆಟಗಾರರು ಬದಲು

ಈಗ ಬಿಡುಗಡೆ ಆಗಿರುವ ‘ಸ್ಕ್ವಿಡ್ ಗೇಮ್ 3’ ಟೀಸರ್​ನಲ್ಲಿ ತೋರಿಸಿರುವಂತೆ. ಮತ್ತೆ ಆಟ ಮುಂದುವರೆದಿದೆ. ಮತ್ತೆ ಕೆಂಪು ನೀಲಿ ತಂಡಗಳನ್ನು ಮಾಡಲಾಗಿದೆ. ಆಟ ಆಡಿಸುವವರ ಕೈ ಮೇಲಾದಂತೆ ಕಾಣುತ್ತಿದೆ. ಆಟದಲ್ಲಿ ಸೋತವರ ಜೀವಗಳು ಹೋಗುತ್ತಿವೆ. ಆದರೆ ಆಟದಲ್ಲಿ ಟ್ವಿಸ್ಟ್ ಒಂದು ಎದುರಾಗಿದೆ. ಅದೇನು ಎಂಬುದು ವೆಬ್ ಸರಣಿ ಬಿಡುಗಡೆ ಆದ ಬಳಿಕವೇ ಗೊತ್ತಾಗಲಿದೆ.

‘ಸ್ಕ್ವಿಡ್ ಗೇಮ್ 3’ ಅನ್ನು ಹಾಂಗ್ ಡಾಂಗ್ ಯುಕ್ ನಿರ್ದೇಶನ ಮಾಡಿದ್ದಾರೆ. ಈ ಹಿಂದಿನ ಎರಡು ವೆಬ್ ಸರಣಿಯನ್ನು ಇವರೇ ನಿರ್ದೇಶನ ಮಾಡಿದ್ದರು. ಈ ವೆಬ್ ಸರಣಿ ಜೂನ್ 27ಕ್ಕೆ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಲಿದೆ. ‘ಸ್ಕ್ವಿಡ್ ಗೇಮ್ 2’ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಾಣಲಿಲ್ಲವಾದ್ದರಿಂದ ‘ಸ್ಕ್ವಿಡ್ ಗೇಮ್ 3’ ಮೇಲೆ ನಿರೀಕ್ಷೆ ಹೆಚ್ಚಿದೆ. ಈಗ ಬಿಡುಗಡೆ ಆಗಿರುವ ಟೀಸರ್ ಸಹ ಉತ್ತಮವಾಗಿಯೇ ಕಾಣುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:54 am, Tue, 6 May 25

ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!