Sushmita Sen: ಮಂಗಳಮುಖಿ ವೇಷದಲ್ಲಿ ಸುಷ್ಮಿತಾ ಸೇನ್​; 23 ವರ್ಷದ ಮಗಳ ಪ್ರತಿಕ್ರಿಯೆ ಏನು?

| Updated By: ಮದನ್​ ಕುಮಾರ್​

Updated on: Oct 07, 2022 | 9:09 AM

Shree Gauri Sawant | Taali: ಸುಷ್ಮಿತಾ ಸೇನ್​ ನಟಿಸುತ್ತಿರುವ ಹೊಸ ವೆಬ್​ ಸಿರೀಸ್​ಗೆ ‘ಥಾಲಿ’ ಎಂದು ಹೆಸರು ಇಡಲಾಗಿದೆ. ಅಲ್ಲದೇ ಫಸ್ಟ್​ಲುಕ್​ ಕೂಡ ರಿಲೀಸ್​ ಮಾಡಲಾಗಿದೆ.

Sushmita Sen: ಮಂಗಳಮುಖಿ ವೇಷದಲ್ಲಿ ಸುಷ್ಮಿತಾ ಸೇನ್​; 23 ವರ್ಷದ ಮಗಳ ಪ್ರತಿಕ್ರಿಯೆ ಏನು?
ಸುಷ್ಮಿತಾ ಸೇನ್, ರಿನೀ ಸೇನ್
Follow us on

ನಟಿ ಸುಷ್ಮಿತಾ ಸೇನ್​ (Sushmita Sen) ಅವರು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ‘ಮಿಸ್​ ಯೂನಿವರ್ಸ್​’ ಆಗಿ ಮಿಂಚಿದ ಬಳಿಕ ಅವರು ನಟಿಯಾಗಿ ಸಾಕಷ್ಟು ಹೆಸರು ಮಾಡಿದರು. 1996ರಿಂದಲೂ ಅವರು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಇಂದಿಗೂ ಅವರಿಗೆ ಸಖತ್​ ಡಿಮ್ಯಾಂಡ್​ ಇದೆ. ಪಾತ್ರ ಮತ್ತು ಕಥೆಯನ್ನು ಅಳೆದು-ತೂಗಿ ಅವರು ಹೊಸ ಪ್ರಾಜೆಕ್ಟ್​ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಒಟಿಟಿ ಕ್ಷೇತ್ರದಲ್ಲೂ ಅವರು ಸಕ್ರಿಯರಾಗಿದ್ದಾರೆ. ಈಗ ಸುಷ್ಮಿತಾ ಸೇನ್​ ಒಂದು ಹೊಸ ವೆಬ್​ ಸೀರಿಸ್​ನಲ್ಲಿ ನಟಿಸುತ್ತಿದ್ದಾರೆ. ಆ ಬಗ್ಗೆ ಅವರು ಸೋಶಿಯಲ್​ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಅಚ್ಚರಿ ಎಂದರೆ ಈ ಬಾರಿ ಅವರು ಮಾಡುತ್ತಿರುವುದು ಮಂಗಳಮುಖಿ (Transgender) ಪಾತ್ರ! ಅವರ ಈ ಪಾತ್ರ ಮಾಡುತ್ತಿರುವುದರ ಬಗ್ಗೆ ದತ್ತು ಮಗಳು ರಿನೀ ಸೇನ್​ (Renee Sen) ಸೇರಿದಂತೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ.

ಸುಷ್ಮಿತಾ ಸೇನ್​ ನಟಿಸುತ್ತಿರುವ ಹೊಸ ವೆಬ್​ ಸಿರೀಸ್​ಗೆ ‘ಥಾಲಿ’ ಎಂದು ಹೆಸರು ಇಡಲಾಗಿದೆ. ಅಲ್ಲದೇ ಫಸ್ಟ್​ಲುಕ್​ ಕೂಡ ರಿಲೀಸ್​ ಮಾಡಲಾಗಿದೆ. ಇದು ನೈಜ ಘಟನೆಗಳನ್ನು ಆಧರಿಸಿ ಮೂಡಿಬರುತ್ತಿರುವ ವೆಬ್​ ಸಿರೀಸ್​. ಸಾಮಾಜಿಕ ಹೋರಾಟದ ಮೂಲಕ ಗುರುತಿಸಿಕೊಂಡ ಮಂಗಳಮುಖಿ ಶ್ರೀಗೌರಿ ಸಾವಂತ್​ ಅವರ ಜೀವನದ ವಿವರಗಳನ್ನು ಕೇಂದ್ರವಾಗಿಟ್ಟುಕೊಂಡು ‘ಥಾಲಿ’ ಸಿದ್ಧವಾಗುತ್ತಿದೆ. ಶ್ರೀಗೌರಿ ಸಾವಂತ್ ಅವರ ಪಾತ್ರದಲ್ಲಿ ಸುಷ್ಮಿತಾ ಸೇನ್ ಅಭಿನಯಿಸುತ್ತಿದ್ದಾರೆ.

ಈವರೆಗೂ ಹತ್ತಾರು ಬಗೆಯ ಪಾತ್ರಗಳನ್ನು ಮಾಡಿರುವ ಸುಷ್ಮಿತಾ ಸೇನ್​ ಅವರು ಈಗ ಮಂಗಳಮುಖಿ ಪಾತ್ರ ಮಾಡುತ್ತಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಅವರ ದತ್ತು ಪುತ್ರಿ ರಿನೀ ಸೇನ್​ಗೆ ಈಗ 23 ವರ್ಷ ವಯಸ್ಸು. ಅವರು ಕೂಡ ಸೋಶಿಯಲ್​ ಮೀಡಿಯಾದಲ್ಲಿ ಕಮೆಂಟ್​ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆ ತಿಳಿಸಿದ್ದಾರೆ. ‘ಅಮ್ಮ.. ನಿಮ್ಮನ್ನು ಕಂಡರೆ ತುಂಬ ಹೆಮ್ಮೆ ಎನಿಸುತ್ತಿದೆ. ನಿಮ್ಮನ್ನು ತುಂಬ ಪ್ರೀತಿಸುತ್ತೇನೆ’ ಎಂದು ಅವರು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ
Sushmita Sen: ಲಲಿತ್ ಮೋದಿ ಜತೆ ಡೇಟಿಂಗ್​ ರಹಸ್ಯ ಬಯಲಾದ ಬಳಿಕ ನಟಿ ಸುಶ್ಮಿತಾ ಸೇನ್​ ಮೊದಲ ಪ್ರತಿಕ್ರಿಯೆ ಏನು?
Sushmita Sen: 46ರ ಸುಶ್ಮಿತಾ ಸೇನ್​​​ ಮದುವೆ ಆಗದಿದ್ದರೂ 2 ಮಕ್ಕಳ ತಾಯಿ; 56ರ ಲಲಿತ್​ ಮೋದಿ ಜತೆ ಈಗ ಚಿಗುರಿದೆ ಪ್ರೀತಿ
‘ಪ್ರೀತಿ ಹಾಗೆಯೇ ಉಳಿದಿದೆ’; ಬ್ರೇಕಪ್​ ವಿಚಾರ ಅಧಿಕೃತ ಮಾಡಿದ ನಟಿ ಸುಷ್ಮಿತಾ ಸೇನ್​
ದಶಕದ ಬಳಿಕ ಮರಳಿದ ಮಾಜಿ ವಿಶ್ವಸುಂದರಿ, ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಸುಷ್ಮಿತಾ

ಶ್ರೀಗೌರಿ ಸಾವಂತ್ ಅವರ ಪಾತ್ರವನ್ನು ಮಾಡುತ್ತಿರುವುದಕ್ಕೆ ಸ್ವತಃ ಸುಷ್ಮಿತಾ ಸೇನ್​ಗೆ ಸಖತ್​ ಖುಷಿ ಇದೆ. ‘ಇಂಥ ಸುಂದರ ವ್ಯಕ್ತಿಯ ಪಾತ್ರ ಮಾಡುತ್ತಿರುವುದಕ್ಕೆ, ಅವರ ಕಥೆಯನ್ನು ಜಗತ್ತಿಗೆ ತಿಳಿಸುತ್ತಿರುವುದಕ್ಕೆ ನನಗೆ ತುಂಬ ಹೆಮ್ಮೆ ಎನಿಸುತ್ತದೆ’ ಎಂದು ಅವರು ಪೋಸ್ಟ್​ ಮಾಡಿದ್ದಾರೆ.

ಈ ವೆಬ್​ ಸರಣಿಗೆ ರವಿ ಜಾದವ್​ ನಿರ್ದೇಶನ ಮಾಡುತ್ತಿದ್ದಾರೆ. ಮುಂಬೈನಲ್ಲಿ ಈಗಾಗಲೇ ಶೂಟಿಂಗ್​ ಆರಂಭ ಆಗಿದೆ. ಇದು ವೂಟ್​ ಸೆಲೆಕ್ಟ್​ನಲ್ಲಿ ಪ್ರಸಾರ ಆಗಲಿದೆ. ರಿಲೀಸ್​ ಡೇಟ್​ ಬಗ್ಗೆ ಇನ್ನಷ್ಟೇ ಘೋಷಣೆ ಆಗಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:09 am, Fri, 7 October 22