ಸೂಪರ್ ಹಿಟ್ ಕ್ರೈಮ್ ಥ್ರಿಲ್ಲರ್ ವೆಬ್ ಸೀರಿಸ್ ಈಗ ಒಟಿಟಿಯಲ್ಲಿ; ಕೊನೆವರೆಗೂ ಗೆಸ್ ಮಾಡ್ತಾನೇ ಇರ್ಬೇಕು

|

Updated on: Mar 07, 2025 | 2:30 PM

ಕೊವಿಡ್ ನಂತರ ಭಾರತದಲ್ಲಿ ವೆಬ್ ಸರಣಿಗಳ ಜನಪ್ರಿಯತೆ ಹೆಚ್ಚಿದೆ. ತಮಿಳಿನ ವೆಬ್ ಸೀರಿಸ್​​ಗೆ ಎರಡನೇ ಪಾರ್ಟ್​ ಅಮೇಜಾನ್ ಪ್ರೈಮ್​ಗೆ ಬಂದಿದೆ. ಕಥಿರ್ ಮತ್ತು ಐಶ್ವರ್ಯಾ ರಾಜೇಶ್ ನಟಿಸಿರುವ ಈ ಸರಣಿಯು ಒಂದು ಕೊಲೆ ಪ್ರಕರಣವನ್ನು ಕೇಂದ್ರೀಕರಿಸಿದೆ. ಮೊದಲ ಸೀಸನ್ ನೋಡಿದವರಿಗೆ ಎರಡನೇ ಸೀಸನ್ ಅರ್ಥ ಮಾಡಿಕೊಳ್ಳಲು ಸುಲಭ.

ಸೂಪರ್ ಹಿಟ್ ಕ್ರೈಮ್ ಥ್ರಿಲ್ಲರ್ ವೆಬ್ ಸೀರಿಸ್ ಈಗ ಒಟಿಟಿಯಲ್ಲಿ; ಕೊನೆವರೆಗೂ ಗೆಸ್ ಮಾಡ್ತಾನೇ ಇರ್ಬೇಕು
ವೆಬ್ ಸರಣಿ
Follow us on

ಕೊವಿಡ್ ಕಾಣಿಸಿಕೊಂಡ ಬಳಿಕ ಭಾರತದಲ್ಲಿ ವೆಬ್ ಸೀರಿಸ್​​ಗಳ ನಿರ್ಮಾಣ ಹೆಚ್ಚಾಗಿದೆ. ಕೊರೊನಾ ಸಮಯದಲ್ಲಿ ಒಟಿಟಿ ವ್ಯಾಪ್ತಿ ಹೆಚ್ಚಿದ್ದರಿಂದ ಸಿನಿಮಾ ನಿರ್ಮಾಪಕರು ವೆಬ್​ ಸೀರಿಸ್​ಗಳ ನಿರ್ಮಾಣಕ್ಕೆ ಆದ್ಯತೆ ಕೊಟ್ಟರು. ಸದ್ಯದ ಮಾರುಕಟ್ಟೆಯಲ್ಲಿ ಕ್ರೈಮ್ ಥ್ರಿಲ್ಲರ್ (Crime Thriller) ವೆಬ್​ ಸೀರಿಸ್​ಗೆ ಸಖತ್ ಬೇಡಿಕೆ ಇದೆ. ಈಗ ತಮಿಳಿನ ಸೂಪರ್ ಹಿಟ್ ವೆಬ್ ಸರಣಿ ಒಂದು ಒಟಿಟಿಯಲ್ಲಿ ಲಭ್ಯವಾಗಿದೆ. ಇದನ್ನು ನೀವು ಮಿಸ್ ಮಾಡದೇ ನೋಡಬೇಕು. ಆ ಬಗ್ಗೆ ಇಲ್ಲಿದೆ ಮಾಹಿತಿ.

ಸದ್ಯ ರಿಲೀಸ್ ಆಗಿರೋ ತಮಿಳಿನ ವೆಬ್ ಸರಣಿಯ ಹೆಸರು ‘ಸುಳಲ್ 2’. ‘ಸುಳಲ್’ ವೆಬ್ ಸರಣಿ 2022ರ ಜೂನ್ 17ರಂದು ಪ್ರಸಾರ ಆರಂಭಿಸಿತು. ಇದು ಎಂಟು ಎಪಿಸೋಡ್​ಗಳನ್ನು ಒಳಗೊಂಡಿತ್ತು. ಕಧಿರ್, ಐಶ್ವರ್ಯಾ ರಾಜೇಶ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸಕ್ಕರೆ (ಕಧಿರ್) ಪೊಲೀಸ್ ಟ್ರೇನಿಂಗ್ ಮುಗಿಸಿ ತನ್ನ ಹುಟ್ಟೂರಿನಲ್ಲೇ ಪೋಸ್ಟಿಂಗ್ ಹಾಕಿಸಿಕೊಳ್ಳುತ್ತಾನೆ. ಈ ರೀತಿ ಪೋಸ್ಟ್​ ಹಾಕಿಸಿಕೊಂಡಾಗ ಒಂದು ಪ್ರಕರಣದಲ್ಲಿ ಅವನು ವಿಚಾರಣೆ ನಡೆಸಬೇಕಾಗುತ್ತದೆ. ನಂತರ ಈ ಪ್ರಕರಣ ಹೇಗೆ ಭೇದಿಸುತ್ತಾನೆ ಎಂಬುದು ಚಿತ್ರದ ಕಥೆ.

ಇದನ್ನೂ ಓದಿ: ಮಲಯಾಳಂನ ಈ ಸೂಪರ್ ಹಿಟ್ ಕ್ರೈಮ್ ಥ್ರಿಲ್ಲರ್ ಸಿನಿಮಾ ಒಟಿಟಿಗೆ; ಕನ್ನಡದಲ್ಲೂ ಲಭ್ಯ

ಇದನ್ನೂ ಓದಿ
ಪತಿ ನಾಗ ಚೈತನ್ಯ ಜೊತೆ ಹನಿಮೂನ್ ತೆರೆಳಿದ ಶೋಭಿತಾ ಧುಲಿಪಾಲ್
ಸಿನಿಮಾ ಕೈಬಿಟ್ಟು ಸಲ್ಮಾನ್ ಖಾನ್​ಗೆ ಕ್ಷಮೆ ಕೇಳಿದ ಅಟ್ಲಿ; ರಾಂಗ್ ಆದ ನಟ?
ಮಲಯಾಳಂನ ಈ ಸೂಪರ್ ಹಿಟ್ ಕ್ರೈಮ್ ಥ್ರಿಲ್ಲರ್ ಸಿನಿಮಾ ಒಟಿಟಿಗೆ

ಎರಡನೇ ಸರಣಿ ಇತ್ತೀಚೆಗೆ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರ ಆರಂಭಿಸಿದೆ. ಈ ಸರಣಿ ಕೂಡ ಒಂದು ಕೊಲೆ ಸುತ್ತ ಸಾಗುತ್ತದೆ. ಮೊದಲ ಸೀಸನ್​ ರೀತಿಯೇ ಈ ಸೀಸನ್​ನಲ್ಲೂ ಅನುಮಾನಗಳು ಎಲ್ಲರ ಮೇಲೂ ಸಾಗುತ್ತವೆ. ಕೊನೆಯಲ್ಲಿ ಕೊಲೆ ಮಾಡಿದ ವ್ಯಕ್ತಿ ಯಾರು? ಕೊಲೆ ಹಿಂದೆ ಯಾರಿದ್ದಾರೆ ಎಂಬುದು ತಿಳಿಯುತ್ತದೆ.

ಮೊದಲ ಸೀಸನ್ ನೋಡಲೇಬೇಕೆ?

‘ಸುಳಲ್’ ಮೊದಲ ಸೀಸನ್ ಹಾಗೂ ಎರಡನೇ ಸೀಸನ್​ಗೆ ಆರಂಭದಲ್ಲಿ ಕೆಲವು ಲಿಂಕ್​ಗಳು ಇವೆ. ಹೀಗಾಗಿ, ಮೊದಲ ಸೀಸನ್​ ವೀಕ್ಷಣೆ ಮಾಡಿದ್ದರೆ ಎರಡನೇ ಸೀಸನ್ ಅರ್ಥ ಮಾಡಿಕೊಳ್ಳೋದು, ಕಥಾ ನಾಯಕ ಯಾವ ರೀತಿಯಲ್ಲಿ ಆಲೋಚನೆ ಮಾಡುತ್ತಾನೆ ಎಂಬುದು ಸುಲಭದವಾಗಿ ಅರ್ಥವಾಗುತ್ತದೆ. ತಮಿಳಿನ ಜೊತೆಗೆ ಕನ್ನಡದಲ್ಲೂ ಈ ಸೀರಿಸ್ ವೀಕ್ಷಣೆಗೆ ಲಭ್ಯವಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:27 pm, Fri, 7 March 25