ಒಟಿಟಿಯಲ್ಲಿ ಕಾಲೇಜ್ ಕಹಾನಿ ಕಥೆ; ಫನ್​, ಟ್ವಿಸ್ಟ್, ಫರ್ಫಾರ್ಮೆನ್ಸ್ ಇರೋ ಸಿನಿಮಾನ ಮಿಸ್ ಮಾಡಲೇಬೇಡಿ

ಸೂಪರ್ ಹಿಟ್ ತಮಿಳು ಸಿನಿಮಾ ಮಾರ್ಚ್ 21ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಕಾಲೇಜು ಹಿನ್ನೆಲೆಯ ಈ ಚಿತ್ರ, ಅನಿರೀಕ್ಷಿತ ಟ್ವಿಸ್ಟ್‌ಗಳಿಂದ ಕೂಡಿದೆ. ಥಿಯೇಟರ್‌ನಲ್ಲಿ ದೊಡ್ಡ ಯಶಸ್ಸು ಕಂಡ ಈ ಸಿನಿಮಾ ಒಟಿಟಿಯಲ್ಲಿಯೂ ಭರ್ಜರಿ ಪ್ರೇಕ್ಷಕರನ್ನು ಸೆಳೆಯುವ ನಿರೀಕ್ಷೆಯಿದೆ. ಪ್ರದೀಪ್ ರಂಗನಾಥನ್ ಮತ್ತು ಅನುಪಮಾ ಪರಮೇಶ್ವರನ್ ಮುಖ್ಯ ಪಾತ್ರಗಳಲ್ಲಿದ್ದಾರೆ.

ಒಟಿಟಿಯಲ್ಲಿ ಕಾಲೇಜ್ ಕಹಾನಿ ಕಥೆ; ಫನ್​, ಟ್ವಿಸ್ಟ್, ಫರ್ಫಾರ್ಮೆನ್ಸ್ ಇರೋ ಸಿನಿಮಾನ ಮಿಸ್ ಮಾಡಲೇಬೇಡಿ
ಡ್ರ್ಯಾಗನ್ ಸಿನಿಮಾ

Updated on: Mar 20, 2025 | 12:57 PM

ಶುಕ್ರವಾರ ಸಮೀಪಿಸಿದೆ. ಥಿಯೇಟರ್​ನಲ್ಲಿ ಒಂದಷ್ಟು ಸಿನಿಮಾಗಳು ರಿಲೀಸ್​ಗೆ ರೆಡಿ ಇವೆ. ಅದೇ ರೀತಿ ಒಟಿಟಿಯಲ್ಲಿ ಚಿತ್ರಗಳು ತೆರೆಗೆ ಬರುತ್ತಿವೆ. ಥಿಯೇಟರ್​ನಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆದ ತಮಿಳಿನ ‘ಡ್ರ್ಯಾಗನ್’ ಸಿನಿಮಾ (Dragon Movie) ಒಟಿಟಿಯಲ್ಲಿ ತೆರೆಗೆ ಬರುತ್ತಿದೆ. ಮಾರ್ಚ್​ 21ರಿಂದ ನೆಟ್​ಫ್ಲಿಕ್ಸ್ (Netflix) ಒಟಿಟಿ ಮೂಲಕ ಸಿನಿಮಾ ಪ್ರಸಾರ ಕಾಣಲಿದೆ. ಈ ಸಿನಿಮಾ ಕಾಲೇಜಿನ ಕಹಾನಿ ಜೊತೆ ಒಂದಷ್ಟು ಟ್ವಿಸ್ಟ್​ಗಳನ್ನು ಕೂಡ ಒಳಗೊಂಡಿದೆ.

‘ಡ್ರ್ಯಾಗನ್’ ಸಿನಿಮಾ ಫಬ್ರವರಿ 21ರಂದು ಥಿಯೇಟರ್​ನಲ್ಲಿ ಬಿಡುಗಡೆ ಕಂಡಿತು. 30-35 ಕೋಟಿ ರೂಪಾಯಿ ಬಜೆಟ್​ನಲ್ಲಿ ರೆಡಿ ಆದ ಈ ಸಿನಿಮಾ ಬರೋಬ್ಬರಿ 150 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಪ್ರದೀಪ್ ರಂಗನಾಥನ್, ಅನುಪಮಾ ಪರಮೇಶ್ವರನ್, ಕಯಾದು ಲೋಹರ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಸಖತ್ ಫನ್ ಆಗಿದೆ.

ಕಥಾ ನಾಯಕ ರಾಘವನ್ ಅಥವಾ ಡ್ರ್ಯಾಗನ್ (ಪ್ರದೀಪ್) 12th ಅಲ್ಲಿ 96 ಪರ್ಸೆಂಟೇಜ್ ಮಾಡಿ ಒಂದು ಹುಡುಗಿಗೆ ಪ್ರಪೋಸ್ ಮಾಡುತ್ತಾನೆ. ಆದರೆ, ಇದಕ್ಕೆ ಆ ಹುಡುಗಿ, ‘ನೀನು ತುಂಬಾ ಒಳ್ಳೆಯವನು. ನನಗೆ ಬ್ಯಾಡ್ ಬಾಯ್ಸ್ ಇಷ್ಟ’ ಎನ್ನುತ್ತಾಳೆ. ಆಗ ಹುಡುಗ ಬ್ಯಾಡ್ ಬಾಯ್ ಆಗುತ್ತಾನೆ. ಡಿಗ್ರೀಲಿ ಬರೋಬ್ಬರಿ ಒಂದಲ್ಲ ಎರಡಲ್ಲ ಬರೋಬ್ಬರಿ 48 ಸಬ್ಜೆಕ್ಟ್​ನ ಬ್ಯಾಕ್ ಉಳಿಸಿಕೊಳ್ಳುತ್ತಾನೆ. ಅಲ್ಲಿಂದ ಸಿನಿಮಾದ ಕಥೆ ಶುರು.

ಇದನ್ನೂ ಓದಿ
ಒಳ್ಳೆಯ ರೇಟಿಂಗ್, ಕಾಮಿಡಿ ಜೊತೆ ಸಸ್ಪೆನ್ಸ್; ಈ ಚಿತ್ರವನ್ನು ಮಾಡಿಕೊಳ್ಳಬೇಡಿ
ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿರುವ ‘ಛಾವಾ’ ಒಟಿಟಿಗೆ ಯಾವಾಗ?
ಒಟಿಟಿಯಲ್ಲಿ ಹೊಸದಾಗಿ ರಿಲೀಸ್ ಆದ ಈ ಎರಡು ಸಿನಿಮಾಗಳನ್ನು ತಪ್ಪದೇ ನೋಡಿ
ಸೂಪರ್ ಹಿಟ್ ಕ್ರೈಮ್ ಥ್ರಿಲ್ಲರ್ ವೆಬ್ ಸೀರಿಸ್ ಈಗ ಒಟಿಟಿಯಲ್ಲಿ

ಸಿನಿಮಾದಲ್ಲಿ ಕಾಲೇಜ್ ಕಥೆ ಇದೆ. ಕಾಲೇಜ್​ನಲ್ಲಿ ಬ್ಯಾಡ್ ಬಾಯ್ ಆಗಿ ಮೆರೆದ ಹುಡುಗ ನಂತರ ಏನೆಲ್ಲ ಕಷ್ಟಪಡುತ್ತಾನೆ ಎಂಬ ವಿಚಾರವನ್ನು ಸಿನಿಮಾದಲ್ಲಿ ಹೇಳಲಾಗಿದೆ. ಈ ಚಿತ್ರದಲ್ಲಿ ಫನ್ ವಿಚಾರ ಇದೆ. ಜೊತೆಗೆ ಟ್ವಿಸ್ಟ್​ಗಳು ಇವೆ. ಅಷ್ಟೇ ಅಲ್ಲ, ಎಲ್ಲಾಕಲಾವಿದರಿಂದ ಒಳ್ಳೆಯ ಪರ್ಫಾರ್ಮೆನ್ಸ್ ಹಾಗೆ ಸಮಾಜಕ್ಕೆ ಒಂದೊಳ್ಳೆಯ ಸಂದೇಶ ಕೂಡ ಇದೆ.

ಇದನ್ನೂ ಓದಿ: ಸೂಪರ್ ಹಿಟ್ ಕ್ರೈಮ್ ಥ್ರಿಲ್ಲರ್ ವೆಬ್ ಸೀರಿಸ್ ಈಗ ಒಟಿಟಿಯಲ್ಲಿ; ಕೊನೆವರೆಗೂ ಗೆಸ್ ಮಾಡ್ತಾನೇ ಇರ್ಬೇಕು

‘ಡ್ರ್ಯಾಗನ್’ ಸಿನಿಮಾದ ಸ್ಕ್ರೀನ್​ಪ್ಲೇ ಇಷ್ಟ ಆಗುವ ರೀತಿಯಲ್ಲಿ ಇದೆ. ಚಿತ್ರಕ್ಕೆ ಅಶ್ವತ್ಥ್ ಮಾರಿಮುತ್ತು ನಿರ್ದೇಶನ ಮಾಡಿದ್ದಾರೆ. ಈ ಮೊದಲು ಅವರು ‘ಓಹ್ ಮೈ ಕಡವುಲೆ’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾ ಗಮನ ಸೆಳೆದಿತ್ತು. ಈಗ ಅವರು ‘ಡ್ರ್ಯಾಗನ್’ ಮಾಡಿ ಗಮನ ಸೆಳೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us