ಬಿಗ್ ಬಾಸ್ ಎಂದರೆ ಒಂದು ವರ್ಗದ ಪ್ರೇಕ್ಷಕರಿಗೆ ಸಖತ್ ಇಷ್ಟ. ಈ ಶೋನಲ್ಲಿ ಇರುವಷ್ಟು ಮಸಾಲೆ ಬೇರೆ ಯಾವ ಕಾರ್ಯಕ್ರಮದಲ್ಲಿ ಸಿಗುವುದಿಲ್ಲ. ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಬಿಗ್ ಬಾಸ್ ಕಾರ್ಯಕ್ರಮದ ಸ್ವರೂಪ ಕೂಡ ಬದಲಾಗಿದೆ. ಇದು ಒಟಿಟಿ ಜಮಾನಾ. ಹಾಗಾಗಿ ಈ ರಿಯಾಲಿಟಿ ಶೋನ ಒಟಿಟಿ ವರ್ಷನ್ (Bigg Boss OTT) ಕೂಡ ಜನರ ಎದುರು ಬಂದಿದೆ. ಹಿಂದಿಯಲ್ಲಿ ಈಗಾಗಲೇ 2 ಸೀಸನ್ಗಳಲ್ಲಿ ‘ಬಿಗ್ ಬಾಸ್ ಒಟಿಟಿ’ ಪ್ರಸಾರ ಆಗಿದೆ. ಈಗ ಬಿಗ್ ಬಾಸ್ ಒಟಿಟಿ ಮೂರನೇ ಸೀಸನ್ಗೆ (Bigg Boss OTT 3) ತಯಾರಿ ನಡೆಯುತ್ತಿದೆ. ಅಲ್ಲದೇ ಖಾಸಗಿ ವಿಡಿಯೋ ವೈರಲ್ ಮಾಡಿಕೊಂಡ ನಟಿ ತ್ರಿಶಾ ಕರ್ ಮಧು (Trisha Kar Madhu) ಅವರಿಗೆ ಅವಕಾಶ ನೀಡಲಾಗುವುದು ಎಂದು ಹೇಳಲಾಗುತ್ತಿದೆ.
ಕಾಂಟ್ರವರ್ಸಿ ಮಾಡಿಕೊಂಡ ವ್ಯಕ್ತಿಗಳಿಗೆ ಬಿಗ್ ಬಾಸ್ ಶೋನಲ್ಲಿ ಸುಲಭವಾಗಿ ಅವಕಾಶ ಸಿಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಕಿರಿಕ್ ಮಾಡಿಕೊಂಡ ವ್ಯಕ್ತಿಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಖಾಸಗಿ ವಿಡಿಯೋ ಲೀಕ್ ಮಾಡಿಕೊಂಡ ನಟ-ನಟಿಯರು ಕೂಡ ಬಿಗ್ ಬಾಸ್ ಶೋನಲ್ಲಿ ಅವಕಾಶ ಪಡೆದು ಮಿಂಚಿದ್ದಾರೆ. ಅದೇ ಈಗ ಮತ್ತೆ ಮರುಕಳಿಸುವ ಲಕ್ಷಣ ಕಾಣಿಸುತ್ತಿದೆ.
ಹಿಂದಿಯ ‘ಬಿಗ್ ಬಾಸ್ ಒಟಿಟಿ 3’ ರಿಯಾಲಿಟಿ ಶೋ ಮೇ ತಿಂಗಳಲ್ಲಿ ಶುರುವಾಗುವ ಸಾಧ್ಯತೆ ಇದೆ. ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ವರದಿಗಳ ಪ್ರಕಾರ ಭೋಜ್ಪುರಿ ನಟಿ ತ್ರಿಶಾ ಕರ್ ಮಧು ಅವರಿಗೆ ಆಫರ್ ನೀಡಲಾಗಿದೆ. 2021ರಲ್ಲಿ ತ್ರಿಶಾ ಕರ್ ಮಧು ಅವರ ಖಾಸಗಿ ವಿಡಿಯೋ ಲೀಕ್ ಆಗಿತ್ತು. ಪುರುಷನೊಬ್ಬನ ಜೊತೆ ಕಿಸ್ ಮಾಡುತ್ತಾ ತುಂಬಾ ಖಾಸಗಿಯಾಗಿ ಕಳೆದ ಕ್ಷಣಗಳ ವಿಡಿಯೋ ಅದಾಗಿತ್ತು. ವೈರಲ್ ಆದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ತ್ರಿಶಾ ಕರ್ ಮಧು ಅವರು ಆ ಬಗ್ಗೆ ಮಾತನಾಡಿದ್ದರು. ಈಗ ಅವರ ಹೆಸರು ‘ಬಿಗ್ ಬಾಸ್ ಒಟಿಟಿ ಸೀಸನ್ 3’ ಕಾರ್ಯಕ್ರಮದ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಈ ಬಗ್ಗೆ ಪ್ರೇಕ್ಷಕರಿಗೆ ಕೌತುಕ ಮೂಡಿದೆ.
ಇದನ್ನೂ ಓದಿ: ‘ಖಿನ್ನತೆಯಿಂದ ಗಾಂಜಾ ಸೇವಿಸಿದೆ’: ಬಂಧನದ ವೇಳೆ ಒಪ್ಪಿಕೊಂಡ ಬಿಗ್ ಬಾಸ್ ಸ್ಪರ್ಧಿ; ವಿಡಿಯೋ ವೈರಲ್
ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಅವರು ‘ಬಿಗ್ ಬಾಸ್ ಒಟಿಟಿ ಸೀಸನ್ 1’ ಕಾರ್ಯಕ್ರಮದ ನಿರೂಪಣೆ ಮಾಡಿದ್ದರು. ‘ಬಿಗ್ ಬಾಸ್ ಒಟಿಟಿ ಸೀಸನ್ 2’ ಶೋ ಸಲ್ಮಾನ್ ಖಾನ್ ಅವರ ನಿರೂಪಣೆಯಲ್ಲಿ ಮೂಡಿಬಂದಿತ್ತು. ಕನ್ನಡದಲ್ಲಿ ಕಿಚ್ಚ ಸುದೀಪ್ ಅವರು ಟಿವಿ ಜೊತೆಗೆ ಒಟಿಟಿ ಸೀಸನ್ಗೂ ನಿರೂಪಣೆ ಮಾಡಿ ಜನಮನ ಗೆದ್ದಿದ್ದಾರೆ. ‘ಬಿಗ್ ಬಾಸ್ ಕನ್ನಡ ಒಟಿಟಿ’ ಕಾರ್ಯಕ್ರಮದಲ್ಲಿ ಸೋನು ಶ್ರೀನಿವಾಸ್ ಗೌಡ, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್, ರಾಕೇಶ್ ಅಡಿಗ ಮುಂತಾದವರು ಪಾಲ್ಗೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.