‘ಬಿಗ್ ಬಾಸ್ ಒಟಿಟಿ’ (Bigg Boss OTT) ಈಗಾಗಲೇ ಎರಡು ವಾರಗಳನ್ನು ಪೂರ್ಣಗೊಳಿಸಿದೆ. ಇನ್ನು ಕೆಲವೇ ವಾರಗಳಲ್ಲಿ ಒಟಿಟಿ ಆಟ ಪೂರ್ಣಗೊಳ್ಳಲಿದ್ದು, ಟಿವಿಯಲ್ಲಿ ಪ್ರಸಾರವಾಗುವ ‘ಬಿಗ್ ಬಾಸ್’ ಶುರು ಆಗಲಿದೆ. ಒಟಿಟಿಯಲ್ಲಿ ಎಲ್ಲರೂ ತಮ್ಮ ಬೆಸ್ಟ್ ಕೊಡೋಕೆ ಪ್ರಯತ್ನಿಸುತ್ತಿದ್ದಾರೆ. ಈ ಮಧ್ಯೆ ಉದಯ್ ಸೂರ್ಯ (Uday Surya) ಅವರ ವಿರುದ್ಧ ಗಂಭೀರ ಆರೋಪ ಒಂದು ಕೇಳಿ ಬಂದಿದೆ. ಮಹಿಳಾ ಸ್ಪರ್ಧಿಗಳ ಮಧ್ಯೆ ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿದೆ. ಉದಯ್ಗೆ ಈ ಬಗ್ಗೆ ಬುದ್ಧಿವಾದ ಹೇಳಬೇಕು ಎಂಬ ಬಗ್ಗೆಯೂ ಚರ್ಚೆ ಆಗುತ್ತಿದೆ.
ಅಕ್ಷತಾ ಅವರು ಒಂದು ಫಿಸಿಕಲ್ ಟಾಸ್ಕ್ ಮುಗಿಸಿ ಆಗತಾನೇ ಬಂದಿದ್ದರು. ಈ ವೇಳೆ ಅವರನ್ನು ಉದಯ್ ಸೂರ್ಯ ಹಿಂಬದಿಯಿಂದ ಹಗ್ ಮಾಡಿದರು. ಅಲ್ಲದೆ, ಕಿವಿಯ ಬಳಿ ಕಿಸ್ ಮಾಡಿದರು. ಈ ಘಟನೆ ಬಗ್ಗೆ ಅಕ್ಷತಾ ಕೊಂಚ ಸಮಯ ಬಿಟ್ಟು ಉದಯ್ ಬಳಿ ಮಾತನಾಡಿದ್ದಾರೆ. ‘ನೀವು ಆ ರೀತಿ ಹಗ್ ಮಾಡಬೇಡಿ. ನೋಡುವವರಿಗೆ ಅದು ಬೇರೆಯ ರೀತಿ ಕಾಣುತ್ತದೆ. ಇನ್ಮುಂದೆ ಆ ರೀತಿ ಮಾಡಬೇಡಿ’ ಎಂದು ತಾಕೀತು ಮಾಡಿದರು. ಇದಕ್ಕೆ ಉದಯ್ ಸೂರ್ಯ ಅಪ್ಸೆಟ್ ಆದರು.
ಸಾನ್ಯಾ ಹಾಗೂ ನಂದು ಮಧ್ಯೆಯೂ ಇದೇ ವಿಚಾರ ಚರ್ಚೆಗೆ ಬಂತು. ‘ಉದಯ್ ಹಿಂದಿನಿಂದ ಬಂದು ಹಗ್ ಮಾಡಿ, ಕಿವಿಗೆ ಕಿಸ್ ಮಾಡುತ್ತಾರೆ. ಹಾಗೆ ಮಾಡಿದಾಗ ಎಷ್ಟು ಅನ್ಕಂಪರ್ಟೆಬಲ್ ಫೀಲ್ ಆಗುತ್ತದೆ. ನನಗೆ ಮೊನ್ನೆ ಕೋಪವೇ ಬಂತು. ಎಲ್ಲರೂ ಇದ್ದಾರೆ ಎಂದು ನಾನು ರಿಯಾಕ್ಟ್ ಮಾಡಲಿಲ್ಲ’ ಎಂದರು ಸಾನ್ಯಾ. ಇದಕ್ಕೆ ನಂದು ಕೂಡ ಧ್ವನಿಗೂಡಿಸಿದರು. ‘ಅವನು ನನಗೂ ಮೊನ್ನೆ ಅದೇ ರೀತಿ ಮಾಡಿದ್ದ. ಜಶ್ವಂತ್ ಎದುರೇ ಆ ರೀತಿ ಮಾಡಿದ’ ಎಂದರು ನಂದು ಕೂಡ ದೂರಿದರು.
ಇದನ್ನೂ ಓದಿ: ಸಾನ್ಯಾ-ರೂಪೇಶ್ ಬಗ್ಗೆ ಗಾಸಿಪ್ ಹಬ್ಬಿಸಿದ ಸೋಮಣ್ಣಗೆ ನೆಟ್ಟಿಗರಿಂದ ಛೀಮಾರಿ
ಉದಯ್ ಸೂರ್ಯ ಅವರ ನಡೆಗೆ ಮನೆಯ ಮಹಿಳಾ ಸ್ಪರ್ಧಿಗಳಿಂದ ವಿರೋಧ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ಶನಿವಾರ (ಮಾರ್ಚ್ 20) ಸುದೀಪ್ ಅವರು ಬರಲಿದ್ದಾರೆ. ಈ ವೇಳೆ ಅವರು ಈ ಬಗ್ಗೆ ಚರ್ಚೆ ಮಾಡಿದರೂ ಅಚ್ಚರಿ ಏನಿಲ್ಲ.