ಸಾನ್ಯಾ-ರೂಪೇಶ್​ ಬಗ್ಗೆ ಗಾಸಿಪ್ ಹಬ್ಬಿಸಿದ ಸೋಮಣ್ಣಗೆ ನೆಟ್ಟಿಗರಿಂದ ಛೀಮಾರಿ

ರೂಪೇಶ್ ಹಾಗೂ ಸಾನ್ಯಾ ಹೆಚ್ಚು ಸಮಯ ಒಟ್ಟಾಗಿ ಕಳೆಯುತ್ತಿದ್ದಾರೆ ಎಂಬ ಕಾರಣಕ್ಕೆ ಅವರ ಬಗ್ಗೆ ಸೋಮಣ್ಣ ಅವರು ಇತರ ಸ್ಪರ್ಧಿಗಳ ಜತೆ ನಾನಾ ರೀತಿಯಲ್ಲಿ ಮಾತನಾಡಿದ್ದಾರೆ.

ಸಾನ್ಯಾ-ರೂಪೇಶ್​ ಬಗ್ಗೆ ಗಾಸಿಪ್ ಹಬ್ಬಿಸಿದ ಸೋಮಣ್ಣಗೆ ನೆಟ್ಟಿಗರಿಂದ ಛೀಮಾರಿ
ರೂಪೇಶ್​,ಸಾನ್ಯಾ, ಸೋಮಣ್ಣ
TV9kannada Web Team

| Edited By: Rajesh Duggumane

Aug 18, 2022 | 3:26 PM

ನಟಿ ಸಾನ್ಯಾ ಅಯ್ಯರ್ (Sanya Iyer) ಚಿಕ್ಕ ವಯಸ್ಸಿನಲ್ಲೇ ಧಾರಾವಾಹಿಯಲ್ಲಿ ನಟಿಸಿ ಗುರುತಿಸಿಕೊಂಡರು. ಆದರೆ, ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ತಂದೆಯ ಪ್ರೀತಿ ಸಿಗದೇ ಕಣ್ಣೀರು ಹಾಕಿದ್ದಾರೆ. ಸಾನ್ಯಾ ಅಯ್ಯರ್ ಬಾಯ್​ಫ್ರೆಂಡ್ ಜತೆ ಕುಳಿತಿರುವಾಗ ಮಲತಂದೆ ಅದನ್ನು ವಿಡಿಯೋ ಮಾಡಿದ್ದರು. ಈ ವಿಚಾರದಿಂದಲೂ ಸಾನ್ಯಾ ಅಯ್ಯರ್ ಸಾಕಷ್ಟು ನೊಂದಿದ್ದರು. ಈಗ ಬಿಗ್​ ಬಾಸ್ (Bigg Boss) ಮನೆಯಲ್ಲಿ ಸಾನ್ಯಾ ಮತ್ತೆ ಕಣ್ಣೀರು ಹಾಕುವಂತಾಗಿದೆ. ಇಬ್ಬರೂ ಒಟ್ಟಾಗಿ ಇರುತ್ತಾರೆ ಎಂಬ ಕಾರಣಕ್ಕೆ ಅವರ ಬಗ್ಗೆ ಗಾಸಿಪ್ ಹಬ್ಬಿಸಲಾಗುತ್ತಿದೆ. ಸೋಮಣ್ಣ ಮಾಚಿಮಾಡ ಅವರು ಇವರ ಬಗ್ಗೆ ನಾನಾ ರೀತಿಯ ಮಾತುಗಳನ್ನು ಆಡುತ್ತಿದ್ದಾರೆ. ಇದು ಸಾನ್ಯಾ ಅಯ್ಯರ್ ಬೇಸರಕ್ಕೆ ಕಾರಣ ಆಗಿದೆ.

ಸಾನ್ಯಾ ಹಾಗೂ ರೂಪೇಶ್ ಮಧ್ಯೆ ಒಳ್ಳೆಯ ಕೆಮಿಸ್ಟ್ರಿ ಇದೆ. ಇಬ್ಬರೂ ಒಟ್ಟಾಗಿ ಸಿನಿಮಾ ಮಾಡಬೇಕು ಎಂಬ ಅಭಿಪ್ರಾಯವನ್ನು ಮನೆಯಲ್ಲಿ ಕೆಲವರು ವ್ಯಕ್ತಪಡಿಸಿದ್ದಾರೆ. ಈ ಮಾತನ್ನು ಕೇಳಿ ಸಾನ್ಯಾ ಕೂಡ ಖುಷಿ ಪಟ್ಟಿದ್ದರು. ರೂಪೇಶ್ ಹಾಗೂ ಸಾನ್ಯಾ ಹೆಚ್ಚು ಸಮಯ ಒಟ್ಟಾಗಿ ಕಳೆಯುತ್ತಿದ್ದಾರೆ ಎಂಬ ಕಾರಣಕ್ಕೆ ಅವರ ಬಗ್ಗೆ ಸೋಮಣ್ಣ ಅವರು ಇತರ ಸ್ಪರ್ಧಿಗಳ ಜತೆ ನಾನಾ ರೀತಿಯಲ್ಲಿ ಮಾತನಾಡಿದ್ದಾರೆ. ‘ನಮ್ಮ ಮನೆಯಲ್ಲಿ ರೂಪೇಶ್​-ಸಾನ್ಯಾ ಹೆಚ್ಚು ಕಚ್ಕೊಂಡು ಇದಾರೆ’ ಎಂಬ ವಾಕ್ಯವನ್ನು ಬಳಸಿದ್ದರು.

ಈ ವಿಚಾರ ಸಾನ್ಯಾ ಹಾಗೂ ರೂಪೇಶ್​ ಕಿವಿಗೆ ಬಿದ್ದಿದೆ. ಈ ಬಗ್ಗೆ ಸೋಮಣ್ಣ ಬಳಿ ಪ್ರಶ್ನೆ ಮಾಡಿದಾಗ ಅವರು ತಮ್ಮದೇ ವಾದ ಮುಂದಿಟ್ಟಿದ್ದಾರೆ. ‘ನೀವಿಬ್ಬರೂ ಹೆಚ್ಚು ಸಮಯ ಕಳೆದಿದ್ದು ಸತ್ಯ. ನಾನು ಅದನ್ನು ಕಣ್ಣಾರೆ ನೋಡಿದ್ದೂ ಸತ್ಯ’ ಎಂದರು ಸೋಮಣ್ಣ. ‘ಇಬ್ಬರೂ ಒಟ್ಟಾಗಿ ಸಮಯ ಕಳೆಯುತ್ತಿದ್ದಾರೆ ಎಂದ ಮಾತ್ರಕ್ಕೆ ಅವರ ಮಧ್ಯೆ ಫ್ರೆಂಡ್​​ಶಿಪ್ ಇರಬಾರದು ಎಂಬ ರೂಲ್ಸ್ ಇದೆಯೇ’ ಎಂದು ಸಾನ್ಯಾ ಪ್ರಶ್ನೆ ಮಾಡಿದರು.

‘ನನಗೆ ಯಾರ ವ್ಯಕ್ತಿತ್ವವನ್ನೂ ಡ್ಯಾಮೇಜ್ ಮಾಡಬೇಕು ಎಂಬ ಉದ್ದೇಶ ಇಲ್ಲ’ ಎಂದು ಸೋಮಣ್ಣ ಹೇಳಿದರು. ‘ಹಾಗೆ ಉದ್ದೇಶ ಇಲ್ಲ ಎಂದಾದಮೇಲೆ ಈ ರೀತಿ ಏಕೆ ಮಾಡಿದಿರಿ’ ಎಂದು ಸಾನ್ಯಾ ಪ್ರಶ್ನೆ ಮಾಡಿದರು. ಜತೆಗೆ ಅವರು ತುಂಬಾನೇ ನೊಂದುಕೊಂಡರು.

ಇದನ್ನೂ ಓದಿ: ‘ಲೂಸಾ ನೀನು?’; ಸೋನು ಶ್ರೀನಿವಾಸ್​ ಗೌಡ ಅವತಾರಕ್ಕೆ ಉರಿದು ಬಿದ್ದ ಸಾನ್ಯಾ ಅಯ್ಯರ್

ಇದನ್ನೂ ಓದಿ

ಸೋಮಣ್ಣ ಅವರ ನಡೆಗೆ ಸೋಶಿಯಲ್ ​ಮೀಡಿಯಾದಲ್ಲಿ ಅನೇಕರು ಅಸಮಾಧಾನ ಹೊರಹಾಕಿದ್ದಾರೆ. ರೂಪೇಶ್ ಅವರನ್ನು ಕೆಟ್ಟದಾಗಿ ಬಿಂಬಿಸಬೇಕು ಎಂಬ ಕಾರಣಕ್ಕೆ ಈ ರೀತಿ ಮಾಡಲಾಗುತ್ತಿದೆ ಎಂದು ಕೆಲವರು ಆರೋಪಿಸಿದ್ದಾರೆ. ಸೋಮಣ್ಣ ಅವರು ತಿಳಿದವರಾಗಿ ಈ ರೀತಿ ಮಾಡಬಾರದಿತ್ತು ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಈ ಘಟನೆಯಿಂದ ರೂಪೇಶ್ ಅವರ ಅಭಿಮಾನಿ ಬಳಗ ದೊಡ್ಡದಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada