AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಉದಯ್ ಸೂರ್ಯ ಹಿಂಬದಿಯಿಂದ ಅಪ್ಪಿ ಕಿಸ್ ಮಾಡ್ತಾರೆ’; ಮಹಿಳಾ ಸ್ಪರ್ಧಿಗಳಿಂದ ಬಂತು ಹೊಸ ಆರೋಪ

ಅಕ್ಷತಾ ಅವರು ಒಂದು ಫಿಸಿಕಲ್ ಟಾಸ್ಕ್ ಮುಗಿಸಿ ಆಗತಾನೇ ಬಂದಿದ್ದರು. ಈ ವೇಳೆ ಅವರನ್ನು ಉದಯ್ ಸೂರ್ಯ ಹಿಂಬದಿಯಿಂದ ಹಗ್ ಮಾಡಿದರು. ಅಲ್ಲದೆ, ಕಿವಿಯ ಬಳಿ ಕಿಸ್ ಮಾಡಿದರು.

‘ಉದಯ್ ಸೂರ್ಯ ಹಿಂಬದಿಯಿಂದ ಅಪ್ಪಿ ಕಿಸ್ ಮಾಡ್ತಾರೆ’; ಮಹಿಳಾ ಸ್ಪರ್ಧಿಗಳಿಂದ ಬಂತು ಹೊಸ ಆರೋಪ
ಉದಯ್-ಅಕ್ಷತಾ
TV9 Web
| Edited By: |

Updated on: Aug 18, 2022 | 10:30 PM

Share

‘ಬಿಗ್ ಬಾಸ್ ಒಟಿಟಿ’ (Bigg Boss OTT) ಈಗಾಗಲೇ ಎರಡು ವಾರಗಳನ್ನು ಪೂರ್ಣಗೊಳಿಸಿದೆ. ಇನ್ನು ಕೆಲವೇ ವಾರಗಳಲ್ಲಿ ಒಟಿಟಿ ಆಟ ಪೂರ್ಣಗೊಳ್ಳಲಿದ್ದು, ಟಿವಿಯಲ್ಲಿ ಪ್ರಸಾರವಾಗುವ ‘ಬಿಗ್ ಬಾಸ್​’ ಶುರು ಆಗಲಿದೆ. ಒಟಿಟಿಯಲ್ಲಿ ಎಲ್ಲರೂ ತಮ್ಮ ಬೆಸ್ಟ್​​ ಕೊಡೋಕೆ ಪ್ರಯತ್ನಿಸುತ್ತಿದ್ದಾರೆ. ಈ ಮಧ್ಯೆ ಉದಯ್ ಸೂರ್ಯ (Uday Surya) ಅವರ ವಿರುದ್ಧ ಗಂಭೀರ ಆರೋಪ ಒಂದು ಕೇಳಿ ಬಂದಿದೆ. ಮಹಿಳಾ ಸ್ಪರ್ಧಿಗಳ ಮಧ್ಯೆ ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿದೆ. ಉದಯ್​ಗೆ ಈ ಬಗ್ಗೆ ಬುದ್ಧಿವಾದ ಹೇಳಬೇಕು ಎಂಬ ಬಗ್ಗೆಯೂ ಚರ್ಚೆ ಆಗುತ್ತಿದೆ.

ಅಕ್ಷತಾ ಅವರು ಒಂದು ಫಿಸಿಕಲ್ ಟಾಸ್ಕ್ ಮುಗಿಸಿ ಆಗತಾನೇ ಬಂದಿದ್ದರು. ಈ ವೇಳೆ ಅವರನ್ನು ಉದಯ್ ಸೂರ್ಯ ಹಿಂಬದಿಯಿಂದ ಹಗ್ ಮಾಡಿದರು. ಅಲ್ಲದೆ, ಕಿವಿಯ ಬಳಿ ಕಿಸ್ ಮಾಡಿದರು. ಈ ಘಟನೆ ಬಗ್ಗೆ ಅಕ್ಷತಾ ಕೊಂಚ ಸಮಯ ಬಿಟ್ಟು ಉದಯ್ ಬಳಿ ಮಾತನಾಡಿದ್ದಾರೆ. ‘ನೀವು ಆ ರೀತಿ ಹಗ್ ಮಾಡಬೇಡಿ. ನೋಡುವವರಿಗೆ ಅದು ಬೇರೆಯ ರೀತಿ ಕಾಣುತ್ತದೆ. ಇನ್ಮುಂದೆ ಆ ರೀತಿ ಮಾಡಬೇಡಿ’ ಎಂದು ತಾಕೀತು ಮಾಡಿದರು. ಇದಕ್ಕೆ ಉದಯ್ ಸೂರ್ಯ ಅಪ್ಸೆಟ್ ಆದರು.

ಸಾನ್ಯಾ ಹಾಗೂ ನಂದು ಮಧ್ಯೆಯೂ ಇದೇ ವಿಚಾರ ಚರ್ಚೆಗೆ ಬಂತು. ‘ಉದಯ್ ಹಿಂದಿನಿಂದ ಬಂದು ಹಗ್ ಮಾಡಿ, ಕಿವಿಗೆ ಕಿಸ್ ಮಾಡುತ್ತಾರೆ. ಹಾಗೆ ಮಾಡಿದಾಗ ಎಷ್ಟು ಅನ್​ಕಂಪರ್ಟೆಬಲ್ ಫೀಲ್ ಆಗುತ್ತದೆ. ನನಗೆ ಮೊನ್ನೆ ಕೋಪವೇ ಬಂತು. ಎಲ್ಲರೂ ಇದ್ದಾರೆ ಎಂದು ನಾನು ರಿಯಾಕ್ಟ್ ಮಾಡಲಿಲ್ಲ’ ಎಂದರು ಸಾನ್ಯಾ. ಇದಕ್ಕೆ ನಂದು ಕೂಡ ಧ್ವನಿಗೂಡಿಸಿದರು. ‘ಅವನು ನನಗೂ ಮೊನ್ನೆ ಅದೇ ರೀತಿ ಮಾಡಿದ್ದ. ಜಶ್ವಂತ್ ಎದುರೇ ಆ ರೀತಿ ಮಾಡಿದ’ ಎಂದರು ನಂದು ಕೂಡ ದೂರಿದರು.

ಇದನ್ನೂ ಓದಿ
Image
‘ನಾನು ಸಖತ್ ಆಗಿ ಕಬಡ್ಡಿ ಆಡ್ತೀನಿ’ ಎಂದು ಬಿಗ್ ಬಾಸ್ ಮನೆಯಲ್ಲಿ ಗಾಯ ಮಾಡಿಕೊಂಡ ಸೋನು ಶ್ರೀನಿವಾಸ್ ಗೌಡ
Image
ಗರ್ಲ್​​ಫ್ರೆಂಡ್ ವಿಚಾರಕ್ಕೆ ಬಂದ ಸೋನು ಗೌಡ ವಿರುದ್ಧ ಸೇಡು ತೀರಿಸಿಕೊಂಡ ಜಶ್ವಂತ್
Image
‘ಪ್ಲೀಸ್ ದಯವಿಟ್ಟು ಬಿಟ್ಟುಬಿಡಿ’; ಮನೆಗೆ ಬಂದ ಅತಿಥಿ ಕಂಡು ಕಿರುಚಾಡಿದ ಸಾನ್ಯಾ ಅಯ್ಯರ್
Image
‘ಕಾಫಿ ನಾಡು ಚಂದು ಬಿಗ್ ಬಾಸ್‌ಗೆ ಹೋಗಬೇಕು’ ಅಭಿಯಾನ ಶುರು; ಸ್ವತಃ ಬೆಂಬಲ ನೀಡಿದ ವೈರಲ್ ಸಿಂಗರ್!

ಇದನ್ನೂ ಓದಿ: ಸಾನ್ಯಾ-ರೂಪೇಶ್​ ಬಗ್ಗೆ ಗಾಸಿಪ್ ಹಬ್ಬಿಸಿದ ಸೋಮಣ್ಣಗೆ ನೆಟ್ಟಿಗರಿಂದ ಛೀಮಾರಿ

ಉದಯ್ ಸೂರ್ಯ ಅವರ ನಡೆಗೆ ಮನೆಯ ಮಹಿಳಾ ಸ್ಪರ್ಧಿಗಳಿಂದ ವಿರೋಧ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ಶನಿವಾರ (ಮಾರ್ಚ್​ 20) ಸುದೀಪ್ ಅವರು ಬರಲಿದ್ದಾರೆ. ಈ ವೇಳೆ ಅವರು ಈ ಬಗ್ಗೆ ಚರ್ಚೆ ಮಾಡಿದರೂ ಅಚ್ಚರಿ ಏನಿಲ್ಲ.

ಫಾಸ್ಟ್ ಫುಡ್ ಅಂಗಡಿಗೆ ನುಗ್ಗಿದ ಟ್ರ್ಯಾಕ್ಟರ್, ಓಡಿ ಪ್ರಾಣ ಉಳಿಸಿಕೊಂಡ ಜನ
ಫಾಸ್ಟ್ ಫುಡ್ ಅಂಗಡಿಗೆ ನುಗ್ಗಿದ ಟ್ರ್ಯಾಕ್ಟರ್, ಓಡಿ ಪ್ರಾಣ ಉಳಿಸಿಕೊಂಡ ಜನ
ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ
ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ
ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್!
ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್!
56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!
56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!
Daily Devotional: ಕುಂಕುಮಾರ್ಚನೆ ಹೆಣ್ಣು ಅಥವಾ ಗಂಡು ಯಾರು ಮಾಡಬೇಕು?
Daily Devotional: ಕುಂಕುಮಾರ್ಚನೆ ಹೆಣ್ಣು ಅಥವಾ ಗಂಡು ಯಾರು ಮಾಡಬೇಕು?