ಒಟಿಟಿ ವ್ಯಾಪ್ತಿ ಹೆಚ್ಚಿದಂತೆ ವೆಬ್ ಸೀರಿಸ್ಗಳನ್ನು ನಿರ್ಮಾಣ ಮಾಡುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಸಾಕಷ್ಟು ವೆಬ್ ಸೀರಿಸ್ಗಳು ಈಗಾಗಲೇ ಸಿದ್ಧಗೊಂಡು ರಿಲೀಸ್ ಆಗಿವೆ. ಈ ವೇಳೆ ಕೆಲವು ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಿವೆ. ಇದಕ್ಕೆ ಈಗ ಹೊಸ ಸೇರ್ಪಡೆ ‘ದಿ ಎಂಪೈರ್’. ಬಾಬರ್ ಜೀವನ ಕಥೆ ಆಧರಿಸಿ ಸಿದ್ಧಗೊಂಡಿರುವ ಈ ವೆಬ್ ಸೀರಿಸ್ ಎಲ್ಲ ಕಡೆಗಳಿಂದ ವಿರೋಧ ಎದುರಿಸುತ್ತಿದೆ.
ನಿಖಿಲ್ ಅಡ್ವಾಣಿ ನಿರ್ಮಾಣದ ‘ದಿ ಎಂಪೈರ್’ ಶುಕ್ರವಾರ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ರಿಲೀಸ್ ಆಗಿದೆ. ಈ ಸೀರಿಸ್ನಲ್ಲಿ ದೊಡ್ಡ ಪಾತ್ರವರ್ಗವೇ ಇದೆ. ಅಲೆಕ್ಸ್ ರುದರ್ಫೋರ್ಡ್ ಬರೆದ ‘ಎಂಪೈರ್ ಆಫ್ ದಿ ಮೊಘಲ್; ರೈಡರ್ಸ್ ಫ್ರಮ್ ದಿ ನಾರ್ಥ್’ ಪುಸ್ತಕ ಆಧರಿಸಿ ಈ ವೆಬ್ ಸೀರಿಸ್ ಸಿದ್ಧಗೊಂಡಿದೆ.
Those invaders who destroyed and looted India, killed Hindus, converted them in the name of their intolerant Jihad are being glorified in 2021?
Is this what we are doing?
Shame on you producers, writers, actors, etc.#UninstallHotstar pic.twitter.com/nRLqQkRXbK
— Achintya pandey (अचिन्त्य पांडेय)?? (@achintyaapandey) August 27, 2021
ಭಾರತದ ಇತಿಹಾಸದ ಪ್ರಕಾರ ಬಾಬರ್ ಓರ್ವ ಆಕ್ರಮಣಕಾರ. ಆದರೆ, ಈ ವೆಬ್ ಸೀರಿಸ್ನಲ್ಲಿ ಆಕ್ರಮಣಕಾರನನ್ನು ವೈಭವೀಕರಿಸಲಾಗಿದೆ ಎಂಬುದು ಪ್ರೇಕ್ಷಕರ ಆರೋಪ. ಈ ಕಾರಣಕ್ಕೆ ವೆಬ್ ಸೀರಿಸ್ ಪ್ರಸಾರವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ. ಆದರೆ, ಇದಕ್ಕೆ ಹಾಟ್ಸ್ಟಾರ್ ಜಗ್ಗಿಲ್ಲ. ‘ದಿ ಎಂಪೈರ್ನಲ್ಲಿ ಯಾವುದೇ ವಿವಾದಾತ್ಮಕ ಅಂಶವಿಲ್ಲ. ಇಲ್ಲಿ ಬಾಬರ್ನನ್ನು ವೈಭವೀಕರಿಸಿಲ್ಲ’ ಎಂದು ಸ್ಪಷ್ಟನೆ ನೀಡಿದೆ.
ಹಾಟ್ಸ್ಟಾರ್ ಕಡೆಯಿಂದ ಬಂದ ಉತ್ತರ ಅನೇಕರ ಕೋಪಕ್ಕೆ ಕಾರಣವಾಗಿದೆ. ಈ ಕಾರಣಕ್ಕೆ # UninstallHotstar ಹ್ಯಾಶ್ಟ್ಯಾಗ್ ಅಡಿಯಲ್ಲಿ ಜನರು ಟ್ವೀಟ್ ಮಾಡುತ್ತಿದ್ದಾರೆ. ಅಲ್ಲದೆ, ಹಾಟ್ಸ್ಟಾರ್ ಅನ್ ಇನ್ಸ್ಟಾಲ್ ಮಾಡುವಂತೆ ಆಗ್ರಹಿಸಲಾಗುತ್ತಿದೆ. ಇದು ಹಾಟ್ಸ್ಟಾರ್ ಸಂಸ್ಥೆಗೆ ತಲೆನೋವಾಗಿ ಪರಿಣಮಿಸಿದೆ. ಈ ಬೆಳವಣಿಗೆಯಿಂದ ಒಂದಷ್ಟು ಬಳಕೆದಾರರನ್ನು ಕಳೆದುಕೊಳ್ಳುವ ಭೀತಿ ಸಂಸ್ಥೆಗೆ ಎದುರಾಗಿದೆ.
ಮಾಹಿತಿ ತಂತ್ರಜ್ಞಾನ ನಿಯಮ 2021ರ ಅಡಿಯಲ್ಲಿ ನೇಮಕಗೊಂಡ ಕುಂದುಕೊರತೆ ಅಧಿಕಾರಿಗೆ ಈ ಸರಣಿ ಬಗ್ಗೆ ದೂರು ಬಂದಿತ್ತು. ಈ ದೂರಿನಲ್ಲಿ ಬಾಬರ್ಅನ್ನು ವೈಭವೀಕರಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಅಧಿಕಾರಿಗಳು ಕೂಡ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.
ಅಯೋಧ್ಯೆಯಲ್ಲಿದ್ದ ರಾಮ ಮಂದಿರವನ್ನು ಕೆಡವಿ ಅಲ್ಲಿ ಮಸೀದಿ ಕಟ್ಟಿದ್ದು ಬಾಬರ್ ಎನ್ನುವುದನ್ನು ಇತಿಹಾಸದಲ್ಲಿ ಬರೆಯಲಾಗಿದೆ. ಇದಲ್ಲದೆ, ಭಾರತವನ್ನು ಅತಿಕ್ರಮಣ ಮಾಡಿ ಆತ ಭಾರತಕ್ಕೆ ಸಾಕಷ್ಟು ನಷ್ಟ ಉಂಟು ಮಾಡಿದ್ದಾನೆ ಎಂಬುದು ಇತಿಹಾಸದಲ್ಲಿ ಉಲ್ಲೇಖವಾಗಿದೆ.
ಇದನ್ನೂ ಓದಿ: ‘ಮೊಘಲರೇ ನಿಜವಾಗಿ ಈ ದೇಶ ಕಟ್ಟಿದ್ದು; ಅವರ ಬಗ್ಗೆ ಕೆಟ್ಟ ಮಾತು ಸರಿಯಲ್ಲ’: ನಿರ್ದೇಶಕ ಕಬೀರ್ ಖಾನ್
ಈ ರಿಚಾರ್ಜ್ ಮಾಡಿದ್ರೆ ನಿಮಗೆ ಅಮೆಜಾನ್, ನೆಟ್ಫ್ಲಿಕ್ಸ್, ಹಾಟ್ಸ್ಟಾರ್ ಉಚಿತವಾಗಿ ಸಿಗಲಿದೆ