ನಟಿ ಊರ್ವಶಿ ರೌಟೇಲಾ (Urvashi Rautela) ಅವರು ಇತ್ತೀಚೆಗೆ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಹಾಗಂತ ಇದು ಸಿನಿಮಾ ವಿಚಾರಕ್ಕೆ ಅಲ್ಲ. ಇದಕ್ಕೆ ಕಾರಣ ಕ್ರಿಕೆಟರ್ ರಿಷಭ್ ಪಂತ್ (Rishabh Pant). ‘ಅವರು ನನ್ನ ಭೇಟಿ ಮಾಡಲು ಹಲವು ಗಂಟೆ ಕಾದಿದ್ದರು’ ಎಂದು ಊರ್ವಶಿ ಹೇಳಿದ್ದರು. ಇದರಿಂದ ರಿಷಭ್ ಸಿಟ್ಟಾಗಿದ್ದರು. ‘ಇದು ಜನಪ್ರಿಯತೆ ಪಡೆದುಕೊಳ್ಳಲು ಮಾಡಿದ ಗಿಮಿಕ್’ ಎಂದು ರಿಷಭ್ ಆರೋಪಿಸಿದ್ದರು. ಇದರಿಂದ ಊರ್ವಶಿಗೆ ಸಖತ್ ಜನಪ್ರಿಯತೆ ಸಿಕ್ಕಿದೆ. ಇದರ ಲಾಭವನ್ನು ಅವರು ಪಡೆದುಕೊಳ್ಳುತ್ತಿದ್ದಾರೆ. ಈಗ ನೆಟ್ಫ್ಲಿಕ್ಸ್ನ ಎರಡು ಸೆಕೆಂಡ್ನ ವಿಡಿಯೋಗೆ 15 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರೆ ಎಂದು ವರದಿ ಆಗಿದೆ. ಇದನ್ನು ಕೇಳಿ ಫ್ಯಾನ್ಸ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
2022 ಪೂರ್ಣಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ವಿಡಿಯೋ ಒಂದನ್ನು ಮಾಡಿದೆ ನೆಟ್ಫ್ಲಿಕ್ಸ್. ತನ್ನ ಪ್ಲಾಟ್ಫಾರ್ಮ್ನಲ್ಲಿರುವ ಸಿನಿಮಾಗಳ ಪಾತ್ರಗಳನ್ನೇ ಇಟ್ಟುಕೊಂಡು ವಿಡಿಯೋ ಮಾಡಲಾಗಿದೆ. ಈ ವಿಡಿಯೋದಲ್ಲಿ ಉರ್ಫಿ ಜಾವೇದ್ ಮೊದಲಾದವರು ಇದ್ದಾರೆ. ಊರ್ವಶಿ ಅವರು ಕೂಡ ಈ ವಿಡಿಯೋದಲ್ಲಿದ್ದಾರೆ. ಹಾಲಿವುಡ್ ನಟ ರೈನ್ ಗಾಸ್ಲಿಂಗ್ ಹಾಗೂ ಊರ್ವಶಿ ಎದುರುಬದುರು ಕೂತಿರುತ್ತಾರೆ. ಊರ್ವಶಿ ಕೈ ಮೇಲೆ ‘RP’ ಎಂದು ಬರೆದುಕೊಂಡಿದ್ದಾರೆ. P ಮೇಲೆ ಗೀಟು ಹಾಕಿ ‘ಜಿ’ ಎಂದು ಬರೆದುಕೊಂಡಿದ್ದಾರೆ. ಆರ್ ಜಿ ಎಂದರೆ ರೈನ್ ಗಾಸ್ಲಿಂಗ್ ಎಂದರ್ಥ. ಕೆಲವೇ ಸೆಕೆಂಡ್ನಲ್ಲಿ ಮುಗಿಯುವ ಈ ದೃಶ್ಯಕ್ಕೆ ಅವರು ಇಷ್ಟು ದೊಡ್ಡ ಮೊತ್ತದ ಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.
ಊರ್ವಶಿ ರೌಟೇಲಾ ಅವರ ಖ್ಯಾತಿ ಹೆಚ್ಚಿದೆ. ಈ ಕಾರಣಕ್ಕೆ ಅವರಿಗೆ ಸಿಕ್ಕಾಪಟ್ಟೆ ಆಫರ್ಗಳು ಬರುತ್ತಿವೆ. 2018ರಿಂದ ಈಚೆಗೆ ಅವರು ಹೆಚ್ಚು ಆಫರ್ ಒಪ್ಪಿಕೊಂಡಿರಲಿಲ್ಲ. ಆದರೆ, ಈಗ ಅವರ ಕೈಯಲ್ಲಿ ನಾಲ್ಕು ಸಿನಿಮಾಗಳಿವೆ. ಮ್ಯೂಸಿಕ್ ವಿಡಿಯೋಗಳು ಕೂಡ ಅವರ ಕೈಯಲ್ಲಿವೆ. ಜನಪ್ರಿಯತೆ ಹೆಚ್ಚಿರುವುದರಿಂದ ಅವರು ಸಿನಿಮಾ ಸಂಭಾವನೆಯನ್ನೂ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
We thought we’d seen it all in 2022. That was until we saw these deleted scenes ?#NetflixPlayback2022 pic.twitter.com/hewXMFr9ed
— Netflix India (@NetflixIndia) December 20, 2022
ಇದನ್ನೂ ಓದಿ: ‘ಆರ್ಪಿ ಎಂದರೆ ರಿಷಬ್ ಪಂತ್ ಅಲ್ಲ’; ಬಹುದಿನಗಳ ವದಂತಿ ಬಗ್ಗೆ ಮೌನ ಮುರಿದ ನಟಿ ಊರ್ವಶಿ ರೌಟೇಲಾ
ಊರ್ವಶಿ ಹಾಗೂ ರಿಷಭ್ 2018ರಲ್ಲಿ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಇಬ್ಬರೂ ಕೆಲವು ಕಡೆಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ನಂತರ ಇಬ್ಬರೂ ಬೇರೆ ಆದರು ಎನ್ನಲಾಗಿದೆ. ಆದರೆ, ಈ ವಿಚಾರವನ್ನು ರಿಷಭ್ ಪಂತ್ ಅಲ್ಲ ಗಳೆದಿದ್ದರು. ಜತೆಗೆ ಇಶಾ ನೇಗಿ ಜತೆ ರಿಲೇಶನ್ಶಿಪ್ನಲ್ಲಿರುವ ಬಗ್ಗೆ ಘೋಷಣೆ ಮಾಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ