AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಲಗಂ’ ಖ್ಯಾತಿಯ ಜಪನದ ಗಾಯಕ ಪದ್ಮಶ್ರೀ ಮೊಗಿಲಯ್ಯ ನಿಧನ

Mogilaiah: ‘ಬಲಗಂ’ ಸಿನಿಮಾದ ಮೂಲಕ ಭಾರಿ ಜನಪ್ರಿಯತೆ ಗಳಿಸಿದ ಖ್ಯಾತ ಜನಪದ ಗಾಯಕ, ಕಿನ್ನರ ಮೊಗಿಲಯ್ಯ ಅಂದೇ ಖ್ಯಾತರಾಗಿದ್ದ ಮೊಗಿಲಯ್ಯ ಅವರು ಇಂದು (ಡಿಸೆಂಬರ್ 19) ವರಾಂಗಲ್​ನ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ. ‘ಬಲಗಂ’, ‘ಭೀಮ್ಲಾ ನಾಯಕ್’ ಸಿನಿಮಾಗಳಲ್ಲಿ ಮೊಗಿಲಯ್ಯ ಹಾಡು ಹಾಡಿದ್ದರು.

‘ಬಲಗಂ’ ಖ್ಯಾತಿಯ ಜಪನದ ಗಾಯಕ ಪದ್ಮಶ್ರೀ ಮೊಗಿಲಯ್ಯ ನಿಧನ
Mogilaiah
ಮಂಜುನಾಥ ಸಿ.
|

Updated on: Dec 19, 2024 | 1:16 PM

Share

ತೆಲುಗಿನ ‘ಬಲಗಂ’ ಸೇರಿದಂತೆ ಪವನ್ ಕಲ್ಯಾಣ್ ನಟನೆಯ ‘ಭೀಮ್ಲಾ ನಾಯಕ್’ ಇನ್ನಿತರೆ ಸಿನಿಮಾಗಳಲ್ಲಿ ಹಾಡು ಹಾಡಿದ್ದ ಜನಪದ ಗಾಯಕ ಮೊಗಿಲಯ್ಯ ನಿಧನ ಹೊಂದಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ‘ಬಲಗಂ’ ಸಿನಿಮಾದಲ್ಲಿ ಮುಗಿಲಯ್ಯ ಹಾಡಿದ ಹಾಡು ಬಹಳ ಜನಪ್ರಿಯವಾಗಿತ್ತು. ಆ ಹಾಡು ಬಿಡುಗಡೆ ಆದ ಬಳಿಕ ಅವರ ಜನಪ್ರಿಯ ಆಂಧ್ರ ಮತ್ತು ತೆಲಂಗಾಣದಲ್ಲಿ ಬಹಳ ಹೆಚ್ಚಿತ್ತು.

ಮುಗಿಲಯ್ಯ ಕೆಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಮೊಗಿಲಯ್ಯಗೆ ತೆಲಂಗಾಣದಮಾಜಿ ಸಚಿವ ಕೆಟಿಆರ್ ಸೇರಿದಂತೆ ಪವನ್ ಕಲ್ಯಾಣ್, ನಿರ್ಮಾಪಕ ದಿಲ್ ರಾಜು, ಚಿರಂಜೀವಿ ಇನ್ನಿತರರು ಆರ್ಥಿಕ ಸಹಾಯ ಸಹ ಮಾಡಿದ್ದರು. ಕಳೆದ ಕೆಲ ತಿಂಗಳಿನಿಂದ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲಿದ ಮೊಗಿಲಯ್ಯ ಇಂದು (ಡಿಸೆಂಬರ್ 19) ವರಾಂಗಲ್​ನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಇದನ್ನೂ ಓದಿ:ಕಾನ್ಸರ್ಟ್​ನಲ್ಲಿ ಹಿಜಾಬ್ ಧರಿಸದ ಇರಾನ್ ಗಾಯಕಿಯ ಬಂಧನ

ಮೊಗಿಲಯ್ಯ ಅವರ ಗಾಯನಕ್ಕೆ ರಾಷ್ಟ್ರಪ್ರಶಸ್ತಿ ಬಂದಿದೆ ಜೊತೆಗೆ ಜನಪದ ಕಲೆಗೆ ಅವರ ಸೇವೆ ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ಸಹ ನೀಡಿದೆ. ‘ಬಲಗಂ’ ಸಿನಿಮಾದಲ್ಲಿ ಅವರು ಹಾಡಿದ್ದ ‘ತೋಡುಗಾ ಮನತೋಡುಂಡಿ’ ಹಾಡು ಭಾರಿ ವೈರಲ್ ಆಗಿತ್ತು. ಹಲವು ಒಡೆದ ಕುಟುಂಬಗಳನ್ನು ಈ ಹಾಡು ಜೋಡಿಸಿತ್ತು. ಮುಗಿಲಯ್ಯ ಅವರ ಪತ್ನಿ ಸಹ ಜನಪದ ಹಾಡುಗಾರ್ತಿ. ಇವರಿಬ್ಬರ ಬುರ್ರಕತಾ ಆಂಧ್ರ-ತೆಲಂಗಾಣದಲ್ಲಿ ಬಹಳ ಜನಪ್ರಿಯ.

ಮುಗಿಲಯ್ಯ ನಿಧನಕ್ಕೆ ಸಚಿವ ಕೆಟಿಆರ್ ಸೇರಿದಂತೆ ಹಲವು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ‘ನಿನ್ನ ಹಾಡಿಗೆ ಕರಗದ ಹೃದಯವಿಲ್ಲ, ತೇವಗೊಳ್ಳದ ಕಣ್ಣುಗಳಿಲ್ಲ’ ಎಂದು ಕವಿತೆಯನ್ನೇ ಕೆಟಿಆರ್ ಬರೆದಿದ್ದಾರೆ. ಇನ್ನೂ ಹಲವಾರು ಮಂದಿ ರಾಜಕೀಯ ನಾಯಕರು, ಸಿನಿಮಾ ಮಂದಿ ಮೊಗಿಲಯ್ಯ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ