Year Ender 2024: ಈ ವರ್ಷ 500 ಕೋಟಿ ಗಳಿಸಿದ ಸಿನಿಮಾಗಳು ಇವು
Year Ender 2024: ವರ್ಷ ಮುಗಿಯುತ್ತಾ ಬಂದಿದೆ. 2022 ಮತ್ತು 2023ಕ್ಕೆ ಹೋಲಿಸಿದರೆ ಬ್ಲಾಕ್ ಬಸ್ಟರ್ ಸಿನಿಮಾಗಳ ಸಂಖ್ಯೆ ಈ ವರ್ಷ ಕಡಿಮೆ. ಆದರೆ ನಿರಾಸೆಪಡುವಂತೇನೂ ಇಲ್ಲ. ಈ ವರ್ಷ ಬಿಡುಗಡೆ ಆದ ಕೆಲವು ಸಿನಿಮಾಗಳು 500 ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿವೆ. ಈ ವರ್ಷ 500 ಕೋಟಿ ಕ್ಲಬ್ ಸೇರಿದ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ.
2022-2023 ಭಾರತೀಯ ಚಿತ್ರರಂಗದ ಪಾಲಿಗೆ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ವರ್ಷಗಳು. 2022 ಹಾಗೂ 23ಕ್ಕೆ ಹೋಲಿಸಿದರೆ 2024ರಲ್ಲಿ ಬ್ಲಾಕ್ ಬಸ್ಟರ್ ಸಿನಿಮಾಗಳ ಸಂಖ್ಯೆ ಕಡಿಮೆ. ಹಾಗೆಂದು ಸಂಪೂರ್ಣ ನಿರಾಸೆಯೇನೂ ಆಗಿಲ್ಲ. ಕೆಲವು ಸಿನಿಮಾಗಳು 500 ಕೋಟಿಗೂ ಹೆಚ್ಚು ಮೊತ್ತವನ್ನು ಬಾಕ್ಸ್ ಆಫೀಸ್ನಲ್ಲಿ ಕಲೆ ಹಾಕಿವೆ. ಇನ್ನು ಕೆಲವು ಸಿನಿಮಾಗಳು 300-400 ಕೋಟಿಗೂ ಸಹ ಬಂದು ತಲುಪಿವೆ. 2024 ರಲ್ಲಿ 500 ಕೋಟಿ ಮತ್ತು ಅದಕ್ಕಿಂತಲೂ ಹೆಚ್ಚು ಹಣ ಗಳಿಸಿದ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ.
ಪುಷ್ಪ 2
ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಡಿಸೆಂಬರ್ 05 ರಂದು ಬಿಡುಗಡೆ ಆಯ್ತು. ಬಿಡುಗಡೆ ಆದ ಕೇವಲ ಐದು ದಿನಕ್ಕೆ ಈ ಸಿನಿಮಾ 1000 ಕೋಟಿ ಕಲೆಕ್ಷನ್ ಮಾಡಿಬಿಟ್ಟಿದೆ. ಬಿಡುಗಡೆ ಆದ 14 ದಿನಗಳ ಬಳಿಕ ‘ಪುಷ್ಪ 2’ ಸಿನಿಮಾ 1400 ಕೋಟಿ ಕಲೆಕ್ಷನ್ ದಾಟಿ ಹೋಗಿದೆ. ಈ ವರೆಗಿನ ಹಲವು ದಾಖಲೆಗಳನ್ನು ‘ಪುಷ್ಪ 2’ ಸಿನಿಮಾ ಮುರಿದು ಹಾಕಿದೆ.
‘ಕಲ್ಕಿ 2898 ಎಡಿ’ ಪ್ರಭಾಸ್ ನಟನೆಯ ಸಿನಿಮಾ ಬಿಡುಗಡೆ ಆದರೆ ಸಾಕು ಸಿನಿಮಾ ಹೇಗಾದರೂ ಇರಲಿ 500 ಕೋಟಿ ಗ್ಯಾರೆಂಟಿ ಎಂಬ ಮಾತಿದೆ. ಆದರೆ ‘ಕಲ್ಕಿ 2898 ಎಡಿ’ ಸಿನಿಮಾದ ಬಗ್ಗೆ ತುಸು ಹೆಚ್ಚೇ ನಿರೀಕ್ಷೆ ಇತ್ತು. ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿತ್ತು. ಹಾಗಾಗಿ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಿತು. ‘ಕಲ್ಕಿ 2898 ಎಡಿ’ ಸಿನಿಮಾ ವಿಶ್ವದಾದ್ಯಂತ 1200 ಕೋಟಿ ಕಲೆಕ್ಷನ್ ಮಾಡಿತು.
ಇದನ್ನೂ ಓದಿ:Year Ender 2024: ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಾರೆಯವರಿವರು
‘ಸ್ತ್ರೀ 2’ ಈ ವರ್ಷ ಬಾಕ್ಸ್ ಆಫೀಸ್ನಲ್ಲಿ ಅಚ್ಚರಿ ಮೂಡಿಸಿದ ಸಿನಿಮಾ ಎಂದರೆ ಅದು ‘ಸ್ತ್ರೀ 2’. ಈ ವರ್ಷ 500 ಕೋಟಿ ದಾಟಿದ ಏಕೈಕ ಹಿಂದಿ ಸಿನಿಮಾ ‘ಸ್ತ್ರೀ 2’. ಖಾನ್ಗಳಿಲ್ಲದ, ರಣ್ಬೀರ್, ರಣ್ವೀರ್ ಅಂಥಹಾ ಸ್ಟಾರ್ಗಳು ಇಲ್ಲದ ‘ಸ್ತ್ರೀ 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 850 ಕೋಟಿ ರೂಪಾಯಿ ಹಣ ಗಳಿಸಿತು. ರಾಜ್ ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ ಅವರ ಈ ಸಿನಿಮಾ ಸಾಮಾನ್ಯ ಪ್ರೇಕ್ಷಕನನ್ನು ಬಹುವಾಗಿ ಸೆಳೆಯಿತು.
‘ದೇವರ’ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಜೂ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ಸಹ ಬಾಕ್ಸ್ ಆಫೀಸ್ನಲ್ಲಿ 500 ಕೋಟಿ ಗಳಿಸಿತು. ಆದರೆ ಇದರ ಬಾಕ್ಸ್ ಆಫೀಸ್ ರನ್ ಸುಲಭವಾಗಿರಲಿಲ್ಲ. ಸಿನಿಮಾ ಬಿಡುಗಡೆ ಆದ ಬಳಿಕ ಸಾಕಷ್ಟು ವಿಮರ್ಶೆಗಳಿಗೆ ಗುರಿಯಾಯಿತು. ಹಾಗಿದ್ದರೂ ಸಹ ಜೂ ಎನ್ಟಿಆರ್ ಅಭಿಮಾನಿಗಳು, ಅವರ ಚಾರ್ಮ್ನಿಂದಾಗಿ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಗೆದ್ದಿತು. ಕಷ್ಟಪಟ್ಟುಕೊಂಡು 500 ಕೋಟಿ ಗಡಿ ದಾಟಿತು.
‘ಗೋಟ್’ ದಳಪತಿ ವಿಜಯ್ ಅವರ ಸಿನಿಮಾಗಳಿಗೆ 500 ಕೋಟಿ ಬಹಳ ಕಷ್ಟವಲ್ಲ. ಆದರೂ ಸಹ ಈ ವರ್ಷ ಬಿಡುಗಡೆ ಆದ ಅವರ ‘ಗೋಟ್’ ಸಿನಿಮಾ ಬಹಳ ಕಷ್ಟಪಟ್ಟು 500 ಕೋಟಿ ರೂಪಾಯಿಯ ಗಡಿಯ ಬಳಿಗೆ ಬಂತು. ‘ಗೋಟ್’ 500 ಕೋಟಿ ದಾಟಿಲ್ಲ ಎಂದು ಲೆಕ್ಕಗಳು ಹೇಳುತ್ತವೆಯಾದರೂ 470 ಕೋಟಿ ಕಡಿಮೆ ಏನಲ್ಲ ಎಂಬ ಕಾರಣಕ್ಕೆ ಇದೇ ಪಟ್ಟಿಗೆ ಸೇರಿಸಬಹುದಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ