Year Ender 2024: ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಾರೆಯವರಿವರು

Year Ender: 2024 ಮುಗಿಯುತ್ತಾ ಬಂದಿದೆ. ಇನ್ನೆರಡು ವಾರದಲ್ಲಿ ಹೊಸ ವರ್ಷ ಬರಲಿದೆ. ಈ ವರ್ಷ ಮನರಂಜನಾ ಕ್ಷೇತ್ರದಲ್ಲಿ ಸಾಕಷ್ಟು ಒಳಿತು-ಕೆಡಕುಗಳು ನಡೆದಿವೆ. ಹಲವು ಸೆಲೆಬ್ರಿಟಿಗಳು ಈ ವರ್ಷ ವಿವಾಹ ಜೀವನಕ್ಕೆ ಕಾಲಿರಿಸಿದ್ದಾರೆ. ಈ ವರ್ಷ ಮದುವೆಯಾದ ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ ನೋಡಿ.

ಮಂಜುನಾಥ ಸಿ.
|

Updated on: Dec 18, 2024 | 12:12 PM

ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ಅವರು ತಮಿಳಿನ ನಟ ಉಮಾಪತಿ ಅವರೊಟ್ಟಿಗೆ ಇದೇ ವರ್ಷ ಜೂನ್ ತಿಂಗಳಲ್ಲಿ ವಿವಾಹವಾದರು. ಇವರ ಮದುವೆ ಅರ್ಜುನ್ ಸರ್ಜಾ ಕಟ್ಟಿಸಿದ ದೇವಾಲಯದಲ್ಲಿ ಅದ್ಧೂರಿಯಾಗಿ ನಡೆಯಿತು. ಉಮಾಪತಿ ಅವರು ಹಾಸ್ಯ ನಟ ತಂಬಿ ರಾಮಯ್ಯ ಅವರ ಪುತ್ರ.

1 / 9
ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್, ತಮ್ಮ ಶಾಲಾ ದಿನಗಳ ಗೆಳೆಯ ಆಂಟೊನಿ ತಟ್ಟಿಲ್ ಅವರೊಟ್ಟಿಗೆ ಡಿಸೆಂಬರ್ 12 ರಂದು ಮದುವೆಯಾದರು. ದಶಕಗಳಿಂದಲೂ ಈ ಜೋಡಿ ಪ್ರೀತಿಯಲ್ಲಿತ್ತು. ಆಂಟೊನಿ ತಟ್ಟಿಲ್ ದುಬೈನಲ್ಲಿ ಉದ್ಯಮಿ ಆಗಿದ್ದಾರೆ.

2 / 9
‘ಟಗರು’ ಪುಟ್ಟಿ ಎಂದೇ ಕನ್ನಡ ಸಿನಿಮಾ ಪ್ರೇಮಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಮಾನ್ವಿತಾ, ಅರುಣ್ ಕುಮಾರ್ ಎಂಬುವರನ್ನು ಈ ವರ್ಷ ಮೇ 1 ರಂದು ಮದುವೆಯಾದರು. ಮಾನ್ವಿತಾ ಮದುವೆಯಲ್ಲಿ ಹಲವು ಸ್ಯಾಂಡಲ್​ವುಡ್ ತಾರೆಯರು ಭಾಗಿಯಾಗಿದ್ದರು.

3 / 9
ನಟ ನಾಗ ಚೈತನ್ಯ ಮತ್ತು ಶೋಭಿತಾ ಧುಲಿಪಾಲ ಡಿಸೆಂಬರ್ 4 ರಂದು ಹೈದರಾಬಾದ್​ನಲ್ಲಿ ಅದ್ಧೂರಿಯಾಗಿ ಮದುವೆಯಾದರು. ನಾಗ ಚೈತನ್ಯಗೆ ಇದು ಎರಡನೇ ಮದುವೆ. ಈ ಹಿಂದೆ ಅವರು ನಟಿ ಸಮಂತಾ ಜೊತೆ ಮದುವೆಯಾಗಿ ವಿಚ್ಛೇದನ ಪಡೆದಿದ್ದರು. ಶೋಭಿತಾಗೆ ಮೊದಲ ಮದುವೆ. ಇವರ ಮದುವೆಗೆ ತೆಲುಗು ಚಿತ್ರರಂಗದ ಹಲವು ಗಣ್ಯರು ಭಾಗಿಯಾಗಿದ್ದರು.

4 / 9
ಕನ್ನಡದ ಹಾಸ್ಯ ನಟ, ಹಾಸ್ಯ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುವ ಪಾವಗಡ ಮಂಜು ನವೆಂಬರ್ 14 ರಂದು ನಂದಿನಿ ಎಂಬುವರನ್ನು ವಿವಾಹವಾದರು. ಮಾಜಿ ಬಿಗ್​ಬಾಸ್ ಸ್ಪರ್ಧಿಯೂ ಆಗಿರುವ ಮಂಜು ಅವರ ವಿವಾಹಕ್ಕೆ ಕಿರುತೆರೆ ಹಾಗೂ ಚಿತ್ರರಂಗದ ಕೆಲವು ತಾರೆಯರು ಭಾಗಿಯಾಗಿದ್ದರು.

5 / 9
ದಕ್ಷಿಣದ ಚಿತ್ರರಂಗ ಹಾಗೂ ಬಾಲಿವುಡ್ ಎರಡರಲ್ಲೂ ಮಿಂಚಿರುವ ನಟಿ ರಕುಲ್ ಪ್ರೀತ್ ಸಿಂಗ್ ಇದೇ ವರ್ಷ ಫೆಬ್ರವರಿ 21 ರಂದು ಗೋವಾನಲ್ಲಿ ಖ್ಯಾತ ಹಿಂದಿ ಸಿನಿಮಾ ನಿರ್ಮಾಪಕ ಮತ್ತು ನಟ ಜಾಕಿ ಭಗ್ನಾನಿಯನ್ನು ವಿವಾಹವಾದರು.

6 / 9
ಬಾಲಿವುಡ್ ನಟಿ ಸೊನಾಕ್ಷಿ ಸಿನ್ಹ, ಇದೇ ವರ್ಷ ಜೂನ್ ತಿಂಗಳಲ್ಲಿ ಉದ್ಯಮಿ ಜಹೀರ್ ಇಕ್ಬಾಲ್ ಜೊತೆ ವಿವಾಹವಾದರು. ಶತೃಜ್ಞ ಸಿನ್ಹ ಮಗಳಾದ ಸೊನಾಕ್ಷಿ ಸಿನ್ಹ, ಮುಸ್ಲಿಂ ಯುವಕನ ಮದುವೆ ಆಗುತ್ತಿರುವುದಕ್ಕೆ ಟೀಕೆ ಎದುರಿಸಬೇಕಾಯ್ತು. ಆದರೆ ಅವರು ಸುಖ ದಾಂಪತ್ಯ ನಡೆಸುತ್ತಿದ್ದಾರೆ.

7 / 9
ಬಾಲಿವುಡ್ ನಟಿ, ನಿರ್ಮಾಪಕಿ ಉದ್ಯಮಿ ತಾಪ್ಸಿ ಪನ್ನು ಅವರು ಇದೇ ವರ್ಷ ಮಾರ್ಚ್ ತಿಂಗಳಲ್ಲಿ ವಿದೇಶಿ ಬ್ಯಾಂಡ್​ಮಿಂಟನ್ ಆಟಗಾರ ಮತಿಯಾಸ್ ಅವರನ್ನು ವಿವಾಹವಾದರು. ಕಳೆದ ಕೆಲ ವರ್ಷಗಳಿಂದಲೂ ಇವರು ಪರಸ್ಪರ ಪ್ರೀತಿಯಲ್ಲಿದ್ದರು.

8 / 9
ಕನ್ನಡದ ‘ಮಾಣಿಕ್ಯ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ವರಲಕ್ಷ್ಮಿ ಶರತ್ ಕುಮಾರ್ ಅವರು ಜುಲೈ 3 ರಂದು ನಿಕೊಲಾಯ್ ಸಚ್​ದೇವ್ ಅವರೊಟ್ಟಿಗೆ ವಿವಾಹವಾಗಿದ್ದಾರೆ. ವರಲಕ್ಷ್ಮಿ ಶರತ್​ ಅವರು ಖ್ಯಾತ ನಟ ಶರತ್ ಕುಮಾರ್ ಅವರ ಪುತ್ರಿ.

9 / 9
Follow us