AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೋಲ್ಡ್ ಎಂದ ಮಾತ್ರಕ್ಕೆ ಹೇಗೆ ಬೇಕೋ ಹಾಗೆ ಮುಟ್ಟಬಹುದು ಎಂದಲ್ಲ’: ಸಿಟ್ಟಾದ ಆ್ಯಂಕರ್

ಪಾಕಿಸ್ತಾನದ ಪ್ರಭಾವಶಾಲಿ ಮಥಿರಾ ಅವರು "ಬದೋ ಬದಿ" ಹಾಡಿನ ಖ್ಯಾತಿಯ ಚಾಹತ್ ಫತೇ ಅಲಿ ಖಾನ್ ಅವರ ಅನುಮತಿಯಿಲ್ಲದ ಸ್ಪರ್ಶವನ್ನು ಖಂಡಿಸಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಚಾಹತ್ ಅವರು ಮಥಿರಾ ಅವರನ್ನು ಹಗ್ ಮಾಡಿದ್ದಾರೆ. ಇದರಿಂದ ಅವರಿಗೆ ಅನಾನುಕೂಲವಾಗಿದೆ ಎಂದು ಮಥಿರಾ ಹೇಳಿದ್ದಾರೆ. ಬೋಲ್ಡ್ ವ್ಯಕ್ತಿತ್ವ ಹೊಂದಿರುವುದು ಎಂದರೆ ಯಾರಾದರೂ ತಮ್ಮ ದೇಹಕ್ಕೆ ಸ್ಪರ್ಶಿಸಲು ಅನುಮತಿ ನೀಡಬೇಕೆಂದು ಅರ್ಥವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬೋಲ್ಡ್ ಎಂದ ಮಾತ್ರಕ್ಕೆ ಹೇಗೆ ಬೇಕೋ ಹಾಗೆ ಮುಟ್ಟಬಹುದು ಎಂದಲ್ಲ’: ಸಿಟ್ಟಾದ ಆ್ಯಂಕರ್
Chahat Fate Ali Khan
 ಶ್ರೀಲಕ್ಷ್ಮೀ ಎಚ್
| Edited By: |

Updated on: Jan 28, 2025 | 7:19 PM

Share

ಅನೇಕ ನಟಿಯರು ಪಾತ್ರಕ್ಕಾಗಿ ಬೋಲ್ಡ್ ಪಾತ್ರ ಮಾಡುತ್ತಾರೆ. ಹಾಗಂದ ಮಾತ್ರಕ್ಕೆ ಅವರು ಎಲ್ಲದಕ್ಕೂ ಸಿದ್ಧ ಎಂಬುದು ಅದರ ಅರ್ಥವಲ್ಲ. ಇದನ್ನು ಅನೇಕ ನಟಿಯರು ಹೇಳಿಕೊಂಡಿದ್ದಾರೆ. ಪಾಕಿಸ್ತಾನದ ಇನ್ಫ್ಲ್ಯುನ್ಸರ್ ಹಾಗೂ ಟಿವಿ ಆ್ಯಂಕರ್ ಮಥಿರಾ ಅವರು ಈಗ ಈ ಬಗ್ಗೆ ಮಾತನಾಡಿದ್ದಾರೆ. ‘ಬದೋ ಬದಿ..’ ಹಾಡಿನ ಮೂಲಕ ಫೇಮಸ್ ಆದ ಚಾಹತ್ ಫತೇ ಅಲಿ ಖಾನ್ ಅವರನ್ನು ಮಥಿರಾ ಟೀಕೆ ಮಾಡಿದ್ದಾರೆ.

ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಚಾಹತ್ ಅವರು ಆಗಮಿಸಿ ಮಥಿರಾ ಅವರನ್ನು ಹಗ್ ಮಾಡಿ, ಅವರ ಕೈ ಹಿಡಿದುಕೊಳ್ಳುತ್ತಾರೆ. ಈ ವೇಳೆ ಮಥಿರಾಗೆ ಅನ್ಕಂಫರ್ಟೆಬಲ್ ಅನಿಸಿದೆ. ಈ ಮುಜುಗರವನ್ನು ಅದುಮಿಟ್ಟು ಅವರು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಆ ಬಳಿಕ ಇದಕ್ಕೆ ಸಂಬಂಧಿಸಿ ವಿಡಿಯೋ ಒಂದನ್ನು ಹರಿಬಿಟ್ಟಿದ್ದಾರೆ.

‘ಮಹಿಳೆ ಆಗಿ ನನಗೆ ಅದು ಇಷ್ಟ ಆಗಿಲ್ಲ. ನಾನು ಹೀಗೆ ಮಾಡಲ್ಲ. ನಾನು ಜನರನ್ನು ಹಗ್ ಮಾಡುವುದಿಲ್ಲ. ಅವರು ನನ್ನ ಒಪ್ಪಿಗೆ ಇಲ್ಲದೆ ಆ ವಿಡಿಯೋನ ಏಕೆ ಶೇರ್ ಮಾಡಿದರು? ಇದು ನನಗೆ ಅರ್ಥ ಆಗುತ್ತಿಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ:ಪರಶುರಾಮನ ಕುರಿತು ಬಾಲಿವುಡ್​ನಲ್ಲಿ ಸಿನಿಮಾ, ನಾಯಕ ಯಾರು?

‘ನನಗೆ ನಿರಾಸೆ ಆಗಿದೆ. ನಾನು ಬೋಲ್ಡ್ ವ್ಯಕ್ತಿತ್ವ ಹೊಂದಿರುವವಳು. ಅಂದಮಾತ್ರಕ್ಕೆ ನೀವು ಬಂದು ನನ್ನ ಹಗ್ ಮಾಡಿ ಅಥವಾ ಹಿಂಭಾಗದಲ್ಲಿ ಕೈ ಇಡುವ ಕೆಲಸವನ್ನು ಮಾಡಬಹುದು ಎಂದರ್ಥವಲ್ಲ. ಈ ರೀತಿ ಯಾರೂ ಮಾಡಬಾರದು. ನಾವು ಅದನ್ನು ಡಿಲೀಟ್ ಮಾಡುವಂತೆ ಕೋರಿಕೊಂಡಿದ್ದೇವೆ. ಆದರೆ, ಅವರ ಆ ವಿಡಿಯೋ ಡಿಲೀಟ್ ಮಾಡಿಲ್ಲ. ಅವರು ಕ್ಷಮೆಯನ್ನೂ ಕೇಳಿಲ್ಲ’ ಎಂದಿದ್ದಾರೆ ಅವರು.

‘ಜನರು ಯಾಕೆ ಅಷ್ಟೊಂದು ಕಠಿವಾಗಿ ನಡೆದುಕೊಳ್ಳುತ್ತಾರೆ ಎಂದು ಆಶ್ಚರ್ಯವಾಗುತ್ತದೆ. ಆದರೆ, ನೀವು ವಿನಮ್ರವಾಗಿದ್ದಾಗ ಜನರು ಗಡಿಯನ್ನು ದಾಟುತ್ತಾರೆ. ‘ನಾನು ಕಠಿಣವಾಗಿ ನಡೆದುಕೊಂಡಾಗ ಜನರು ನನ್ನೊಂದಿಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ ಎಂಬುದು ತಿಳಿದು ಬೇಸರವಾಗುತ್ತಿದೆ’ ಎಂದು ಮಥಿರಾ ಅವರು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

‘ಬದೋ ಬದಿ..’ ಹಾಡನ್ನು ಹಾಡುವ ಮೂಲಕ ಚಾಹತ್ ಅವರು ಫೇಮಸ್ ಆದರು. ಅವರು ಸಾಕಷ್ಟು ಟ್ರೋಲ್ ಕೂಡ ಆಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ