ಪವನ್ ಕಲ್ಯಾಣ್ ಹುಟ್ಟುಹಬ್ಬ: ನಟನ ಒಟ್ಟು ಆಸ್ತಿ ಎಷ್ಟು? ಇರುವ ಕಾರುಗಳೆಷ್ಟು?

Pawan Kalyan asset details: 2024 ರಲ್ಲಿ ನಡೆದ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಪಿಠಾಪುರಂ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಅಭೂತಪೂರ್ವ ಜಯ ಸಾಧಿಸಿದರು. ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯ. ಈ ವೇಳೆ ಸಲ್ಲಿಸಿದ್ದ ಅಫಿಡವಿಟ್​​ನಲ್ಲಿ ತಮ್ಮ ಆಸ್ತಿ ವಿವರನ್ನು ಪವನ್ ಕಲ್ಯಾಣ್ ನಮೂದಿಸಿದ್ದರು. ಅವರ ಒಟ್ಟು ಆಸ್ತಿ ಮೌಲ್ಯ ಎಷ್ಟು? ಇಲ್ಲಿದೆ ಮಾಹಿತಿ...

ಪವನ್ ಕಲ್ಯಾಣ್ ಹುಟ್ಟುಹಬ್ಬ: ನಟನ ಒಟ್ಟು ಆಸ್ತಿ ಎಷ್ಟು? ಇರುವ ಕಾರುಗಳೆಷ್ಟು?
Pawan Kalyan Asset

Updated on: Sep 02, 2026 | 2:08 PM

ಮುಖ್ಯಾಂಶಗಳು

  • ಪವನ್ ಕಲ್ಯಾಣ್ ಹುಟ್ಟುಹಬ್ಬ ಇಂದು
  • ಪವನ್ ಕಲ್ಯಾಣ್, ಸ್ಟಾರ್ ನಟ ಮತ್ತು ಪ್ರಭಾವಿ ರಾಜಕಾರಣಿ
  • ಪವನ್ ಕಲ್ಯಾಣ್ ಅವರ ಒಟ್ಟು ಆಸ್ತಿ ಎಷ್ಟು? ಮಾಹಿತಿ ಇಲ್ಲಿದೆ.

ಸ್ಟಾರ್ ನಟ ಮತ್ತು ಆಂಧ್ರ ಪ್ರದೇಶ ಸರ್ಕಾರದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಹುಟ್ಟುಹಬ್ಬ ಇಂದು (ಸೆಪ್ಟೆಂಬರ್ 02) ಸಿನಿಮಾ ಮತ್ತು ರಾಜಕೀಯ ಎರಡೂ ಕ್ಷೇತ್ರಗಳಲ್ಲಿ ಸಕ್ರಿಯವಾಗಿರುವ ಪವನ್ ಕಲ್ಯಾಣ್ ಅವರಿಗೆ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಹಲವಾರು ರಾಜಕೀಯ ಮತ್ತು ಸಿನಿಮಾ ಕ್ಷೇತ್ರದ ಗಣ್ಯರು ಶುಭಾಶಯಗಳನ್ನು ಕೋರಿದ್ದಾರೆ. ದಶಕಗಳಿಂದಲೂ ಸ್ಟಾರ್ ಆಗಿ ಮೆರೆಯುತ್ತಿರುವ ಪವನ್ ಕಲ್ಯಾಣ್, ತೆಲುಗು ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಒಬ್ಬರು. ಅಂದಹಾಗೆ ಅವರ ಒಟ್ಟು ಆಸ್ತಿ ಎಷ್ಟು? ಮಾಹಿತಿ ಇಲ್ಲಿದೆ..

2024 ರಲ್ಲಿ ನಡೆದ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಪಿಠಾಪುರಂ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಅಭೂತಪೂರ್ವ ಜಯ ಸಾಧಿಸಿದರು. ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯ. ಈ ವೇಳೆ ಸಲ್ಲಿಸಿದ್ದ ಅಫಿಡವಿಟ್​​ನಲ್ಲಿ ತಮ್ಮ ಆಸ್ತಿ ವಿವರನ್ನು ಪವನ್ ಕಲ್ಯಾಣ್ ನಮೂದಿಸಿದ್ದರು. ಅದರನ್ವಯ ಪವನ್ ಕಲ್ಯಾಣ್ ಸುಮಾರು 164 ಕೋಟಿ ಆಸ್ತಿಯ ಒಡೆಯ. ಪವನ್ ಕಲ್ಯಾಣ್ ಅವರ ಚರಾಸ್ತಿ ಮತ್ತು ಸ್ಥಿರಾಸ್ತಿ ಹಾಗೂ ಅವರ ಪತ್ನಿ, ಮಕ್ಕಳ ಹೆಸರುಗಳಲ್ಲಿರುವ ಆಸ್ತಿಗಳ ಒಟ್ಟು ಮೌಲ್ಯ 164 ಕೋಟಿ ರೂಪಾಯಿಗಳು. ಅಂದಹಾಗೆ 2019ರಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾಗ ಅವರೇ ಸಲ್ಲಿಸಿದ್ದ ಅಫಿಡವಿಟ್​​ನಲ್ಲಿ ಅವರ ಒಟ್ಟು ಆಸ್ತಿ 52.85 ಕೋಟಿ ಇತ್ತು. ಐದು ವರ್ಷಗಳಲ್ಲಿ ಅವರ ಆಸ್ತಿಯ ಮೌಲ್ಯ ಮೂರು ಪಟ್ಟು ಏರಿಕೆ ಆಗಿದೆ.

ಪವನ್ ಕಲ್ಯಾಣ್ ಹೆಸರಿನಲ್ಲಿ 11 ಐಶಾರಾಮಿ ಕಾರು ಮತ್ತು ಬೈಕಿಗಳಿವೆ. ಇವುಗಳ ಒಟ್ಟು ಮೊತ್ತ ಸುಮಾರು 14 ಕೋಟಿಗೂ ಹೆಚ್ಚು, 5.47 ಕೋಟಿ ರೂಪಾಯಿ ಮೌಲ್ಯದ ರೇಂಜ್ ರೋವರ್ ಸ್ಪೋರ್ಟ್, 2.53 ಕೋಟಿಯ ಟೊಯೊಟಾ ಲ್ಯಾಂಡ್ ಕ್ರೂಸರ್, 2.42 ಕೋಟಿಯ ಮರ್ಸಿಡೀಜ್ ಬೆಂಜ್ ಮೇಬ್ಯಾಕ್ ಎಸ್ ಕ್ಲಾಸ್, ಮರ್ಸಿಡಿಸ್ ಬೆಂಜ್ ಆರ್ ಕ್ಲಾಸ್, ಟೊಯೊಟಾ ವೆಲ್​​ಫೈರ್, ರ್ವಾಂಗ್ಲರ್ ಜೀಪ್ ಸೇರಿದಂತೆ ಇನ್ನೂ ಹಲವು ಕಾರುಗಳಿವೆ. ಇವುಗಳ ಜೊತೆಗೆ ಸುಆರು 35 ಲಕ್ಷ ಬೆಲೆಯ ಹಾರ್ಲೆ ಡೇವಿಡ್​​ಸನ್ ಬೈಕು ಸಹ ಒಂದಿದೆ. ಅವರ ಬಳಿ ‘ವರಾಹಿ’ ಹೆಸರಿನ ಕ್ಯಾರಾವ್ಯಾನ್ ಇದೆ ಆದರೆ ಅದನ್ನು ಅವರ ತಮ್ಮ ಹೆಸರಿನಲ್ಲಿ ನೊಂದಣಿ ಮಾಡಿಸಿಲ್ಲ. ಹಾಗಾಗಿ ಅವರ ಅಫಿಡವಿಟ್​​ನಲ್ಲಿ ಅದನ್ನು ಸೇರಿಸಿಲ್ಲ.

ಇದನ್ನೂ ಓದಿ:‘ಓಜಿ 2’ಗೆ ಪೂಜಾ ಹೆಗ್ಡೆ ನಾಯಕಿ, ಬದಲಾಗಲಿದೆಯೇ ಪವನ್ ಕಲ್ಯಾಣ್ ಅದೃಷ್ಟ?

118.36 ಕೋಟಿ ರೂ ಮೌಸ್ತದ ಸ್ಥಿರಾಸ್ತಿ ಎಂದರೆ ಮನೆ, ಜಮೀನು ಇನ್ನಿತರೆಗಳನ್ನು ಹೊಂದಿದ್ದಾರೆ. ಕಾರು, ಚಿನ್ನ ಇನ್ನಿತರೆಗಳಾದ ಚರಾಸ್ತಿಯ ಮೌಲ್ಯ 46.17 ಕೋಟಿ ಇದೆ. ಇನ್ನು ಪವನ್ ಕಲ್ಯಾಣ್ ಅವರಿಗೆ ಪಿತ್ರಾರ್ಜಿಯ ಆಸ್ತಿಯೂ ಇದ್ದು, ಅದರ ಮೌಲ್ಯ 3.91 ಕೋಟಿ ರೂ ಆಗಿದೆ. ಪತ್ನಿ ಅನ್ನಾ ಕೊನಿಡೆಲ ಅವರ ಹೆಸರಿನಲ್ಲಿ 2.95 ಕೋಟಿ ರೂಪಾಯಿ ಆಸ್ತಿ ಇದೆ.

ಪವನ್ ಕಲ್ಯಾಣ್ ಅವರ ಮೇಲೆ ಸಾಲದ ಹೊರೆಗಳು ಸಹ ಇವೆ. 2024ರ ವೇಳೆಗೆ ಅವರ ಮೇಲೆ 65.77 ಕೋಟಿ ರೂಪಾಯಿ ಸಾಲದ ಹೊರೆ ಇತ್ತು. ಇದರಲ್ಲಿ 17 ಕೋಟಿ ರೂಪಾಯಿ ಬ್ಯಾಂಕಿನಿಂದ ಪಡೆದ ಸಾಲ ಆಗಿದೆ. 46.70 ಕೋಟಿ ಹಣವನ್ನು ಚಿತ್ರರಂಗದ ಕೆಲವು ಪ್ರಮುಖರುಗಳಿಂದ ಸಾಲವಾಗಿ ಪಡೆದಿದ್ದಾರೆ. ವಿಶೇಷವೆಂದರೆ ತಮ್ಮ ಅತ್ತಿಗೆ ಅಂದರೆ ಅಣ್ಣ ಚಿರಂಜೀವಿ ಅವರ ಪತ್ನಿ ಸುರೇಖಾ ಅವರಿಂದ ಎರಡು ಕೋಟಿ ರೂಪಾಯಿ ಸಾಲವನ್ನು ಪವನ್ ಕಲ್ಯಾಣ್ ಪಡೆದುಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:08 pm, Wed, 2 September 26

Loading...
Unable to load recommendations.
Follow Us