AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹರಿ ಹರ ವೀರ ಮಲ್ಲು’ ನಿರ್ಮಾಪಕನಿಗೆ ಬಂಪರ್ ಆಫರ್ ಕೊಟ್ಟ ಪವನ್ ಕಲ್ಯಾಣ್

Pawan Kalyan movies: ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ನಾಳೆ (ಜುಲೈ 24) ಬಿಡುಗಡೆ ಆಗುತ್ತಿದೆ. ಸಿನಿಮಾದ ನಿರ್ಮಾಪಕ ಎಎಂ ರತ್ನಂ ಸತತ ಆರು ವರ್ಷ ತಾಳ್ಮೆಯಿಂದ ಕಾದು ಕೊನೆಗೂ ಹಠತೊಟ್ಟು ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ. ಆದರೆ ಸಿನಿಮಾ ಬಿಡುಗಡೆಗೆ ಮುಂಚೆಯೇ ರತ್ನಂಗೆ ಭರ್ಜರಿ ಉಡುಗೊರೆ ಕೊಟ್ಟಿದ್ದಾರೆ ಪವನ್ ಕಲ್ಯಾಣ್.

‘ಹರಿ ಹರ ವೀರ ಮಲ್ಲು’ ನಿರ್ಮಾಪಕನಿಗೆ ಬಂಪರ್ ಆಫರ್ ಕೊಟ್ಟ ಪವನ್ ಕಲ್ಯಾಣ್
Pawan Kalyan Am Rathnam
ಮಂಜುನಾಥ ಸಿ.
|

Updated on: Jul 23, 2025 | 6:31 PM

Share

ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ (Pawan Kalyan) ನಟನೆಯ ‘ಹರಿ ಹರ ವೀರ ಮಲ್ಲ’ ಸಿನಿಮಾ ನಾಳೆ (ಜುಲೈ 24) ಬಿಡುಗಡೆ ಆಗಲಿದೆ. ಪವನ್ ಕಲ್ಯಾಣ್ ಕಾರಣಕ್ಕೆ ಸಿನಿಮಾದ ಬಿಡುಗಡೆ ವರ್ಷಾನುಗಟ್ಟಲೆ ತಡವಾಗಿದೆ. ಆದರೆ ಕೊನೆಗೂ ನಿರ್ಮಾಪಕರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಸಿನಿಮಾದ ಪ್ರಚಾರಕ್ಕಾಗಿ ಬಂದಿದ್ದಾರೆ. ಸಿನಿಮಾ ಪರವಾಗಿ ಸುದ್ದಿಗೋಷ್ಠಿ ಮಾಡಿದ್ದಾರೆ, ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಸಿನಿಮಾದ ಪ್ರಚಾರ ಮಾಡಿರುವ ಜೊತೆಗೆ ಸಿನಿಮಾದ ನಿರ್ಮಾಪಕರಿಗೆ ಸಿನಿಮಾ ಬಿಡುಗಡೆಗೆ ಮುಂಚೆಯೇ ಭರ್ಜರಿ ಆಫರ್ ಕೊಟ್ಟಿದ್ದಾರೆ.

‘ಹರಿ ಹರ ವೀರ ಮಲ್ಲು’ ಸಿನಿಮಾವನ್ನು ನಿರ್ಮಾಣ ಮಾಡಿರುವುದು ಎಎಂ ರತ್ನಂ. ಪವನ್ ಕಲ್ಯಾಣ್ ಅವರ ಮೆಚ್ಚಿನ ನಿರ್ಮಾಪಕರಲ್ಲಿ ಇವರೂ ಒಬ್ಬರು. ಭಾನುವಾರ ನಡೆದಿರುವ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿರುವ ಪವನ್ ಕಲ್ಯಾಣ್, ತಾವು ಎಆರ್ ರತ್ನಂ ಅವರಿಗೆ ಆಂಧ್ರ ಪ್ರದೇಶ ಸಿನಿಮಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸ್ಥಾನವನ್ನು ನೀಡುತ್ತಿದ್ದೇನೆ ಎಂದು ಘೋಷಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಪವನ್ ಕಲ್ಯಾಣ್, ‘ಎಎಂ ರತ್ನಂ ಅವರು ಸಿನಿಮಾ ಅನ್ನೇ ಉಸಿರಾಡುವ ವಿರಳವಾದ ನಿರ್ಮಾಪಕರಲ್ಲಿ ಒಬ್ಬರು. ಅವರು ವೃತ್ತಿ ಆರಂಭಿಸಿದ್ದು ಮೇಕಪ್ ಮ್ಯಾನ್ ಆಗಿ. ಅದಾದ ಬಳಿಕ ಲೈಟ್​ ಬಾಯ್, ಹಲವಾರು ನಿರ್ದೇಶಕರ ಬಳಿ ಅಸಿಸ್ಟೆಂಟ್ ಆಗಿ, ಬರಹಗಾರನಾಗಿ, ಕತೆಗಾರನಾಗಿ ಕೊನೆಗೆ ನಿರ್ಮಾಪಕರಾದರು. ಅದ್ಭುತವಾದ ಸಿನಿಮಾಗಳನ್ನು ಅವರು ನೀಡಿದ್ದಾರೆ. ಎಲ್ಲದಕ್ಕಿಂತಲೂ ಅವರು ದೂರದೃಷ್ಟಿ ಇರುವ ನಿರ್ಮಾಪಕ. ಸಿನಿಮಾದ ಬಗ್ಗೆ ಒಲವುಳ್ಳವರು’ ಎಂದು ಹೇಳಿದ್ದಾರೆ. ಇದೇ ಕಾರಣಕ್ಕೆ ಅವರನ್ನು ಆಂಧ್ರ ಪ್ರದೇಶ ಸಿನಿಮಾ ಡೆವೆಲಪ್​ಮೆಂಟ್ ಬೋರ್ಡ್​ಗೆ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಲೆಂದು ಆಫರ್ ನೀಡಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ:ನಟನೆಯನ್ನು ಬಹುತೇಕ ತ್ಯಜಿಸಿದ ಪವನ್ ಕಲ್ಯಾಣ್; ದಿಟ್ಟ ನಿರ್ಧಾರ ಘೋಷಿಸಿದ ನಟ

‘ಸಿಎಂ ಚಂದ್ರಬಾಬು ನಾಯ್ಡು ಅವರೊಂದಿಗೆ ಈ ಬಗ್ಗೆ ಚರ್ಚೆ ಮಾಡಿದ್ಧೇನೆ. ಅವರಿಗೆ ನನ್ನ ಶಿಫಾರಸ್ಸಾಗಿ ಎಎಂ ರತ್ನಂ ಅವರ ಹೆಸರು ಹೇಳಿದ್ದೇನೆ. ಅವರು ನನ್ನ ನಿರ್ಮಾಪಕ ಎಂದಲ್ಲ, ಅವರು ಹಲವಾರು ಹೀರೋಗಳ ಜೊತೆಗೆ ಕೆಲಸ ಮಾಡಿದ್ದಾರೆ. ಅವರು ಒಳ್ಳೆಯ ವ್ಯಕ್ತಿ, ಸಿನಿಮಾಕ್ಕೆ ಅವರಿಂದ ಒಳ್ಳೆಯದಾಗುತ್ತದೆ ಎಂಬ ಕಾರಣಕ್ಕೆ ಅವರ ಹೆಸರು ಶಿಫಾರಸ್ಸು ಮಾಡಿದ್ದೇನೆ. ಅವರೇ ಅಧ್ಯಕ್ಷರಾಗಬಹುದು ನೋಡೋಣ’ ಎಂದಿದ್ದಾರೆ ಪವನ್ ಕಲ್ಯಾಣ್.

ಅಂದಹಾಗೆ ತೆಲುಗಿನ ಮತ್ತೊಬ್ಬ ನಿರ್ಮಾಪಕ ದಿಲ್ ರಾಜು ಅವರು ನೆರೆಯ ತೆಲಂಗಾಣದ ಸಿನಿಮಾ ಡೆವೆಲಪ್​ಮೆಂಟ್ ಬೋರ್ಡ್​ನ ಅಧ್ಯಕ್ಷರಾಗಿದ್ದಾರೆ. ಇತ್ತೀಚೆಗೆ ಪವನ್ ಕಲ್ಯಾಣ್ ಹಾಗೂ ದಿಲ್ ರಾಜು ನಡುವೆ ಮುನಿಸು ಮೂಡಿದ್ದು, ಈಗ ಪವನ್ ಕಲ್ಯಾಣ್, ಆಂಧ್ರಕ್ಕೆ ತಮ್ಮ ಆಪ್ತ ನಿರ್ಮಾಪಕನ್ನು ಸಮಿತಿಯ ಅಧ್ಯಕ್ಷನನ್ನಾಗಿ ರೆಕೆಮೆಂಡ್ ಮಾಡಿದ್ದಾರೆ.

ಎಎಂ ರತ್ನಂ ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಬಲು ಜನಪ್ರಿಯ ಸಿನಿಮಾ ನಿರ್ಮಾಪಕ. ಈ ಹಿಂದೆ ಪವನ್ ಕಲ್ಯಾಣ್​ಗೆ ‘ಖುಷಿ’ ಅಂಥಹಾ ಬ್ಲಾಕ್ ಬಸ್ಟರ್ ನೀಡಿರುವ ಎಎಂ ರತ್ನಂ, ತಮಿಳಿನಲ್ಲಿ ‘ಇಂಡಿಯನ್’, ‘ಬಾಯ್ಸ್’, ‘ನಾಯಕ್’, ‘ರನ್’, ‘ದೂಳ್’, ‘ಗಿಲ್ಲಿ’, ‘7/ಜಿ ರೇನ್​ಬೋ ಕಾಲನಿ’, ‘ಶಿವಕಾಶಿ’, ‘ವೇದಾಲಂ’ ಇನ್ನೂ ಹಲವಾರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ