AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pawan Kalyan: ಪವನ್ ಕಲ್ಯಾಣ್ ಧರಿಸಿರುವ ಶೂಗಳ ಬೆಲೆ ಎಷ್ಟು ಲಕ್ಷ ಗೊತ್ತೆ?

Pawan Kalyan: ನೋಡಲು ಸರಳವಾಗಿ ಕಾಣುವ ಪವನ್ ಕಲ್ಯಾಣ್ ಹಾಗೆ ಸರಳವಾಗಿ ಕಾಣಲು ಸಹ ಲಕ್ಷಾಂತರ ಖರ್ಚು ಮಾಡುತ್ತಾರೆ. ಅವರ ಧರಿಸಿರುವ ಶೂ ಬೆಲೆ ಎಷ್ಟು ಗೊತ್ತೆ?

Pawan Kalyan: ಪವನ್ ಕಲ್ಯಾಣ್ ಧರಿಸಿರುವ ಶೂಗಳ ಬೆಲೆ ಎಷ್ಟು ಲಕ್ಷ ಗೊತ್ತೆ?
ಪವನ್ ಕಲ್ಯಾಣ್
ಮಂಜುನಾಥ ಸಿ.
|

Updated on:Jul 27, 2023 | 3:49 PM

Share

ರಣ್ವೀರ್ ಸಿಂಗ್ (Ranveer Singh), ರಾಮ್ ಚರಣ್ (Ram Charan), ಮಹೇಶ್ ಬಾಬು ಇವರ ಬಟ್ಟೆಗಳು ನೋಡಿದರೆ ಗೊತ್ತಾಗುತ್ತದೆ ಇವುಗಳ ಬೆಲೆ ಲಕ್ಷಗಳಲ್ಲಿರಬಹುದೆಂದು. ಆದರೆ ತಮ್ಮ ಸಹನಟರಗೆ ಹೋಲಿಸಿದರೆ ನಟ, ರಾಜಕಾರಣಿ ಪವನ್ ಕಲ್ಯಾಣ್ ಫ್ಯಾಷನೆಬಲ್ ಎನಿಸುವ ಬಟ್ಟೆಗಳನ್ನು ಧರಿಸುವುದಿಲ್ಲ. ಸಾಮಾನ್ಯನೊಬ್ಬ ಧರಿಸುವಂಥಹಾ ಕುರ್ತಾ ಪೈಜಾಮ, ಶರ್ಟ್ ಪ್ಯಾಂಟ್​ಗಳನ್ನೇ ಧರಿಸುತ್ತಾರೆ. ಆದರೆ ಅವು ನೋಡಲಷ್ಟೆ ಸರಳವಾಗಿ ಕಾಣುತ್ತವೆಯಾದರೂ ಅವುಗಳ ಬೆಲೆ ಸಾಮಾನ್ಯರ ಕೈಗೆ ಎಟುಕದಷ್ಟು ಎತ್ತರ. ಪವನ್ ಕಲ್ಯಾಣ್ (Pawan Kalyan) ಕಾಷಾಯ ಧರಿಸಿದರೂ ಅದರ ಬೆಲೆ ಲಕ್ಷಗಳಲ್ಲಿಯೇ ಇರುತ್ತದೆ ಎಂದು ಅವರ ವಿರೋಧಿಗಳೊಬ್ಬರು ಟಿವಿ ಡಿಬೇಟ್​ ಒಂದರಲ್ಲಿ ಹೇಳಿದ್ದರು.

ಪವನ್ ಕಲ್ಯಾಣ್ ಧರಿಸುವ ಬಟ್ಟೆ, ತೊಡುವ ವಾಚುಗಳಷ್ಟೆ ಅಲ್ಲ ಅವರ ಚಪ್ಪಲಿ, ಶೂಗಳು ಸಹ ಲಕ್ಷಗಳ ಮೌಲ್ಯದ್ದು. ಪವನ್ ಕಲ್ಯಾಣ್ ಇದೀಗ ‘ಬ್ರೋ’ ಹೆಸರಿನ ಸಿನಿಮಾ ಒಂದರಲ್ಲಿ ನಟಿಸಿದ್ದಾರೆ. ಸಿನಿಮಾದ ಒಂದು ದೃಶ್ಯದಲ್ಲಿ ಪವನ್ ಕಲ್ಯಾಣ್ ಧರಿಸಿರುವ ಶೂಗಳು ನೆಟ್ಟಿಗರ ಗಮನ ಸೆಳೆದಿದೆ. ಅದು ಯಾವ ಶೂ ಅದರ ಬೆಲೆ ಎಷ್ಟಿರಬಹುದು ಎಂದು ಹುಡುಕಿದವರಿಗೆ ಆಶ್ಚರ್ಯವಾಗಿದೆ. ಅದರ ಬೆಲೆ ಸಾವಿರಗಳಲ್ಲಿಲ್ಲ ಬದಲಿಗೆ ಲಕ್ಷಗಳಲ್ಲಿದೆ.

ಪವನ್ ಕಲ್ಯಾಣ್ ಸ್ಟೈಲ್ ಆಗಿ ಬೈಕ್ ಒಂದರ ಮೇಲೆ ಕಾಲು ಇರಿಸಿ ನಿಂತಿರುವ ಪೋಸ್ಟರ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಆ ಪೋಸ್ಟರ್​ನಲ್ಲಿ ಪವನ್ ಕಲ್ಯಾಣ್ ಬಿಳಿ ಹಾಗೂ ಕಪ್ಪು ಬಣ್ಣ ಮಿಶ್ರಿತ ಶೂಗಳನ್ನು ಧರಿಸಿದ್ದರು. ಆ ಶೂಗಳ ಮೂಲ ಬೆಲೆ ಬೆಲೆ 1.06 ಲಕ್ಷ. ತೆರಿಗೆ, ಟ್ರಾನ್ಸ್​ಪೋರ್ಟ್ ಇತರೆಗಳೆಲ್ಲ ಸೇರಿದರೆ ಇನ್ನೂ 30-40 ಸಾವಿರ ಹೆಚ್ಚಾಗುತ್ತದೆ.

ಇದನ್ನೂ ಓದಿ:ಜೂನಿಯರ್ ಎನ್​ಟಿಆರ್ ಧರಿಸಿದ ಈ ವಾಚ್​ನ ಬೆಲೆ ಎಷ್ಟು ಕೋಟಿ ರೂಪಾಯಿ?

‘ಬ್ರೋ’ ಸಿನಿಮಾದಲ್ಲಿ ಪವನ್ ಕಲ್ಯಾಣ್ ಧರಿಸಿರುವುದು ಸಾಮಾನ್ಯ ಶೂ ಅಲ್ಲ. ಬಲ್​ಮೈನ್ ಹೆಸರಿನ ಪ್ಯಾರಿಸ್​ನ ಸಂಸ್ಥೆ ತಯಾರಿಸಿರುವ ಡಿಸೈನರ್ ಶೂ. 78 ವರ್ಷ ಸುದೀರ್ಘ ಇತಿಹಾಸ ಹೊಂದಿರುವ ಬಲ್​ಮೈನ್ ಸಂಸ್ಥೆ ಪುರುಷರಿಗಾಗಿ ಶೂ, ಬ್ಯಾಗು, ಬಟ್ಟೆಗಳನ್ನು ತಯಾರಿಸುತ್ತದೆ. ಈ ಸಂಸ್ಥೆಯ ಶೂಗಳ ಬೆಲೆ ಶುರುವಾಗುವುದು ಲಕ್ಷಗಳಿಂದ ಎನ್ನಬಹುದು.

‘ಬ್ರೋ’ ಸಿನಿಮಾದಲ್ಲಿ ಪವನ್ ಕಲ್ಯಾಣ್ ಧರಿಸಿರುವ ಶೂ ನೋಡಿ ಇಷ್ಟಪಟ್ಟ ತೆಲುಗಿನ ಇತ್ತೀಚೆಗಿನ ಹಿಟ್ ಸಿನಿಮಾ ‘ಬೇಬಿ’ಯ ನಿರ್ದೇಶಕ ಸಾಯಿ ರಾಜೇಶ್​ಗೆ ಆ ಸಿನಿಮಾದ ನಿರ್ಮಾಪಕ ಶ್ರೀನಿವಾಸ ಕುಮಾರ ನಾಯ್ಡು, ಬಲ್​ಮೈನ್ ನ ಅದೇ ಶೂಗಳನ್ನು ತರಿಸಿ ಕೊಟ್ಟಿದ್ದಾರೆ. ಆ ಚಿತ್ರಗಳನ್ನು ಸಾಯಿ ರಾಜೇಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪವನ್ ಕಲ್ಯಾಣ್ ಹೀಗೆ ದುಬಾರಿ ವಸ್ತುಗಳನ್ನು ಧರಿಸುತ್ತಿರುವುದು ಹೊಸದಲ್ಲ. ಬಲ್​ಮೈನ್ ಶೂಗಳಿಗಿಂತಲೂ ದುಬಾರಿಯಾದ ಹಲವು ಫ್ಯಾಷನ್ ಆಕ್ಸಸರಿಗಳು ಪವನ್ ಬಳಿ ಇವೆ. ‘ವಕೀಲ್ ಸಾಬ್’ ಸಿನಿಮಾದಲ್ಲಿ ಪವನ್ ಕಲ್ಯಾಣ್ ಧರಿಸಿದ್ದ ಕೈಗಡಿಯಾರದ ಬೆಲೆ ಬರೋಬ್ಬರಿ 40 ಲಕ್ಷ ರೂಪಾಯಿಗಳದ್ದಾಗಿತ್ತು. ‘ಭೀಮ್ಲಾ ನಾಯಕ್’ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಪವನ್ ಆದಿವಾಸಿ ಸಮುದಾಯದ ಹಳ್ಳಿಯೊಂದಕ್ಕೆ ಭೇಟಿ ನೀಡಿದ್ದರು. ಆಗ ಅವರು ಧರಿಸಿದ್ದ ಚಪ್ಪಲಿಯ ಬೆಲೆ ಸುಮಾರು 80 ಸಾವಿರ. ನೋಡಲು ಸರಳ ಎಂಬಂತೆ ಕಂಡರು, ಸರಳವಾಗಿ ಕಾಣಲು ಭಾರಿ ಹಣವನ್ನೇ ಪವನ್ ಕಲ್ಯಾಣ್ ಖರ್ಚು ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:48 pm, Thu, 27 July 23