Aura Movie: ದಿಲ್ಲಿ ಕ್ರಿಸ್ಥನಾಗಿ ಬಂದ ನಟ ಸತ್ಯರಾಜ್; ದೈವದ ಕಥೆ ಇರುವ ‘ಆರ’ ಸಿನಿಮಾ ಜುಲೈ 28ಕ್ಕೆ ರಿಲೀಸ್
‘ಆರ’ ಸಿನಿಮಾ ಜುಲೈ 28ರಂದು ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ನಟ ಸತ್ಯರಾಜ್ ಅವರ ಪಾತ್ರದ ಹೆಸರು ದಿಲ್ಲಿ ಕ್ರಿಸ್ಥ. ಇದು ಖಡಕ್ ವಿಲನ್ ಪಾತ್ರ. ಈ ಚಿತ್ರಕ್ಕಾಗಿ ಅವರು ತುಳು ಕಲಿತಿದ್ದಾರೆ.
ಹೊಸಬರ ಬಗ್ಗೆ ಪ್ರೇಕ್ಷಕರಿಗೆ ಯಾವಾಗಲೂ ಒಂದು ಭರವಸೆ ಇರುತ್ತದೆ. ಕನ್ನಡ ಚಿತ್ರರಂಗದಲ್ಲಿ (Sandalwood) ಪ್ರತಿಭಾವಂತ ಹೊಸ ಕಲಾವಿದರಿಗೆ ಅನೇಕ ಅವಕಾಶಗಳು ಕೂಡ ಸಿಗುತ್ತಿವೆ. ಈ ವಾರ (ಜುಲೈ 28) ‘ಆರ’ ಸಿನಿಮಾ (Aura Kannada Movie) ಬಿಡುಗಡೆ ಆಗಲಿದೆ. ಅನೇಕ ಹೊಸ ಕಲಾವಿದರು ಮತ್ತು ತಂತ್ರಜ್ಞರು ಸೇರಿ ಈ ಸಿನಿಮಾ ಮಾಡಿದ್ದಾರೆ. ಈ ಚಿತ್ರದ ಟ್ರೇಲರ್ ಗಮನ ಸೆಳೆದಿದೆ. ದೈವದ ಕುರಿತಾದ ಒಂದು ಡಿಫರೆಂಟ್ ಕಥೆ ಈ ಚಿತ್ರದಲ್ಲಿ ಇದೆ ಎಂಬುದು ಟ್ರೇಲರ್ ಮೂಲಕ ಗೊತ್ತಾಗಿದೆ. ಟ್ರೇಲರ್ ನೋಡಿದ ಸಿನಿಪ್ರಿಯರು ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ. ‘ಆರ’ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡಿರುವ ನಟ ಸತ್ಯರಾಜ್ (Sathyaraj) ಅವರು ಹೊಸ ಹೊಸ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ.
‘ಆರ’ ಸಿನಿಮಾಗೆ ಅಶ್ವಿನ್ ವಿಜಯಮೂರ್ತಿ ಅವರು ನಿರ್ದೇಶನ ಮಾಡಿದ್ದಾರೆ. ನಟ ಸತ್ಯರಾಜ್ ಅವರು ಇದರಲ್ಲಿ ವಿಭಿನ್ನವಾದ ಒಂದು ಪಾತ್ರ ಮಾಡಿದ್ದಾರೆ. ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ನಟಿಸಿದ ಅನುಭವ ಅವರಿಗೆ ಇದೆ. ಮೂಲತಃ ಬೆಂಗಳೂರಿನವರೇ ಆದ ಸತ್ಯರಾಜ್ ಅವರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಅವರು ಆಯ್ಕೆ ಮಾಡಿಕೊಂಡಿದ್ದು ಬಣ್ಣದ ಲೋಕವನ್ನು. ಸಿನಿಮಾ ಮೇಲೆ ಅವರಿಗೆ ಇದ್ದ ಅಪಾರ ಆಸಕ್ತಿಯೇ ಅದಕ್ಕೆ ಕಾರಣ. ಚಿಕ್ಕ ವಯಸ್ಸಿನಿಂದಲೂ ಸಿನಿಮಾ ಕ್ಷೇತ್ರದ ಮೇಲೆ ಆಸಕ್ತಿ ಹೊಂದಿದ್ದ ಸತ್ಯರಾಜ್ ಅವರು ಪ್ರಾರಂಭದ ದಿನಗಳಲ್ಲಿ ಸಿನಿಮಾಗಳ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರು.
‘ಡೇಂಜರ್ ಝೋನ್’ ಸಿನಿಮಾದಲ್ಲಿ ಸತ್ಯರಾಜ್ ಬಣ್ಣ ಹಚ್ಚಿದರು. ನಂತರ ‘ಕಟ್ಟುಕಥೆ’ ಸಿನಿಮಾದಲ್ಲಿ ವಿಭಿನ್ನವಾದ ಒಂದು ಪಾತ್ರ ಮಾಡಿದರು. ‘ಗರುಡಾಕ್ಷ’ ಸಿನಿಮಾದಲ್ಲಿ ಖಳನಟನಾಗಿ ಅಬ್ಬರಿಸಿದರು. ಆ ಚಿತ್ರದ ನಂತರ ಅವರಿಗೆ ಸಾಲು ಸಾಲು ಅವಕಾಶಗಳು ಸಿಗಲು ಶುರುವಾಯಿತು. ‘ಕೆಜಿಎಫ್’, ‘ಶುಗರ್ ಲೆಸ್’ ಸೇರಿದಂತೆ ಅನೇಕ ಸಿನಿಮಾದಲ್ಲಿ ಸತ್ಯರಾಜ್ ನಟಿಸಿದ್ದಾರೆ. ‘ಬುದ್ಧಿವಂತ 2’, ‘ಮೆಹಾಬೂಬ’, ‘ಆರ’ ಸಿನಿಮಾಗಳಲ್ಲಿ ಸತ್ಯರಾಜ್ ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ: Harish Raj: ಪ್ಯಾನ್ ಇಂಡಿಯಾ ಸಿನಿಮಾ ‘ಪ್ರೇತ’; ಸ್ವಂತ ಬ್ಯಾನರ್ನಲ್ಲಿ ಹರೀಶ್ ರಾಜ್ ಹೊಸ ಪ್ರಯತ್ನ
‘ಆರ’ ಸಿನಿಮಾ ಜುಲೈ 28ರಂದು ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ಅವರ ಪಾತ್ರದ ಹೆಸರು ದಿಲ್ಲಿ ಕ್ರಿಸ್ಥ. ಇದು ಕೂಡ ಖಡಕ್ ವಿಲನ್ ಪಾತ್ರ. ಈ ಸಿನಿಮಾ ಸಲುವಾಗಿ ಅವರು ತುಳು ಕಲಿತಿದ್ದಾರೆ. ‘ಕಮಲಿ’, ‘ಪದ್ಮಾವತಿ’, ‘ನಾನು ನನ್ನ ಕನಸು’, ‘ಬ್ರಹ್ಮಗಂಟು’, ‘ಶಾಂತಂ ಪಾಪಂ’, ‘ಗೀತಾ’, ‘ಗಟ್ಟಿಮೇಳ’, ‘ತ್ರಿಪುರ ಸುಂದರಿ’, ‘ಕೆಂಡಸಂಪಿಗೆ’ ಮುಂತಾದ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಸತ್ಯರಾಜ್ ಅವರು ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ. ಲಕ್ಷ್ಮೀ ರೈ ಅಭಿನಯದ ‘ಝಾನ್ಸಿ’ ಚಿತ್ರದಲ್ಲಿಯೂ ಅವರು ನಟಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.