ಎಲ್ಲದಕ್ಕೂ ಮೂಲ ಕಾರಣ ಚಿರಂಜೀವಿಯೇ: ಮೂಲ ಮರೆಯದ ಪವನ್ ಕಲ್ಯಾಣ್

Pawan Kalyan: ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಪ್ರೀ ರಿಲೀಸ್ ಇವೆಂಟ್​ಗೆ ಅತಿಥಿಯಾಗಿ ಆಗಮಿಸಿದ್ದ ನಟ ಪವನ್ ಕಲ್ಯಾಣ್, ವೇದಿಕೆ ಮೇಲೆ ಚಿರಂಜೀವಿ ಬಗ್ಗೆ ಭಾವುಕರಾಗಿ ಮಾತನಾಡಿದರು. ರಾಮ್ ಚರಣ್ ಬಗ್ಗೆಯೂ ಹಲವು ವಿಷಯಗಳನ್ನು ಪವನ್ ಕಲ್ಯಾಣ್ ಹಂಚಿಕೊಂಡರು.

ಎಲ್ಲದಕ್ಕೂ ಮೂಲ ಕಾರಣ ಚಿರಂಜೀವಿಯೇ: ಮೂಲ ಮರೆಯದ ಪವನ್ ಕಲ್ಯಾಣ್
Pawan Ram Charan
Follow us
ಮಂಜುನಾಥ ಸಿ.
|

Updated on: Jan 05, 2025 | 9:18 AM

ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಿನ್ನೆ (ಜನವರಿ 04) ಆಂಧ್ರದ ರಾಜಮಂಡ್ರಿಯಲ್ಲಿ ಬಲು ಅದ್ಧೂರಿಯಾಗಿ ನಡೆದಿದೆ. ಕಾರ್ಯಕ್ರಮಕ್ಕೆ ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ, ರಾಮ್ ಚರಣ್ ಅವರ ಚಿಕ್ಕಪ್ಪ ಪವನ್ ಕಲ್ಯಾಣ್ ಅವರು ಅತಿಥಿಯಾಗಿ ಆಗಮಿಸಿದ್ದರು. ಬಿಳಿ ಬಣ್ಣದ ಶರ್ಟ್, ಕುರ್ತಾ ಧರಸಿಯೇ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪವನ್ ಕಲ್ಯಾಣ್ ತಮ್ಮ ಭಾಷಣದಲ್ಲಿ ಹಲವು ವಿಷಯಗಳನ್ನು ಮಾತನಾಡಿದರು. ಪವನ್ ಅವರು ಚಿರಂಜೀವಿ ಅವರ ಬಗ್ಗೆ ಆಡಿದ ಮಾತುಗಳು ಬಹುವಾಗಿ ಗಮನ ಸೆಳೆದವು.

ಭಾಷಣದ ಆರಂಭದಲ್ಲಿ, ನಾವು ಮೂಲಗಳನ್ನು ಎಂದಿಗೂ ಮರೆಯಬಾರದು ಎಂದ ಪವನ್ ಕಲ್ಯಾಣ್, ಭಾರತೀಯ ಚಿತ್ರರಂಗದ ಹಲವು ಮಹನೀಯರನ್ನು ನೆನಪು ಮಾಡಿಕೊಂಡರು. ದಾದಾ ಸಾಹೇಬ್ ಫಾಲ್ಕೆ, ರಾಜ್ ಕಪೂರ್, ರಮೇಶ್ ಸಿಪ್ಪಿ ಸೇರಿದಂತೆ ಇನ್ನೂ ಕೆಲವರನ್ನು ನೆನೆದರು. ಆ ಬಳಿಕ ತೆಲುಗು ಚಿತ್ರರಂಗ ಪ್ರಾರಂಭಿಸಿದ ಮಹನೀಯರನ್ನು ನೆನಪು ಮಾಡಿಕೊಂಡರು. ತೆಲುಗು ಚಿತ್ರರಂಗದ ದಿಗ್ಗಜ ಎನ್​ಟಿಆರ್ ಅವರನ್ನು ಸಹ ನೆನಪು ಮಾಡಿಕೊಂಡರು. ಹಾಗೆಯೇ ಮಾತು ಮುಂದುವರೆಸಿ, ನಾವು ಮೂಲ ಮರೆಯುವುದಿಲ್ಲ, ಇಂದು ನೀವು ಪವನ್ ಕಲ್ಯಾಣ್ ಎನ್ನಿ ರಾಮ್ ಚರಣ್ ಎನ್ನಿ ಏನೇ ಹೇಳಿದರು ಅದೆಲ್ಲದಕ್ಕೂ ಕಾರಣ ನಮ್ಮಣ್ಣ ಮೆಗಾಸ್ಟಾರ್ ಚಿರಂಜೀವಿ ಎಂದರು ಪವನ್ ಕಲ್ಯಾಣ್.

‘ನೀವು ಡಿಸಿಎಂ ಎನ್ನಬಹುದು, ಓಜಿ ಎನ್ನಬಹುದು ಏನೇ ಹೇಳಿದರೂ ಅದಕ್ಕೆಲ್ಲ ಮೆಗಾಸ್ಟಾರ್ ಕಾರಣ. ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿ ಶಿಕ್ಷಣ ಮಾಡುತ್ತಾ ಅದರ ಜೊತೆಗೆ ನಟನಾಗುವ ಕನಸು ಕಂಡು ಭಾರತ ದೇಶವೇ ಮೆಚ್ಚಿನ ನಟ ಆಗಿದ್ದಾರೆ. ರಾಮ್ ಚರಣ್, ಪವನ್ ಕಲ್ಯಾಣ್ ಎಲ್ಲರು ಆ ಮೇಲೆ ಮೂಲ ಚಿರಂಜೀವಿಯೇ’ ಎಂದರು ಪವನ್. ತಮ್ಮ ಭಾಷಣದಲ್ಲಿ ಅಕ್ಕಿನೇನಿ ನಾಗೇಶ್ವರರಾವ್, ಗಟ್ಟಿಮನೇನಿ ಕೃಷ್ಣ, ಶೋಭನ್ ಬಾಬು ಇನ್ನೂ ಕೆಲವು ಮಹನೀಯರನ್ನು ಪವನ್ ನೆನಪಿಸಿಕೊಂಡರು.

ಇದನ್ನೂ ಓದಿ:ವಿಶ್ವ ಮಾನವ ದಿನ: ಕುವೆಂಪು ಜನ್ಮದಿನ ಸ್ಮರಿಸಿದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್

ಚಿರಂಜೀವಿ ಪಟ್ಟ ಕಷ್ಟಗಳನ್ನು ನೆನಪು ಮಾಡಿಕೊಂಡು ಭಾವುಕರಾದ ಪವನ್ ಕಲ್ಯಾಣ್, ‘ನಮ್ಮ ಅಣ್ಣ ಬಹಳ ಕಷ್ಟಪಟ್ಟು ಶ್ರಮಪಟ್ಟು ಅವರು ಬೆಳೆದು ನಮಗೆಲ್ಲ ಆಸರೆಯಾದರು. ಆ ದಿನಗಳಲ್ಲಿ ನನಗೆ ನೆನಪಿದೆ, ಅವರು ಬಹಳ ತಡವಾಗಿ ಮನೆಗೆ ಬರುತ್ತಿದ್ದರು. ಅವರು ಧರಿಸಿದ್ದ ಶೂ ಸಹ ತೆಗೆದುಕೊಳ್ಳಲು ಆಗದಷ್ಟು ಸುಸ್ತಾಗಿರುತ್ತಿದ್ದರು. ನಾನು ಅವರ ಶೂ ತೆಗೆದರೆ ಕಾಲೆಲ್ಲ ಊದಿಕೊಂಡಿರುತ್ತಿತ್ತು. ಅಷ್ಟು ಕಷ್ಟುಪಟ್ಟು ಅವರು ಆಗ ಕೆಲಸಮಾಡಿದವರು. ಅವರನ್ನು ನೋಡಿ ನನ್ನ ಬಗ್ಗೆ ನನಗೆ ನಾಚಿಕೆ ಅನಿಸುತ್ತಿತ್ತು’ ಎಂದಿದ್ದಾರೆ.

ರಾಮ್ ಚರಣ್ ಬಗ್ಗೆ ಮಾತನಾಡಿದ ಪವನ್ ಕಲ್ಯಾಣ್, ‘ರಾಮ್ ಚರಣ್ ಅದ್ಭುತ ಪ್ರತಿಭೆ ಹೊಂದಿದ ಆದರೆ ವಿನಯವಂತವಾಗಿಯೇ ಇರುವ ವ್ಯಕ್ತಿ. ನಾನು ಅವನಿಗೆ ಚಿಕ್ಕಪ್ಪ ಆಗಿದ್ದರೂ ಸಹ ನನಗೆ ತಮ್ಮನ ರೀತಿ ಆತ. ಮೊದಲೆಲ್ಲ ನಾನು ಸೋಫಾನಲ್ಲಿ ಮಲಗಿಕೊಂಡು ಇರುತ್ತಿದ್ದೆ, ಆದರೆ ರಾಮ್ ಚರಣ್ ಬೆಳಿಗ್ಗೆಯೇ ಎದ್ದು ಕುದುರೆ ಸವಾರಿ ಕಲಿಯಲು ಹೋಗುತ್ತಿದ್ದ. ಹೋಗಬೇಕಾದರೆ ನನ್ನನ್ನು ಎಬ್ಬಿಸುತ್ತಿದ್ದ, ನಾನು ಬೈದುಕೊಂಡು ಎದ್ದು ಅವನನ್ನು ಡ್ರಾಪ್ ಮಾಡಲು ಹೋಗುತ್ತಿದ್ದೆ. ಬಹಳ ಸಣ್ಣ ವಯಸ್ಸಿನಿಂದಲೂ ಶಿಸ್ತಿನ ಮನುಷ್ಯ ರಾಮ್ ಚರಣ್. ಆತನಲ್ಲಿ ಇಷ್ಟೋಂದು ಪ್ರತಿಭೆ ಇದೆ ಎಂಬುದು ನಮಗೇ ಗೊತ್ತಿರಲಿಲ್ಲ. ಅಪ್ಪ ಮೆಗಾಸ್ಟಾರ್ ಆದರೆ ಮಗ ಗ್ಲೋಬಲ್ ಸ್ಟಾರ್’ ಎಂದಿದ್ದಾರೆ ಪವನ್ ಕಲ್ಯಾಣ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ