Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗು ಸಿನಿಮಾ ಟಿಕೆಟ್ ದರಗಳ ಹೆಚ್ಚಳ ಯಾಕೆ? ವಿವರಿಸಿದ ಪವನ್ ಕಲ್ಯಾಣ್

Pawan Kalyan: ತೆಲುಗು ಸಿನಿಮಾಗಳ ಟಿಕೆಟ್ ದರಗಳ ಏರಿಕೆ ವಿಷಯ ಆಗಾಗ್ಗೆ ಚರ್ಚೆಗೆ ಬರುತ್ತಲೇ ಇರುತ್ತದೆ. ಇತ್ತೀಚೆಗಷ್ಟೆ ತೆಲಂಗಾಣ ಸರ್ಕಾರ ಟಿಕೆಟ್ ದರ ಹೆಚ್ಚಳಕ್ಕೆ ಬ್ರೇಕ್ ಹಾಕಿದೆ. ಆದರೆ ನಿನ್ನೆ ‘ಗೇಮ್ ಚೇಂಜರ್’ ಇವೆಂಟ್​ನಲ್ಲಿ ಮಾತನಾಡಿದ ಪವನ್ ಕಲ್ಯಾಣ್, ತೆಲುಗು ಸಿನಿಮಾಗಳ ಟಿಕೆಟ್ ದರ ಹೆಚ್ಚಳ ಏಕೆ ಅವಶ್ಯಕ ಎಂದು ತಿಳಿಸಿದ್ದಾರೆ.

ತೆಲುಗು ಸಿನಿಮಾ ಟಿಕೆಟ್ ದರಗಳ ಹೆಚ್ಚಳ ಯಾಕೆ? ವಿವರಿಸಿದ ಪವನ್ ಕಲ್ಯಾಣ್
Ram Charan
Follow us
ಮಂಜುನಾಥ ಸಿ.
|

Updated on: Jan 05, 2025 | 10:34 AM

ತೆಲುಗು ಚಿತ್ರರಂಗದ ಭಾರತದ ಅತ್ಯಂತ ಯಶಸ್ವಿ ಚಿತ್ರರಂಗ. ಕಳೆದ ವರ್ಷ ಬಾಕ್ಸ್​ ಆಫೀಸ್​ನಲ್ಲಿ ಅತಿ ಹೆಚ್ಚು ಹಣ ದೋಚಿದ ಚಿತ್ರರಂಗವೆಂದರೆ ಅದು ತೆಲುಗು ಚಿತ್ರರಂಗ. ಇಡೀ ದೇಶದಲ್ಲಿ ಇಲ್ಲದ ಒಂದು ವ್ಯವಸ್ಥೆ ಸಿನಿಮಾ ಟಿಕೆಟ್​ಗಳ ಕುರಿತಾಗಿ ತೆಲುಗು ರಾಜ್ಯಗಳಾದ ಆಂಧ್ರ ಮತ್ತು ತೆಲಂಗಾಣದಲ್ಲಿ ಇದೆ. ಅದುವೆ ಟಿಕೆಟ್ ಬೆಲೆಯ ಹೆಚ್ಚಳ ಮತ್ತು ಇಳಿಕೆ. ಈ ಟಿಕೆಟ್ ದರಗಳ ಏರಿಳಿತ ಯಾಕೆ ಅವಶ್ಯಕ ಎಂದು ಆಂಧ್ರ ಉಪ ಮುಖ್ಯಮಂತ್ರಿ ಮತ್ತು ಸ್ವತಃ ಸ್ಟಾರ್ ನಟರಾಗಿರುವ ಪವನ್ ಕಲ್ಯಾಣ್ ವಿವರಿಸಿದ್ದಾರೆ.

ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್​ನಲ್ಲಿ ಭಾಗಿಯಾಗಿದ್ದ ಪವನ್ ಕಲ್ಯಾಣ್, ವೇದಿಕೆ ಮೇಲೆಯೇ ‘ಗೇಮ್ ಚೇಂಜರ್’ ಸಿನಿಮಾದ ಟಿಕೆಟ್ ದರ ಹೆಚ್ಚಳ ಮತ್ತು ಹೆಚ್ಚುವರಿ ಶೋಗೆ ಅನುಮತಿ ನೀಡಿರುವುದಾಗಿ ತಿಳಿಸಿದರು. ಅದರ ಜೊತೆಗೆ ಒಂದು ದೊಡ್ಡ ಸಿನಿಮಾಕ್ಕೆ ಟಿಕೆಟ್ ದರದ ಹೆಚ್ಚಳ ಯಾಕೆ ಅವಶ್ಯಕ ಎಂದೂ ಸಹ ಹೇಳಿದರು.

ಸಿನಿಮಾ ಟಿಕೆಟ್ ದರಗಳು ಡಿಮ್ಯಾಂಡ್ ಮತ್ತು ಸಪ್ಲೈ ಮಾದರಿಯನ್ನು ಅನುಸರಿಸುತ್ತಿವೆ. ತೆಲುಗು ಸಿನಿಮಾ ಮೇಕಿಂಗ್​ನ ಸ್ಟಾಂಡರ್ಸ್​ ಹೆಚ್ಚಾಗಿದ್ದು ಹಾಗಾಗಿ ಸಿನಿಮಾಗಳ ಬಜೆಟ್​ ಬಹಳ ಅಧಿಕವಾಗಿದೆ. ಹೀಗಿರುವಾಗ ಸಿನಿಮಾ ಟಿಕೆಟ್ ದರ ಏರಿಕೆ ಎಂಬುದು ಅಗತ್ಯವಾಗುತ್ತದೆ. ಸಿನಿಮಾ ಟಿಕೆಟ್ ದರ ಏರಿಕೆ ಬಗ್ಗೆ ಸಾರ್ವಜನಿಕರಿಗೆ ಋಣಾತ್ಮಕ ಅಭಿಪ್ರಾಯ ಇದ್ದರೂ ಸಹ ಕೆಲವು ಸಿನಿಮಾಗಳಿಗೆ ಟಿಕೆಟ್ ದರ ಏರಿಕೆ ಅಗತ್ಯ ಆಗಿದೆ’ ಎಂದರು ಪವನ್.

ಇದನ್ನೂ ಓದಿ:ಎಲ್ಲದಕ್ಕೂ ಮೂಲ ಕಾರಣ ಚಿರಂಜೀವಿಯೇ: ಮೂಲ ಮರೆಯದ ಪವನ್ ಕಲ್ಯಾಣ್

ತಮ್ಮದೇ ಸಿನಿಮಾದ ಉದಾಹರಣೆ ನೀಡಿದ ಪವನ್ ಕಲ್ಯಾಣ್, ಸಿನಿಮಾ ಟಿಕೆಟ್ ದರದ ಸಮಸ್ಯೆಯಿಂದಾಗಿ ನಮ್ಮ ‘ಭೀಮ್ಲಾ ನಾಯಕ್’ ಸಿನಿಮಾ ತೊಂದರೆ ಅನುಭವಿಸಿತು. ಸಿನಿಮಾಕ್ಕೆ ಹಾಕಿದ್ದ ಬಂಡವಾಳ ವಾಪಸ್ಸಾಗಲಿಲ್ಲ ಎಂದರು. ‘ಭೀಮ್ಲಾ ನಾಯಕ್’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಆಂಧ್ರ ಸಿಎಂ ಜಗನ್, ರಾಜ್ಯದಾದ್ಯಂತ ಚಿತ್ರಮಂದಿರಗಳ ಟಿಕೆಟ್ ದರವನ್ನು ಧಾರುಣವಾಗಿ ತಗ್ಗಿಸಿದ್ದರು.

ಮುಂದುವರೆದು ಮಾತನಾಡಿದ ಪವನ್ ಕಲ್ಯಾಣ್, ‘ನಮ್ಮ ಸರ್ಕಾರ ಯಾವುದೇ ಸಿನಿಮಾ ತಾರೆಯ ಬಗ್ಗೆ ಪೂರ್ವಾಗ್ರಹ ಪೀಡಿತವಾಗಿಲ್ಲ. ಎಷ್ಟೋ ಮಂದಿ ನಟರು ನಮಗೆ ಬೆಂಬಲ ನೀಡಿಲ್ಲ ಹಾಗೆಂದು ನಾವು ಅವರ ವಿರುದ್ಧ ನಿಂತಿಲ್ಲ. ಚಿತ್ರರಂಗಕ್ಕೆ ರಾಜಕೀಯ ಸೋಕಬಾರದು ಆ ಕಾರ್ಯವನ್ನು ನಮ್ಮ ಸರ್ಕಾರ ಮಾಡುವುದಿಲ್ಲ. ಚಿತ್ರರಂಗದಲ್ಲಿ ರಾಜಕೀಯ ಇರಬಾರದು, ಚಿತ್ರರಂಗ ಪ್ರತ್ಯೇಕವಾಗಿ, ಸ್ವತಂತ್ರ್ಯವಾಗಿರಬೇಕು’ ಎಂದಿದ್ದಾರೆ ಪವನ್ ಕಲ್ಯಾಣ್.

ನೆರೆಯ ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ, ಚಿತ್ರರಂಗಕ್ಕೆ ನೀಡಲಾಗುತ್ತಿದ್ದ ಟಿಕೆಟ್ ದರ ಹೆಚ್ಚಳ, ವಿಶೇಷ ಶೋ ಎಲ್ಲವನ್ನೂ ರದ್ದು ಮಾಡಿದೆ. ಮಾತ್ರವಲ್ಲದೆ ಚಿತ್ರರಂಗದ ಮೇಲೆ ಜಿದ್ದಿಗೆ ಬಿದ್ದಂತೆ ವರ್ತಿಸುತ್ತಿದೆ. ಹಾಗಾಗಿ ಪವನ್ ಕಲ್ಯಾಣ್, ತಮ್ಮ ಸರ್ಕಾರ ಹೀಗೆ ಮಾಡುವುದಿಲ್ಲ ಎಂಬ ಭರವಸೆ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ