ಮೊಹಮ್ಮದ್ ಶಮಿ ಎದುರು ಮದುವೆ ಪ್ರಸ್ತಾಪ ಇಟ್ಟ ನಟಿ; ಷರತ್ತು ಪೂರೈಸಲೇಬೇಕು..
ಪಾಯಲ್ ಘೋಷ್ ಅವರು ಚಿತ್ರರಂಗದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಅವರು ಬೆರಳೆಣಿಕೆ ಸಿನಿಮಾ ಮಾಡಿದ್ದಾರೆ. 2010ರಲ್ಲಿ ‘ವರ್ಷಧಾರೆ’ ಹೆಸರಿನ ಕನ್ನಡ ಸಿನಿಮಾದಲ್ಲೂ ನಟಿಸಿದ್ದರು. ಆ ಬಳಿಕ ತೆಲುಗು, ಹಿಂದಿಯಲ್ಲಿ ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡಿದ್ದಾರೆ.
ಟೀಂ ಇಂಡಿಯಾದ ಪ್ರಬಲ ಬೌಲರ್ ಮೊಹಮ್ಮದ್ ಶಮಿ (Mohammed Shami) ವಿಶ್ವ ಕಪ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ತಮ್ಮ ಬೌಲಿಂಗ್‌ನಿಂದ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ವಿಶ್ವಕಪ್‌ನಲ್ಲಿ ಆಡಿದ ಕೆಲವೇ ಮ್ಯಾಚ್ಗಳಲ್ಲಿ ಹಲವು ವಿಕೆಟ್ ಪಡೆದಿದ್ದಾರೆ. ಅವರು ವೈಯಕ್ತಿಕ ಜೀವನದ ಕಾರಣದಿಂದಲೂ ಸುದ್ದಿಯಲ್ಲಿದ್ದಾರೆ. ಅವರು ಪತ್ನಿಯಿಂದ ವಿಚ್ಛೇದನ ಪಡೆದಿದ್ದಾರೆ. ಈ ಬೆನ್ನಲ್ಲೇ ಅವರಿಗೆ ಖ್ಯಾತ ನಟಿಯೊಬ್ಬರಿಂದ ಮದುವೆ ಪ್ರಸ್ತಾಪ ಬಂದಿದೆ. ಈ ವಿಚಾರ ಸದ್ಯ ಚರ್ಚೆ ಆಗುತ್ತಿದೆ. ಮೊಹಮ್ಮದ್ ಶಮಿ ಅವರನ್ನು ಮದುವೆ ಆಗುತ್ತೇನೆ ಎಂದು ಮುಂದೆ ಬಂದ ನಟಿ ಬೇರಾರೂ ಅಲ್ಲ ಪಾಯಲ್ ಘೋಷ್.
ಪಾಯಲ್ ಘೋಷ್ ಅವರು ಚಿತ್ರರಂಗದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಅವರು ಬೆರಳೆಣಿಕೆ ಸಿನಿಮಾ ಮಾಡಿದ್ದಾರೆ. 2010ರಲ್ಲಿ ‘ವರ್ಷಧಾರೆ’ ಹೆಸರಿನ ಕನ್ನಡ ಸಿನಿಮಾದಲ್ಲೂ ನಟಿಸಿದ್ದರು. ಆ ಬಳಿಕ ತೆಲುಗು, ಹಿಂದಿಯಲ್ಲಿ ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡಿದ್ದಾರೆ. ಈಗ ಅವರು ಮೊಹಮ್ಮದ್ ಶಮಿಯನ್ನು ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ನಟಿ ಷರತ್ತನ್ನೂ ವಿಧಿಸಿದ್ದಾರೆ.
ಇತ್ತೀಚೆಗೆ ಪಾಯಲ್ ಘೋಷ್ ಟ್ವೀಟ್ ಮಾಡಿದ್ದಾರೆ. ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಶಮಿಯ ಬಗ್ಗೆ ಅವರು ಮೆಚ್ಚುಗೆ ಸೂಚಿಸಿದ್ದಾರೆ. ‘ಶಮಿ ನೀವು ಇಂಗ್ಲಿಷ್ ಕಲಿತರೆ ನಾನು ನಿಮ್ಮನ್ನು ಮದುವೆಯಾಗಲು ಸಿದ್ಧ’ ಎಂದು ಪಾಯಲ್ ಘೋಷ್ ಮಾಡಿರುವ ಟ್ವೀಟ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮತ್ತೊಂದು ಟ್ವೀಟ್ನಲ್ಲಿ, ‘ಶಮಿ ಅವರೇ ಸೆಮಿಫೈನಲ್‌ನಲ್ಲಿ ನೀವು ಅತ್ಯುತ್ತಮ ಪ್ರದರ್ಶನ ನೀಡಲು ನನ್ನಿಂದ ಯಾವ ರೀತಿಯ ನೈತಿಕ ಬೆಂಬಲ ಬೇಕು? ನೀವು ಹೀರೋ ಆಗುವುದನ್ನು ನೋಡಬೇಕು’ ಎಂದು ಪಾಯಲ್ ಪೋಸ್ಟ್ ಮಾಡಿರುವುದು ಸದ್ಯ ಚರ್ಚೆಗೆ ಗ್ರಾಸವಾಗಿದೆ.
#Shami Tum apna English sudharlo, I’m ready to marry you 🤣🤣
— Payal Ghoshॐ (@iampayalghosh) November 2, 2023
ಪಾಯಲ್ ನಿಜವಾಗಿಯೂ ಮೊಹಮ್ಮದ್ ಶಮಿಯ ಅಭಿಮಾನಿಯೇ ಅಥವಾ ಪ್ರಚಾರಕ್ಕಾಗಿ ಅವರು ಈ ರೀತಿ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಇವರನ್ನು ಅನೇಕರು ಊರ್ವಶಿ ರೌಟೇಲಾಗೆ ಹೋಲಿಕೆ ಮಾಡಿದ್ದಾರೆ.
ಇದನ್ನೂ ಓದಿ: ‘ಚೆನ್ನಾಗಿ ಆಡಿದರೆ ನಮ್ಮ ಭವಿಷ್ಯಕ್ಕೆ ಒಳ್ಳೆಯದು’: ಅಚ್ಚರಿಯ ಹೇಳಿಕೆ ನೀಡಿದ ಮೊಹಮ್ಮದ್ ಶಮಿ ಮಾಜಿ ಪತ್ನಿ
ಮೊಹಮ್ಮದ್ ಶಮಿ ಹಸಿನ್ ಜಹಾನ್ ಅವರನ್ನು ಮದುವೆಯಾಗಿದ್ದರು. ಮದುವೆಯ ನಂತರ ಹಸಿನ್ ಕ್ರಿಕೆಟಿಗನ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಇಬ್ಬರ ನಡುವಿನ ವಿವಾದಗಳು ಇಂದಿಗೂ ಚರ್ಚೆಯಾಗುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ