‘ಜನ ನಾಯಗನ್’ ಸಿನಿಮಾದ ಓವರ್ಸೀಸ್ ವಿತರಣೆ ಹಕ್ಕು ‘ಪಿಹೆಚ್ಎಫ್ ಫಿಲ್ಮ್’ ತಕ್ಕೆಗೆ
ದಳಪತಿ ವಿಜಯ್ ಅಭಿನಯದ ‘ಜನ ನಾಯಗನ್’ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಇದು ಅವರ ಕೊನೇ ಸಿನಿಮಾ ಎಂಬ ಕಾರಣದಿಂದಲೂ ಹೈಪ್ ಜಾಸ್ತಿ ಆಗಿದೆ. ಬಿಡುಗಡೆಗೂ ಮೊದಲೇ ‘ಜನ ನಾಯಗನ್’ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ಈ ಸಿನಿಮಾದ ವಿತರಣೆ ಹಕ್ಕುಗಳಿಗೆ ಸಖತ್ ಬೇಡಿಕೆ ಬಂದಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಕಾಲಿವುಡ್ ನಟ ದಳಪತಿ ವಿಜಯ್ ಅಭಿನಯದ ಸಿನಿಮಾಗಳು ಬಿಡುಗಡೆ ಆಗುವಾಗ ಒಂದಷ್ಟು ದಾಖಲೆಗಳು ನಿರ್ಮಾಣ ಆಗುತ್ತವೆ. ಈಗ ಅವರು ರಾಜಕೀಯದ ಕಡೆಗೆ ಗಮನ ಹರಿಸಿದ್ದಾರೆ. ಹಾಗಾಗಿ ಅವರ ಕೊನೇ ಸಿನಿಮಾ ‘ಜನ ನಾಯಗನ್’ ಮೇಲೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈ ಸಿನಿಮಾಗೆ ಬಂಡವಾಳ ಹೂಡುತ್ತಿರುವುದು ಕರ್ನಾಟಕದ ನಿರ್ಮಾಣ ಸಂಸ್ಥೆ ‘ಕೆವಿಎನ್ ಪ್ರೊಡಕ್ಷನ್ಸ್’ ಎಂಬುದು ವಿಶೇಷ. ವೆಂಕಟ್ ಕೆ. ನಾರಾಯಣ್ ಅವರು ಈ ಚಿತ್ರವನ್ನು ದೊಡ್ಡ ಬಜೆಟ್ನಲ್ಲಿ ನಿರ್ಮಿಸುತ್ತಿದ್ದಾರೆ.
ಈಗಾಗಲೇ ಪೋಸ್ಟರ್ ಮೂಲಕ ‘ಜನ ನಾಯಗನ್’ ಸಿನಿಮಾ ಕುತೂಹಲ ಹೆಚ್ಚಿಸಿದೆ. ಈಗ ಸಿನಿಮಾ ಬಗ್ಗೆ ಕೇಳಿಬರುತ್ತಿವ ಅಪ್ಡೇಟ್ಗಳು ಕೂಡ ನಿರೀಕ್ಷೆಯನ್ನು ಜಾಸ್ತಿ ಮಾಡುತ್ತಿವೆ. ‘ಜನ ನಾಯಗನ್’ ಚಿತ್ರದ ಓವರ್ಸೀಸ್ ವಿತರಣೆ ಹಕ್ಕುಗಳನ್ನು ‘ಪಿಹೆಚ್ಎಫ್ ಫಿಲ್ಮ್’ ಸಂಸ್ಥೆ ಪಡೆದುಕೊಂಡಿದೆ. ದೊಡ್ಡ ಮೊತ್ತಕ್ಕೆ ವಿತರಣೆ ಹಕ್ಕಗಳು ಮಾರಾಟ ಆಗಿವೆ ಎಂದು ಚಿತ್ರತಂಡ ಹೇಳಿದೆ.
ಕಾಲಿವುಡ್ ಫೇಮಸ್ ನಿರ್ದೇಶಕ ಹೆಚ್. ವಿನೋದ್ ಅವರು ‘ಜನ ನಾಯಗನ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಈ ಸಿನಿಮಾಗೆ ಅನಿರುದ್ಧ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸತ್ಯನ್ ಸೂರ್ಯನ್ ಅವರ ಛಾಯಾಗ್ರಹಣ ಈ ಸಿನಿಮಾಗೆ ಇರಲಿದೆ. ಅನಲ್ ಅರಸು ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಯಾವುದಕ್ಕೂ ಕೊರತೆ ಆಗದಂತೆ ನಿರ್ಮಾಪಕ ವೆಂಕಟ್ ಕೆ. ನಾರಾಯಣ್ ಅವರು ಭಾರಿ ಬಂಡವಾಳ ಹೂಡಿದ್ದಾರೆ.
ದೊಡ್ಡ ಪ್ರಮಾಣದಲ್ಲಿ ‘ಜನ ನಾಯಗನ್’ ಸಿನಿಮಾ ನಿರ್ಮಾಣ ಆಗುತ್ತಿದೆ. ಅದ್ದೂರಿಯಾದ ಸೆಟ್ಗಳು, ಅತ್ಯಾಧುನಿಕ ವಿಎಫ್ಎಕ್ಸ್ ಹಾಗೂ ಅಪಾರ ಸಂಖ್ಯೆಯ ಜನರನ್ನು ಸೇರಿಸಿ ಶೂಟಿಂಗ್ ಮಾಡಲು ಸಿದ್ಧತೆ ನಡೆದಿದೆ. ದೊಡ್ಡ ದೊಡ್ಡ ಪ್ರಾಜೆಕ್ಟ್ಗಳನ್ನು ನಿರ್ಮಾಣ ಮಾಡುತ್ತಿರುವ ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಯು ಈ ಸಿನಿಮಾಗೆ ಬಂಡವಾಳ ಹೂಡುತ್ತಿರುವುದರಿಂದ ನಿರೀಕ್ಷೆ ಡಬಲ್ ಆಗಿದೆ.
ಇದನ್ನೂ ಓದಿ: ವಿಜಯ್ ಕೊನೆಯ ಸಿನಿಮಾ ಸ್ಮರಣೀಯಗೊಳಿಸಲಿರುವ ಕೆವಿಎನ್
ವೆಂಕಟ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು ಗಣೇಶ್ ಅಭಿನಯದ ‘ಸಖತ್’ ಮೂಲಕ. ಆ ಬಳಿಕ ‘ಬೈ ಟು ಲವ್’ ಸಿನಿಮಾ ನಿರ್ಮಾಣ ಮಾಡಿದರು. ಈಗ ‘ಕೆವಿಎನ್ ಪ್ರೊಡಕ್ಷನ್ಸ್’ ಮೂಲಕ ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾ ಸಿದ್ಧವಾಗಿದೆ. ಇನ್ನು, ಯಶ್ ನಟಿಸುತ್ತಿರುವ ‘ಟಾಕ್ಸಿಕ್’ ಸಿನಿಮಾ ಮೂಡಿಬರುತ್ತಿರುವುದು ಕೂಡ ಇದೇ ‘ಕೆವಿಎನ್ ಪ್ರೊಡಕ್ಷನ್ಸ್’ ಮೂಲಕ. ಈ ಸಿನಿಮಾಗಾಗಿ ಇಡೀ ದೇಶವೇ ಕಾಯುತ್ತಿದೆ. ಗೀತು ಮೋಹನ್ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸಣ್ಣ ಟೀಸರ್ನಿಂದಲೇ ‘ಟಾಕ್ಸಿಕ್’ ಚಿತ್ರ ಧೂಳೆಬ್ಬಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.