
ಪೂಜಾ ಹೆಗ್ಡೆ ಮುಟ್ಟಿದ್ದೆಲ್ಲ ಚಿನ್ನ ಆಗುತ್ತಿದ್ದ ಕಾಲ ಒಂದಿತ್ತು. ಆದರೆ, ಈಗ ಅದು ಬದಲಾಗಿದೆ. ಇತ್ತೀಚೆಗೆ ಅವರಿಗೆ ಅದೃಷ್ಟ ಕೈ ಕೊಟ್ಟಿದೆ. ‘ಆಚಾರ್ಯ’, ‘ರಾಧೆ ಶ್ಯಾಮ್’, ‘ಕಿಸಿ ಕ ಭಾಯ್ ಕಿಸಿ ಜಾನ್’, ‘ಸರ್ಕಸ್’ ಹೀಗೆ ಅವರ ಸೋಲಿನ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಕಾರಣಕ್ಕೆ 2024ರಲ್ಲಿ ಅವರ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ! ಒಪ್ಪಿಕೊಂಡ ಸಿನಿಮಾಗಳಿಂದ ಹಿಂದೆ ಬಂದಿದ್ದೇ ಇದಕ್ಕೆ ಕಾರಣ. ಈಗ ಅವರು ಒಂದು ಗಟ್ಟಿ ನಿರ್ಧಾರ ಮಾಡಿದ್ದಾರೆ. ವೃತ್ತಿ ಜೀವನದ ಸ್ಥಿತಿ ಬದಲಿಸಿಕೊಳ್ಳುವ ಆಶಯ ಹೊಂದಿದ್ದಾರೆ.
‘ದೇವ’ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಟಿಸಿದ್ದರು. ಈ ಸಿನಿಮಾ ಮೊದಲ ದಿನ ಕಲೆಕ್ಷನ್ ಮಾಡಿದ್ದು ಕೇವಲ 5 ಕೋಟಿ ರೂಪಾಯಿ. ಈ ಚಿತ್ರದ ಒಟ್ಟೂ ಬಜೆಟ್ 50 ಕೋಟಿ ರೂಪಾಯಿ. ಆದರೆ, ಗಳಿಕೆ ಮಾತ್ರ 5 ಕೋಟಿ ರೂಪಾಯಿ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ಚಿತ್ರದಿಂದ ಅವರು ಮತ್ತೊಂದು ಸೋಲು ಕಂಡರಾ ಎನ್ನುವ ಪ್ರಶ್ನೆ ಮೂಡಿದೆ. ಸದ್ಯ ಅವರು ದುಲ್ಖರ್ ಜೊತೆ ನಟಿಸಲಿದ್ದಾರಂತೆ.
ದುಲ್ಖರ್ ಸಲ್ಮಾನ್ ಅವರು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ಒಂದು ಸ್ಕ್ರಿಪ್ಟ್ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದರೆ ಆ ಸಿನಿಮಾ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಬಹುದು. ಈಗ ದುಲ್ಕರ್ಗೆ ಪೂಜಾ ಜೊತೆ ಆಗುತ್ತಿದ್ದಾರೆ. ಈ ಚಿತ್ರದಿಂದ ಆದರೂ ಅವರಿಗೆ ಗೆಲುವು ಸಿಗಲಿದೆಯೇ ಎನ್ನುವ ಪ್ರಶ್ನೆ ಮೂಡುವಂತೆ ಆಗಿದೆ.
ಇದನ್ನೂ ಓದಿ:ನಟಿ ಪೂಜಾ ಹೆಗ್ಡೆ ಧರಿಸಿರುವ ಈ ಗ್ಲಾಮರಸ್ ಉಡುಗೆಯ ಬೆಲೆ ಕೆಲ ಸಾವಿರಗಳು
ದುಲ್ಖರ್ ಸಲ್ಮಾನ್ ಎಲ್ಲಾ ರೀತಿಯ ಪಾತ್ರ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ರೊಮ್ಯಾಂಟಿಕ್ ಚಿತ್ರಗಳಲ್ಲೂ ಅವರು ನಟಿಸಿದ್ದಾರೆ. ಈ ಚಿತ್ರಕ್ಕೆ ಪೂಜಾ ಹೆಗ್ಡೆ ಸೂಕ್ತ ಎಂಬ ನಿರ್ಧಾರೆಕ್ಕೆ ನಿರ್ಮಾಪಕರು ಬಂದಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ಅವರಿಗೆ ಸಿನಿಮಾ ಆಫರ್ ನೀಡಿದ್ದಾರೆ. ಈ ಚಿತ್ರದ ಮೂಲಕವಾದರೂ ಅವರು ಗೆಲುವು ಕಾಣುವರೇ ಎನ್ನುವ ಪ್ರಶ್ನೆ ಮೂಡಿದೆ.
ಕಾರ್ತಿಕ್ ಸುಬ್ಬರಾಜು ನಿರ್ದೇಶನದ, ಸೂರ್ಯ ನಟನೆಯ ‘ರೆಟ್ರೋ’ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿ. ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರಕ್ಕೂ ಪೂಜಾ ಹೆಗ್ಡೆ ಅವರೇ ಹೀರೋಯಿನ್. ಅವರು ಬ್ಯಾಕ್ ಟು ಬ್ಯಾಕ್ ಎರಡು ತಮಿಳು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ